Home
ಮೊಬೈಲ್

ನಿಮ್ಮ ಮೊಬೈಲ್‌ ಬ್ಯಾಟರಿ ಬ್ಯಾಕ್‌ಅಪ್‌ ಹೆಚ್ಚಿಸಲು ಈ ಟಿಪ್ಸ್‌ ಉಪಯುಕ್ತ!

ಸದ್ಯ ಮೊಬೈಲ್‌ ಪ್ರತಿಯೊಬ್ಬರ ಅಗತ್ಯ ಡಿವೈಸ್‌ಗಳಲ್ಲಿ ಒಂದಾಗಿದೆ. ಜನರ ಅನೇಕ ಕೆಲಸಗಳು ಸ್ಮಾರ್ಟ್‌ಫೋನ್‌ ಬಳಸಿ ಆನ್‌ಲೈನ್‌ ಮೂಲಕವೇ ನಡೆಯುವುದರಿಂದ ಸ್ಮಾರ್ಟ್‌ಫೋನ್ ಯಾವಾಗಲೂ ಅಗತ್ಯ ಹಾಗೂ ಅವಶ್ಯ ಡಿವೈಸ್‌ ಆಗಿದೆ. ಇನ್ನು ಕೆಲವು ಬಳಕೆದಾರರು ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಬಹುಬೇಗ ಖಾಲಿಯಾಗುತ್ತದೆ ಎನ್ನುವ ಮಾತುಗಳನ್ನು ಆಡುತ್ತಾರೆ. ಸ್ಮಾರ್ಟ್‌ಫೋನ್ ಕಾಳಜಿ ಮಾಡಿದರೂ ಎಷ್ಟೋ ಸಲ ಅಂದುಕೊಂಡಷ್ಟು ಬ್ಯಾಟರಿ ಬ್ಯಾಕ್‌ಅಪ್ ಬರುವುದೇ ಇಲ್ಲ.

ಕಾರ್ಯವೈಖರಿಗೆ

ಹೌದು, ಸ್ಮಾರ್ಟ್‌ಫೋನ್‌ಗಳ ಕಾರ್ಯವೈಖರಿಗೆ ಬ್ಯಾಟರಿ ಬ್ಯಾಕ್‌ಅಪ್ ಪೂರಕ. ಆಂಡ್ರಾಯ್ಡ್ ಮತ್ತು ಐಫೋನ್ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಹಲವು ಭಿನ್ನ ಕಾರಣಗಳಿಂದಾಗಿ ಖಾಲಿ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಮ್ಮೆ ಬಳಕೆದಾರರು ಮೊಬೈಲ್ ಚಾರ್ಜ್ ಮಾಡುವಾಗ ತಪ್ಪು ಕ್ರಮ ಅನುಸರಿಸಿದಾಗಲೂ ಬೇಗನೆ ಬ್ಯಾಟರಿ ಖಾಲಿ ಆಗುವ ಸಾಧ್ಯತೆಗಳು ಇರುತ್ತವೆ. ಹಾಗೆಯೇ ಅತೀಯಾದ ಮೊಬೈಲ್‌ ಚಾರ್ಜ್‌ನಿಂದಲೂ ಬ್ಯಾಕ್‌ಅಪ್‌ಗೆ ಧಕ್ಕೆ ಆಗುವ ಸಾಧ್ಯತೆಗಳಿರುತ್ತವೆ. ಆದರೆ ಕೆಲವು ಸೂಕ್ತ ವಿಧಾನಗಳನ್ನು ಅನುಸರಿಸುವ ಮೂಲಕ ಮೊಬೈಲ್‌ ಬ್ಯಾಟರಿ ಬಹುಬೇಗ ಖಾಲಿಯಾಗುವುದನ್ನು ತಡೆಯಬಹುದಾಗಿದೆ. ಆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸರಿಯಾಗಿ ಮೊಬೈಲ್ ಚಾರ್ಜ್ ಮಾಡಿ

ಸರಿಯಾಗಿ ಮೊಬೈಲ್ ಚಾರ್ಜ್ ಮಾಡಿ

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಬಹುತೇಕ ಬಳಕೆದಾರರು ಫೋನ್ ಬ್ಯಾಟರಿ ಪೂರ್ಣ 100% ಪರ್ಸೆಂಟ್ ಆಗುವವರೆಗೂ ಚಾರ್ಜ್ ತೆಗೆಯುವುದೇ ಇಲ್ಲ. ಇದು ಬ್ಯಾಟರಿ ಲೈಫ್ ದೃಷ್ಠಿಯಿಂದ ಉತ್ತಮ ನಿರ್ಧಾರವಲ್ಲ. ಸ್ಮಾರ್ಟ್‌ಫೋನ್ ಸಂಪೂರ್ಣ 100% ಚಾರ್ಜ್ ಮಾಡಲೇಬಾರದು. ಹೆಚ್ಚೆಂದರೇ ಶೇ.90 ಪರ್ಸೆಂಟ್ ದಾಟಿದ್ದರೇ ಚಾರ್ಜ್‌ ನಿಲ್ಲಿಸುವುದು ಬೆಸ್ಟ್‌. ಇದರಿಂದ ಬ್ಯಾಟರಿ ಲೈಫ್‌ಗೂ ಉತ್ತಮ.

