ಪ್ರಪಂಚದ ಅತಿ ಚಿಕ್ಕ ಟಚ್ ಪರದೆ ಫೋನ್ ವಿಫೋನ್ ಎಸ್8 ಬಗ್ಗೆ ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.
ಪ್ರಪಂಚವು ದೊಡ್ಡ ಪರದೆಯ ಫೋನುಗಳತ್ತ ಮುಖಮಾಡಿದ್ದರೆ, ಇಲ್ಲೊಂದು ಕಂಪನಿಯು ಪ್ರಪಂಚದ ಅತಿ ಚಿಕ್ಕ ಟಚ್ ಪರದೆ ಮೊಬೈಲನ್ನು ಜನರಿಗೆ ಪರಿಚಯಿಸುತ್ತಿದೆ.

2010 ಸ್ಥಾಪನೆಯಾದ ಚೀನಾದ ಕಂಪನಿ ವಿಫೋನ್ ಪ್ರಪಂಚದ ಅತಿ ಚಿಕ್ಕ ಮೊಬೈಲನ್ನು ಪರಿಚಯಿಸಿದೆ. ಇದು ನೋಡುವುದಕ್ಕೆ ಸ್ಮಾರ್ಟ್ ವಾಚ್ ರೀತಿ ಕಾಣಿಸುತ್ತದೆ, ಕೆಲಸವೆಲ್ಲ ಸ್ಮಾರ್ಟ್ ಫೋನ್ ರೀತಿಯಲ್ಲಿ. ಇದರಲ್ಲಿ ಪುಟ್ಟ ಟಚ್ ಪರದೆಯಿದೆ, ಮಿನಿ ಸಿಮ್ ಕಾರ್ಡ್ ಸ್ಲಾಟ್ ಇದೆ ಮತ್ತು ಸ್ಮಾರ್ಟ್ ಫೋನುಗಳಲ್ಲಿರುವ ಎಲ್ಲಾ ವಿಶೇಷತೆಗಳೂ ಇದರಲ್ಲಿದೆ.
ಓದಿರಿ: ಏರ್‌ಟೆಲ್‌ನಲ್ಲಿ ಉಚಿತ 3ಜಿಬಿ ಡೇಟಾ ಪಡೆದುಕೊಳ್ಳುವುದು ಹೇಗೆ?
ಭಾರತದ ಮಾರುಕಟ್ಟೆಯಲ್ಲಿ ಇದು ಲಭ್ಯವಾಗುವ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನೂ ನೀಡಿಲ್ಲ. ಆದರೆ ಕಂಪನಿಯು ಭಾರತದಲ್ಲಿ ಮುಂದೆ ಬಿಡುಗಡೆಗೊಳಿಸುವ ಎಲ್ಲಾ ಸಾಧ್ಯತೆಗಳೂ ಇದೆ. ಪ್ರಪಂಚದ ಅತಿ ಚಿಕ್ಕ ಟಚ್ ಫೋನಿನ ಬಗ್ಗೆ ನಿಮಗೆ ತಿಳಿದಿರಬೇಕಾದ ಸಕಲ ಮಾಹಿತಿಗಳೂ ಇಲ್ಲಿದೆ. ಒಮ್ಮೆ ಗಮನಿಸಿ.

ಸ್ಮಾರ್ಟ್ ವಾಚಿನಷ್ಟು ಚಿಕ್ಕದು.
ವಿಫೋನ್ ಎಸ್8 ನೋಡುವುದಕ್ಕೆ ಪಟ್ಟಿಯಿಲ್ಲದ ಸ್ಮಾರ್ಟ್ ವಾಚಿನಂತೆಯೇ ಇದೆ. 46.77x37.3x9.9 ಮಿಮಿ ಗಾತ್ರವಿರುವ ಈ ಫೋನಿನ ತೂಕ 30 ಗ್ರಾಂಗಳು ಮಾತ್ರ. ಇದು ಪಟ್ಟಿಯಿಲ್ಲದ ಆ್ಯಪಲ್ ವಾಚಿನ ಡಯಲ್ ರೀತಿ ಕಾಣುತ್ತದೆ. ಅಲ್ಯುಮಿನಿಯಂ ಮೆಗ್ನೀಷಿಯಂ ಅಲಾಯ್ ಇಂದ ಮಾಡಲ್ಪಟ್ಟಿದೆ ಮತ್ತು ಪರದೆಯ ಕೆಳಗೆ ಮೂರು ಕೆಪಾಸಿಟೇಟಿವ್ ಬಟನ್ ಗಳಿವೆ.
380ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದೆ; ಮಿನಿ ಸಿಮ್ ಕಾರ್ಡ್ ಹಾಕುವ ಸೌಕರ್ಯವಿದೆ.

