ಹುವಾವೆ ಪಿ9'ಗಿಂತ 5 ಸೂಕ್ಷ್ಮ ಬದಲಾವಣೆಗಳೊಂದಿಗೆ ಹುವಾವೆ ಪಿ10 ಸ್ಮಾರ್ಟ್‌ಫೋನ್‌

By Suneel
|

ಚೀನಾ ಮೂಲದ ಹುವಾವೆ ಕಂಪನಿ ಇತ್ತೀಚೆಗೆ ತಾನೆ ಕ್ಯಾಮೆರಾ ಪ್ರಧಾನ ಸ್ಮಾರ್ಟ್‌ಫೋನ್‌ಗಳಾದ 'ಹುವಾವೆ ಪಿ9' ಮತ್ತು 'ಹುವಾವೆ ಪಿ9 ಪ್ಲಸ್'ಗಳನ್ನು ಲಾಂಚ್‌ ಮಾಡಿತ್ತು. ಆದರೆ ಈ ಎರಡು ಡಿವೈಸ್‌ಗಳಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಗೆ ಬಂದಿದ್ದು 'ಹುವಾವೆ ಪಿ9' ಮಾತ್ರ. ಕಂಪನಿ ಭಾರತದಲ್ಲಿ ಹುವಾವೆ ಪಿ9 ಪರಿಚಯಿಸುವ ಯಾವುದೇ ಸೂಚನೆಗಳು ಇರಲಿಲ್ಲ.

ಹುವಾವೆ ಈ ಹಿಂದಿನ 'ಹುವಾವೆ ಪಿ9' ಮತ್ತು 'ಹುವಾವೆ ಪಿ9 ಪ್ಲಸ್' ಯಶಸ್ವಿಯಲ್ಲಿದ್ದು, ಈಗಾಗಲೇ 'ಹುವಾವೆ ಪಿ10' ಮತ್ತು 'ಹುವಾವೆ ಪಿ10 ಪ್ಲಸ್' ಲಾಂಚ್‌ ಮಾಡಲು ತಯಾರಿ ನಡೆಸಿದೆ. 'ಹುವಾವೆ ಪಿ9 ಪ್ಲಸ್' ಡಿವೈಸ್ ಅನ್ನು ಕಂಪನಿ ಇನ್ನೂ ಸಹ ಭಾರತದ ಮಾರುಕಟ್ಟೆಯಲ್ಲಿ ಪರಿಚಯಿಸಿಲ್ಲ. ಆದ್ದರಿಂದ ಈಗ ಲಾಂಚ್ ಆಗಲಿರುವ 'ಹುವಾವೆ ಪಿ10' ಮತ್ತು 'ಹುವಾವೆ ಪಿ10 ಪ್ಲಸ್' ಡಿವೈಸ್‌ಗಳು ಭಾರತ ಮಾರುಕಟ್ಟೆ ತಲುಪುವ ಯಾವುದೇ ಸೂಚನೆಗಳಿಲ್ಲ. ಇತ್ತೀಚಿನ ಕೆಲವು ದಿನಗಳ ಹಿಂದೆ ಹುವಾವೆ ಪಿ10 ಡಿವೈಸ್‌ ಮೇಲ್ಮೈನ ಪ್ರೋಟೋಟೈಪ್ ಇಮೇಜ್‌ಗಳು ಆನ್‌ಲೈನ್‌ನಲ್ಲಿ ಪ್ರದರ್ಶನವಾಗಿದ್ದವು. ಈ ಹಿಂದಿನ ಡಿವೈಸ್‌ಗಿಂತ ಹುವಾವೆ ಪಿ10 ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಹೊಂದಿದ್ದು. ಅಂತಹ ವಿಶೇಷತೆಗಳು ಏನು ಎಂಬುದನ್ನು ಲೇಖನದಲ್ಲಿ ಓದಿರಿ.

ಹೋನರ್ 8 ನ ವಿಶೇಷ ಕ್ಯಾಮೆರಾ ಸ್ಮಾರ್ಟ್‌ಫೋನ್ ವಿಶೇಷತೆಗಳೇನು?

ಹುವಾವೆ ಪಿ9 ವಿನ್ಯಾಸ, ಕೆಲವು ಸೂಕ್ಷ್ಮ ಬದಲಾವಣೆ

ಹುವಾವೆ ಪಿ9 ವಿನ್ಯಾಸ, ಕೆಲವು ಸೂಕ್ಷ್ಮ ಬದಲಾವಣೆ

ಈ ಮೇಲಿನ ಹುವಾವೆ ಪಿ10 ಇಮೇಜ್ ಹಲವು ದಿನಗಳಿಂದ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಮೊದಲ ಅಂಶವೆಂದರೆ ಹುವಾವೆ ಪಿ10 ಫಿಂಗರ್ ಪ್ರಿಂಟ್ ಸೆನ್ಸಾರ್‌ ಅನ್ನು ಡಿವೈಸ್ ಮುಂಭಾಗದಲ್ಲಿ ಹೊಂದಿದೆ. (ಹುವಾವೆ ಪಿ9 ರೀತಿಯಲ್ಲಿ ಅಲ್ಲ). ಆದರೆ ಹಲವರು ಈ ಬಗ್ಗೆ ಇನ್ನೂ ಸಹ ಫಿಂಗರ್‌ಪ್ರಿಂಟ್ ಸೆನ್ಸಾರ್ ಹಿಂಭಾಗದಲ್ಲಿದೆ ಎಂದು ಹೇಳುತ್ತಿದ್ದಾರೆ.