ಡಾರ್ಕ್ ಮೋಡ್ ಬಳಕೆ ಮಾಡಿ

ಡಾರ್ಕ್ ಮೋಡ್ ಬಳಕೆ ಮಾಡಿ

ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಸಂರಕ್ಷಿಸಲು ಸಹಾಯ ಮಾಡಲು ಅನೇಕ ಅಪ್ಲಿಕೇಶನ್‌ಗಳು ಹೊಸದಾಗಿ ಡಾರ್ಕ್ ಮೋಡ್ ಅನ್ನು ಹೊರತಂದಿವೆ. ನಿಮ್ಮ ಡಿವೈಸ್‌ನಲ್ಲಿ ಡಾರ್ಕ್ ಥೀಮ್ ಅನ್ನು ಅನ್ವಯಿಸುವುದರಿಂದ ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಇತ್ಯಾದಿಗಳಂತಹ ವೈಶಿಷ್ಟ್ಯಗಳು ಲಭ್ಯವಿರುವ ಅಪ್ಲಿಕೇಶನ್‌ಗಳಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡಿ.

ಬ್ಯಾಕ್‌ಗ್ರೌಂಡ್‌ ಆಪ್ಸ್‌ ಕ್ಲೋಸ್ ಮಾಡಿ

ಬ್ಯಾಕ್‌ಗ್ರೌಂಡ್‌ ಆಪ್ಸ್‌ ಕ್ಲೋಸ್ ಮಾಡಿ

ಸ್ಮಾರ್ಟ್‌ಫೋನ್‌ನಲ್ಲಿ ಅನೇಕ ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡಿರುತ್ತಾರೆ. ಅವುಗಳಲ್ಲಿ ಕೆಲವು ಆಪ್ಸ್‌ಗಳನ್ನು ಬಳಕೆ ಮಾಡಿ ಮಿನಿಮೈಸ್‌ ಮಾಡಿರುತ್ತಾರೆ. ಆದ್ರೆ ಅವುಗಳು ಬ್ಯಾಕ್‌ಗ್ರೌಂಡ್‌ನಲ್ಲಿ ರನ್ನ ಆಗುತ್ತಿರುತ್ತವೆ. ಈ ಬ್ಯಾಕ್‌ಗ್ರೌಂಡ್‌ ರನ್ನ ಆಗುವ ಆಪ್ಸ್‌ಗಳಿಗೆ ಬ್ರೇಕ್‌ ಹಾಕುವುದರಿಂದಲೂ ಸಹ ಸ್ಮಾರ್ಟ್‌ಫೋನ್ ಕಾರ್ಯವೈಖರಿ ವೇಗ ಪಡೆದುಕೊಳ್ಳುತ್ತದೆ.

ಬ್ಯಾಟರಿ ಫುಲ್‌ ಡ್ರೈ ಮಾಡಬೇಡಿ

ಬ್ಯಾಟರಿ ಫುಲ್‌ ಡ್ರೈ ಮಾಡಬೇಡಿ

ಸ್ಮಾರ್ಟ್‌ಫೋನಿನ ಜೀವ ಒದಗಿಸುವ ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಸ್ಮಾರ್ಟ್‌ಫೋನ್ ಬ್ಯಾಟರಿ ಕಡಿಮೆ ಇದ್ದಾಗ ಬಳಕೆ ಸಹ ಕಡಿಮೆ ಮಾಡುವುದು ಅತೀ ಉತ್ತಮ. ಸಂಪೂರ್ಣ ಖಾಲಿ ಆಗುವವರೆಗೂ ಫೋನ್ ಬಳಕೆ ಮಾಡುವುದನ್ನು ಮಾಡಲೇಬೇಡಿ. ಇದರಿಂದ ಬ್ಯಾಟರಿ ಲೈಫ್‌ ಹಾಳಾಗುವ ಸಾಧ್ಯತೆ ಅಧಿಕ. ಶೇ.20%ನಷ್ಟು ಇದ್ದಾಗ ಫೋನ್ ಚಾರ್ಜ್ ಮಾಡುವುದು ಲೇಸು.

ಆಟೋ ಬ್ರೈಟ್ನೆಸ್‌ ಬಳಕೆ ಉತ್ತಮ

ಆಟೋ ಬ್ರೈಟ್ನೆಸ್‌ ಬಳಕೆ ಉತ್ತಮ

ಸ್ಮಾರ್ಟ್‌ಫೋನ್‌ನಲ್ಲಿ ಕೆಲವರು ಅಧಿಕ ಬ್ರೈಟ್ನೆಸ್‌ ನಲ್ಲಿ ಬಳಕೆ ಮಾಡುತ್ತಾರೆ ಇದರಿಂದ ಬ್ಯಾಟರಿ ಬಳಕೆ ಸಹ ಅಧಿಕವಾಗುತ್ತದೆ. ಆಟೋ ಬ್ರೈಟ್ನೆಸ್‌ ಇಡುವುದು ಉತ್ತಮ. ಹಾಗೆಯೇ ವೈಫೈ ಬಳಕೆ ಸಹ ಮಾಡುವುದು ಬ್ಯಾಟರಿ ಕಬಳಿಸಲು ದಾರಿ ಮಾಡಿಕೊಟ್ಟಂತೆ ಆಗುತ್ತದೆ.

Best Mobiles in India

English summary
5 Useful Tips To Improve Your Mobile Battery Life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+