1.54 ಇಂಚಿನ ಟಚ್ ಪರದೆ.
ವಿಫೋನ್ ಎಸ್8ರಲ್ಲಿ 1.54 ಇಂಚಿನ ಟಚ್ ಪರದೆಯಿದೆ, 2.5ಡಿ ಕರ್ವ್ಡ್ ಗಾಜಿನ ಪರದೆಯಿದು. ಪರದೆಯಲ್ಲಿ ಸಮಯ, ಒಳಬರುವ ಕರೆಗಳು, ಸಂದೇಶಗಳು ಮತ್ತು ಇನ್ನೂ ಅನೇಕ ಉಪಯುಕ್ತ ಮಾಹಿತಿಯನ್ನು ನೋಡಬಹುದು.

ಆ್ಯಂಡ್ರಾಯ್ಡ್ ಮತ್ತು ಐ.ಒ.ಎಸ್ ಬೆಂಬಲ.
ಮೊದಲೇ ಹೇಳಿದಂತೆ ಎಸ್8 ನಿಮ್ಮ ಪ್ರಾಥಮಿಕ ಸ್ಮಾರ್ಟ್ ಫೋನಿನ ವಿಸ್ತರಣೆ. ಇದರಲ್ಲಿರುವ ಸೇವೆಗಳನ್ನು ಬಳಸಿಕೊಳ್ಳಲು ನೀವು ಇದನ್ನು ನಿಮ್ಮ ಸ್ಮಾರ್ಟ್ ಫೋನಿಗೆ ಸಂಪರ್ಕಿಸಬೇಕು. ವಿಫೋನ್ ಎಸ್8 ಆ್ಯಂಡ್ರಾಯ್ಡ್ ಮತ್ತು ಐ.ಒ.ಎಸ್ ಬೆಂಬಲ ನೀಡುತ್ತದೆ.
ಬ್ಲೂಟೂಥ್ ಮೂಲಕ ನಿಮ್ಮ ಮೊಬೈಲನ್ನು ಎಸ್8ಕ್ಕೆ ಸಂಪರ್ಕಿಸಿ ಕರೆಗಳನ್ನು ಸ್ವೀಕರಿಸಬಹುದು, ಸಂದೇಶಗಳನ್ನು ಓದಬಹುದು, ಮರುತ್ತರ ಕೊಡಬಹುದು ಮತ್ತು ಸಾಮಾಜಿಕ ಜಾಲತಾಣಗಳ ತಂತ್ರಾಂಶಗಳನ್ನು ಉಪಯೋಗಿಸಬಹುದು.

ಕಡಿಮೆ ಮಟ್ಟದ ಹಾರ್ಡ್ ವೇರ್.
ಇದು ನಿಮ್ಮ ಪ್ರಾಥಮಿಕ ಫೋನಿನ ವಿಸ್ತರಣೆಯಷ್ಟೇ ಆಗಿರುವುದರಿಂದ, ಇದರಲ್ಲಿ ಉನ್ನತ ಹಾರ್ಡ್ ವೇರ್ ಅವಶ್ಯಕವಲ್ಲ. ಇದರಲ್ಲಿ 128 ಎಂಬಿ ರಾಮ್ ಇದೆ, 64 ಎಂಬಿ ರ್ಯಾಮ್ ಇದೆ. ಜೊತೆಗೆ ಎಸ್8 8ಜಿಬಿವರೆಗಿನ ಎಸ್.ಡಿ ಕಾರ್ಡ್ ಅನ್ನು ಬೆಂಬಲಿಸುತ್ತದೆ. ಎಂಟಿ2502 ಪ್ರೊಸೆಸರ್ ಇದರಲ್ಲಿದೆ.

ಉತ್ತಮ ಸೆನ್ಸಾರ್ ಮತ್ತು ಸಂಪರ್ಕ ವ್ಯವಸ್ಥೆಗಳು.
ಸಂಪರ್ಕದ ವಿಷಯಕ್ಕೆ ಬಂದರೆ ಎಸ್8ರಲ್ಲಿ ಬ್ಲೂಟೂಥ್ 4.0, ಐದು ಪಿನ್ನಿನ ಯು.ಎಸ್.ಬಿ, ಯು.ಎಸ್.ಬಿ 2.0 ಮತ್ತು ಎಫ್.ಎಂ ರೇಡಿಯೋ ಇದೆ. ಸ್ಮಾರ್ಟ್ ಫೋನಿನಲ್ಲಿ ಬೆಳಕಿನ ಸಂವೇದಕ, ಎದೆ ಬಡಿತದ ಮಾಪಕ ಮತ್ತು ಮೋಷನ್ ಚಿಪ್ ಇದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