ಡಿಸ್‌ಪ್ಲೇ ರೆಸಲ್ಯೂಶನ್

ಡಿಸ್‌ಪ್ಲೇ ರೆಸಲ್ಯೂಶನ್

GFXBench ಪ್ರಕಾರ, ಹುವಾವೆ ಪಿ10 5.5 ಇಂಚಿನ ಕ್ವಾಡ್‌ಕೋರ್ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, ಈ ಹಿಂದಿನ ಡಿವೈಸ್ 5.2 ಇಂಚಿನ HD ಡಿಸ್‌ಪ್ಲೇ ಹೊಂದಿತ್ತು. ಆದರೆ ಈ ಗುಣಮಟ್ಟದ ಡಿಸ್‌ಪ್ಲೇ ಹುವಾವೆ ಪಿ9'ಗೆ ಇರಲಿದೆಯೋ ಅಥವಾ ಹುವಾವೆ ಪಿ10 ಪ್ಲಸ್‌ಗೆ ಇರಲಿದೆಯೋ ಎಂಬುದು ಸ್ಪಷ್ಟವಾಗಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡ್ಯುಯಲ್ ಕ್ಯಾಮೆರಾ ಜೊತೆಗೆ Leica ಬ್ರ್ಯಾಂಡಿಂಗ್

ಡ್ಯುಯಲ್ ಕ್ಯಾಮೆರಾ ಜೊತೆಗೆ Leica ಬ್ರ್ಯಾಂಡಿಂಗ್

ಪಿ9'ಗೆ ಹೋಲಿಸುವುದಾದರೆ, ಹುವಾವೆ ಪಿ10 ಡಿವೈಸ್ ಜರ್ಮನ್ ಆಪ್ಟಿಕಲ್ಸ್ Leica ಬ್ರ್ಯಾಂಡಿಂಗ್ ಡ್ಯುಯಲ್ ಕ್ಯಾಮೆರಾವನ್ನು ಡಿವೈಸ್ ಹಿಂದೆ ಹೊಂದಲಿದೆ. ಹುವಾವೆ ಪಿ9 ನಂತೆ ಪಿ10 ಸಹ 20MP+12MP ಸೆನ್ಸಾರ್ ಕ್ಯಾಮೆರಾವನ್ನು ಹೊಂದಲಿದೆ ಆದರೂ, ಪಿ10 ತನ್ನ ಕ್ಯಾಮೆರಾದಲ್ಲಿ ಆಪ್ಟಿಕಲ್ ಇಮೇಜ್ ಸ್ಟಬಿಲೈಶನ್ ಅನ್ನು ಹೊಂದಿದೆ. ಪಿ10'ನ ಮುಂಭಾಗ ಕ್ಯಾಮೆರಾ 8MP ಫೀಚರ್ ಹೊಂದಿದೆ.

ಕಿರಿನ್ 960 ಚಿಪ್‌ಸೆಟ್ ಜೊತೆಗೆ 6GB RAM

ಕಿರಿನ್ 960 ಚಿಪ್‌ಸೆಟ್ ಜೊತೆಗೆ 6GB RAM

ಹಾರ್ಡ್‌ವೇರ್‌ ಸಂಬಂಧಿಸಿದಂತೆ, ಪಿ10 2.3GHz ಆಕ್ಟಾ-ಕೋರ್ ಕಿರಿನ್ 960 ಚಿಪ್‌ಸೆಟ್ ಮತ್ತು 6GB RAM ಹೊಂದುವ ನಿರೀಕ್ಷಿ ಇದೆ. ಇದು ಈ ಹಿಂದಿನ ಡಿವೈಸ್‌ಗಿಂತ ಎರಡು ಪಟ್ಟು ಹೆಚ್ಚು RAM ಸಾಮರ್ಥ್ಯ ಹೊಂದಿದೆ. ಅಲ್ಲದೇ 256GB ಸ್ಟೋರೇಜ್ ಸಾಮರ್ಥ್ಯ ಹೊಂದುವ ನಿರೀಕ್ಷೆಯು ಸಹ ಇದೆ.

ಸಾಫ್ಟ್‌ವೇರ್‌ ವಿಷಯದಲ್ಲಿ ಹುವಾವೆ ಪಿ10 ಆಂಡ್ರಾಯ್ಡ್ 7.0 ನ್ಯೂಗಾ ಓಎಸ್'ನಿಂದ ರನ್‌ ಆಗಲಿದೆ.

ಬ್ಯಾಟರಿ, ಬೆಲೆ ಮತ್ತು ಲಭ್ಯತೆ

ಬ್ಯಾಟರಿ, ಬೆಲೆ ಮತ್ತು ಲಭ್ಯತೆ

ಬ್ಯಾಟರಿ ಸಾಮರ್ಥ್ಯದ ಬಗ್ಗೆ ಇದುವರೆಗೂ ಯಾವುದೇ ಗಾಳಿಸುದ್ದಿ ಹರಡಿಲ್ಲ. ಆದರೆ ಡಿಸ್‌ಪ್ಲೇ ಡೆವಲಪ್‌ಮೆಂಟ್ ಗಮನಿಸಿದಲ್ಲಿ, ಬ್ಯಾಟರಿ ಸಾಮರ್ಥ್ಯವು ಸಹ ಹೆಚ್ಚಲಿದೆ. ಹುವಾವೆ ಪಿ10 ಬಗೆಗಿನ ಗಾಳಿಸುದ್ದಿ ಇನ್ನೂ ಆರಂಭಿಕ ಹಂತದಲ್ಲಿದ್ದು, ಬೆಲೆ ಮತ್ತು ಲಭ್ಯತೆ ಬಗ್ಗೆ ಮಾಹಿತಿ ಎಲ್ಲೂ ಲೀಕ್ ಆಗಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
5 Ways the UPCOMING Huawei P10 Will Be Different From Huawei P9. To know more about these devices differences visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X