ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದಿರಾ?.ಹಾಗಿದ್ರೆ ಸ್ವಲ್ಪ ಕಾಯಿರಿ!

|

ಸ್ಮಾರ್ಟ್‌ಫೋನ್‌ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನ ಸೇರ್ಪಡೆ ಆಗುತ್ತಲೇ ಸಾಗಿದ್ದು, ಮೊಬೈಲ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್‌ಗಳು ಗ್ರ್ಯಾಂಡ್ ಎಂಟ್ರಿ ಪಡೆದುಕೊಳ್ಳುತ್ತಿವೆ. ಗ್ರಾಹಕರಿಗೆ ಅವರಿಗೆ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಮಾದರಿಗಳಲ್ಲಿ ದೊರೆಯುತ್ತಿದ್ದು, ಸದ್ಯ ಹೊಸ ಸ್ಮಾರ್ಟ್‌ಪೋನ್‌ ಖರೀದಿಸುವವರಿದ್ದರೇ ಸ್ವಲ್ಪ ಕಾಯಿರಿ. ಏಕೆಂದರೇ ಈ ತಿಂಗಳು (ಮೇ) ಭಾರಿ ಅಚ್ಚರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದಿರಾ?.ಹಾಗಿದ್ರೆ ಸ್ವಲ್ಪ ಕಾಯಿರಿ!

ಹೌದು, ಪ್ರಸಕ್ತ ತಿಂಗಳಲ್ಲಿ ಸ್ಯಾಮ್‌ಸಂಗ್, ಒನ್‌ಪ್ಲಸ್‌, ಹಾನರ್‌, ಒಪ್ಪೊ, ಸೇರಿದಂತೆ ಇತರೆ ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ರಿಲೀಸ್‌ ಆಗುವ ನಿರೀಕ್ಷೆಗಳಿದ್ದು. ಸ್ಮಾರ್ಟ್‌ಫೋನ್‌ ಪ್ರಿಯರ ಕುತೂಹಲ ಹೆಚ್ಚಿಸಿವೆ. ಮಾರುಕಟ್ಟೆಯಲ್ಲಿ ಈಗಾಗಲೇ ಬೆಸ್ಟ್‌ ಫೋನ್‌ಗಳು ಲಭ್ಯವಿದ್ದು, ಬರುವ ಹೊಸ ಫೋನ್‌ಗಳು ಮತ್ತಷ್ಟು ವಿಶೇಷತೆಗಳನ್ನು ಹೊಂದಿರಲಿವೆ ಎನ್ನಲಾಗುತ್ತಿದೆ. ಹಾಗಾದರೇ ಈ ತಿಂಗಳಲ್ಲಿ (ಮೇ) ಲಾಂಚ್‌ ಆಗಲಿರುವ ಪ್ರಮುಖ 5 ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ 7 ಶ್ರೇಣಿ

ಒನ್‌ಪ್ಲಸ್‌ 7 ಶ್ರೇಣಿ

ಒನ್‌ಪ್ಲಸ್‌ ಕಂಪನಿಯ ಬಹುನಿರೀಕ್ಷಿತ ಒನ್‌ಪ್ಲಸ್‌ 7 ಮತ್ತು ಒನ್‌ಪ್ಲಸ್‌ 7 ಪ್ರೋ ಸ್ಮಾರ್ಟ್‌ಫೋನ್‌ಗಳು ಇದೇ ಮೇ 14ರಂದು ಲಾಂಚ್‌ ಆಗಲಿವೆ. ದೇಶಿಯ ಮಾರುಕಟ್ಟೆ ಮುಖ್ಯವಾಗಿದ್ದು, ಹೀಗಾಗಿ ಕಂಪನಿಯು ಲಾಂಚ್‌ ನಂತರ ಬಹುಬೇಗನೆ ಸೇಲ್ ಆರಂಭಿಸಲಿದೆ ಎನ್ನಲಾಗುತ್ತಿದೆ. ಒನ್‌ಪ್ಲಸ್‌ 7 ಪ್ರೊ ಹೈ ಎಂಡ್‌ ಮಾದರಿಯಲ್ಲಿದ್ದು, OLED ದಿಸ್‌ಪ್ಲೇ, ಫಿಂಗರ್ ಸೆನ್ಸಾರ್‌ ಹೊಂದಿರಲಿದೆ. ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಇರಲಿದೆ. ಹಾಗೇ ಒನ್‌ಪ್ಲಸ್‌ 7 ನಾಚ್‌ಲೆಸ್‌ ಡಿಸ್‌ಪ್ಲೇಯನ್ನು ಹೊಂದಿದೆ.

ಒಪ್ಪೊ ರೆನೊ 10x ಝೂಮ್

ಒಪ್ಪೊ ರೆನೊ 10x ಝೂಮ್

ಒಪ್ಪೊ ಕಂಪನಿಯ ಸಬ್‌ಬ್ಯ್ರಾಂಡ್ ರೆನೊ ಈಗಾಗಲೇ ಯುವಸಮೂಹ ಗ್ರಾಹಕರನ್ನು ಆಕರ್ಷಿಸಿದ್ದು, ಈ ತಿಂಗಳ ದೇಶಿಯ ಮಾರುಕಟ್ಟೆಯಲ್ಲಿ ಸೇಲ್‌ ಆರಂಭಿಸುವ ಸಾಧ್ಯತೆಗಳಿವೆ. ಶಾರ್ಕ್‌ ಫಿನ್ ಸ್ಟೈಲ್‌ನಲ್ಲಿ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, 6.6 ಇಂಚಿನ amoled ಡಿಸ್‌ಪ್ಲೇ ಹೊಂದಿದೆ. ಹಾಗೇ ತ್ರಿವಳಿ ಕ್ಯಾಮೆರಾವನ್ನು ಹೊಂದಿದ್ದು, ಪ್ರಮುಖ ರೇರ ಕ್ಯಾಮೆರಾವು 48 ಎಂಪಿ ಸಾಮರ್ಥ್ಯದಲ್ಲಿದೆ. 10x ಹೈಬ್ರಿಡ್ ಝೂಮ್ ಆಯ್ಕೆ ಇದರ ಹೈಲೈಟ್‌ ಆಗಿದ್ದು, 4,065mAh ಬ್ಯಾಟರಿ ಬಲವನ್ನು ಒಳಗೊಂಡಿದೆ.

ಹಾನರ್ 20ಐ

ಹಾನರ್ 20ಐ

ಹಾನರ್‌ನ 20 ಮತ್ತು ಹಾನರ್‌ 20 ಪ್ರೊ ಸ್ಮಾರ್ಟ್‌ಫೋನ್‌ಗಳು ಇದೇ ಮೇ 21ಕ್ಕೆ ರಿಲೀಸ್‌ ಆಗಲಿದ್ದು, ಹಾಗೇ ಕಂಪನಿಯ ಬಜೆಟ್‌ ಸ್ಮಾರ್ಟ್‌ಫೋನ್‌ ಎಂದೆನಿಸಿಕೊಂಡಿರುವ 'ಹಾನರ್ 20ಐ' ಇದೇ ಮೇ ಅಂತ್ಯದೊಳಗೆ ಲಾಂಚ್ ಆಗುವ ನಿರೀಕ್ಷೆಗಳಿವೆ. ಕಿರಿನ್ 710 ಪ್ರೊಸೆಸರ್‌ ಅನ್ನು ಹೊಂದಿದ್ದು, 4/6GB RAM ಮತ್ತು 64/128GB ಆಯ್ಕೆಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. 3,400mAh ಶಕ್ತಿಯ ಬ್ಯಾಟರಿಯನ್ನು ನೀಡಲಾಗಿದ್ದು, ಉತ್ತಮ ಬ್ಯಾಕ್‌ಅಪ್‌ ನಿರೀಕ್ಷಿಸಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ80

ಸ್ಯಾಮ್‌ಸಂಗ್ ಗ್ಯಾಲ್ಯಾಕ್ಸಿ ಎ80

ಸ್ಯಾಮ್‌ಸಂಗ್‌ ಮೊದಲ ಬಾರಿಗೆ ಪಾಪ್‌ಅಪ್‌ ರೋಟೆಟಿಂಗ್ ಕ್ಯಾಮೆರಾವನ್ನು ಪರಿಚಯಿಸಿದ್ದು, ಪ್ರಮುಖ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಇರಲಿದೆ. 6.7 ಇಂಚಿನ ಡಿಸ್‌ಪ್ಲೇಯೊಂದಿಗೆ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್ ಹೊಂದಿದೆ. ಹಾಗೇ 8GB RAM ಮತ್ತು 128GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿದ್ದು, 3,700mAh ಸಾಮರ್ಥ್ಯದ ಬಲವಾದ ಬ್ಯಾಟರಿಯನ್ನು ಒಳಗೊಂಡಿರಲಿದೆ. ಯುಎಸ್‌ಬಿ Type-C ಫೋರ್ಟ್‌ ಇದ್ದು, ಫಾಸ್ಟ್‌ ಚಾರ್ಜಿಂಗ್ ಬೆಂಬಲ ಪಡೆದಿದೆ.

ನೂಬಿಯಾ ರೆಡ್‌ ಮ್ಯಾಜಿಕ್

ನೂಬಿಯಾ ರೆಡ್‌ ಮ್ಯಾಜಿಕ್

ನೀವೆನಾದರೂ ಗೇಮಿಂಗ್‌ಗಾಗಿ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದರೇ ಈ ಸ್ಮಾರ್ಟ್‌ಫೋನ್ ಸೂಕ್ತ ಎನಿಸಲಿದೆ. ಏಕೆಂದರೇ ಇದು ಪಕ್ಕಾ ಗೇಮಿಂಗ್ ಫೋನ್. 12GB RAM ಸಾಮರ್ಥ್ಯವನ್ನು ಪಡೆದಿರುವ ಈ ಫೋನ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್‌ ಅನ್ನು ಹೊಂದಿದೆ. 5,000mAh ಬ್ಯಾಟರಿಯ ಬಲವನ್ನು ಪಡೆದಿದ್ದು, ಪ್ರಮುಖ ಕ್ಯಾಮೆರಾವು 48 ಎಂಪಿ ಸಾಮರ್ಥ್ಯದಲ್ಲಿರಲಿದೆ. ಸೆಲ್ಫಿ ಕ್ಯಾಮೆರಾವು 16ಎಂಪಿ ಹೊಂದಿದೆ. ಇದೇ ಮೇ ಅಂತ್ಯದೊಳಗೆ ದೇಶಿಯ ಮಾರುಕಟ್ಟೆಗೆ ಲಾಂಚ್‌ ಆಗಲಿದೆ ಎನ್ನಲಾಗುತ್ತಿದೆ.

ಓದಿರಿ : ನೂತನ ತಂತ್ರಜ್ಞಾನ ಅನಾವರಣಕ್ಕೆ ಗೂಗಲ್ ವೇದಿಕೆ ಸಜ್ಜು ; ಹೆಚ್ಚಿದ ನಿರೀಕ್ಷೆಗಳು!ಓದಿರಿ : ನೂತನ ತಂತ್ರಜ್ಞಾನ ಅನಾವರಣಕ್ಕೆ ಗೂಗಲ್ ವೇದಿಕೆ ಸಜ್ಜು ; ಹೆಚ್ಚಿದ ನಿರೀಕ್ಷೆಗಳು!

Best Mobiles in India

English summary
5 top smartphones expected to be launched in May 2019.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X