ಹೋನರ್ 8 ನ ವಿಶೇಷ ಕ್ಯಾಮೆರಾ ಸ್ಮಾರ್ಟ್‌ಫೋನ್ ವಿಶೇಷತೆಗಳೇನು?

ಹೋನರ್ 8 ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವಿಶೇಷತೆಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಇದರ ವೈಶಿಷ್ಟ್ಯತೆಗಳನ್ನು ಇನ್ನಷ್ಟು ವಿವರವಾಗಿ ನಿಮಗೆ ಅರಿತುಕೊಳ್ಳಬಹುದಾಗಿದೆ.

By Shwetha
|

ಸ್ಮಾರ್ಟ್‌ಫೋನ್‌ಗಳು ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿ ಈಗ ಮಾರ್ಪಟ್ಟಿದೆ. ಅಂಗೈಯಗಲದ ಮಾಯಾ ಪೆಟ್ಟಿಗೆ ನಮ್ಮ ಪ್ರತಿಯೊಂದು ಅವಶ್ಯಕತೆಗಳನ್ನು ಪೂರೈಸುವ ಮಟ್ಟದಲ್ಲಿದ್ದು, ನಾವು ಫೋನ್ ಇಲ್ಲದೆ ಒಂದು ದಿನವೂ ಕಳೆಯಲಾರೆವು ಎಂಬಂತಹ ಸ್ಥಿತಿಗೆ ತಲುಪಿದ್ದೇವೆ.

ಓದಿರಿ: ನೀವು ಇದುವರೆಗೂ ನೋಡದ ಅದ್ಭುತ ಕ್ಯಾಮೆರಾ ಡಿವೈಸ್ ಹುವಾವೆ ಪಿ9

ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದಾಗ ಸ್ಪರ್ಧೆ ಈಗ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬೆಸ್ಟ್ ಕ್ಯಾಮೆರಾ ಡಿವೈಸ್ ಎಂಬ ಹೆಸರಿಗೆ ತಕ್ಕಂತೆಯೇ ಹುವಾವೆ ಹೋನರ್ 8 ಅನ್ನು ಲಾಂಚ್ ಮಾಡಿದೆ. ಇಂದಿನ ಲೇಖನದಲ್ಲಿ ಹೋನರ್ 8 ನ ಕ್ಯಾಮೆರಾ ವಿಶೇಷತೆಗಳನ್ನು ಅರಿತುಕೊಳ್ಳೋಣ.

ಓದಿರಿ: ಫೋನ್ ಭದ್ರತೆಯಲ್ಲಿ ಎತ್ತಿದ ಕೈ: ಹುವಾವೆ ಹೋನರ್ 7

12+12 ಎಮ್‌ಪಿ ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್

12+12 ಎಮ್‌ಪಿ ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್

ಇನ್ನೋವೇಟೀವ್ 12 ಎಮ್‌ಪಿ ಡ್ಯುಯಲ್ ಲೆನ್ಸ್ ಸಿಸ್ಟಮ್ ಅನ್ನು ಹೊಂದಿದ್ದು ಅತಿ ಶ್ರೀಮಂತವಾಗಿ ಫೋಟೋವನ್ನು ತೆಗೆಯುತ್ತದೆ. ಮೊನೊಕ್ರೋಮ್ ಲೆನ್ಸ್ ಇನ್ನಷ್ಟು ಪ್ರಖರ ಬೆಳಕಿನಲ್ಲಿ ಫೋಟೋಗಳನ್ನು ತೆಗೆಯಲು ನಿಮ್ಮನ್ನು ಅನುಮತಿಸುತ್ತಿದ್ದು ನಿಖರವಾಗಿ ಸುಂದರವಾಗಿ ಫೋಟೋಗಳನ್ನು ತೆಗೆಯಲು ನಿಮಗೆ ಅನುಕೂಲವನ್ನು ಮಾಡಿಕೊಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಎಸ್‌ಎಲ್‌ಆರ್ ಲೆವೆಲ್

ಡಿಎಸ್‌ಎಲ್‌ಆರ್ ಲೆವೆಲ್

ಹೋನರ್ 8 ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಬ್ಲರ್ ಹಿನ್ನಲೆಯನ್ನು ನಿಮಗೆ ಒದಗಿಸಿದರೂ ಡಿಎಸ್‌ಎಲ್ಆರ್ ಲೆವೆಲ್ ಡೆಪ್ತ್ ಅನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ. ಇಫೆಕ್ಟೀವ್ ಕ್ಯಾಮೆರಾ ಸಾಫ್ಟ್‌ವೇರ್ ಅನ್ನು ಡಿವೈಸ್ ಪಡೆದುಕೊಂಡಿದ್ದು ನಿಮ್ಮ ಚಿತ್ರಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸಲು ನಿಮ್ಮನ್ನು ಅನುಮತಿಸುತ್ತದೆ.

ವೀಡಿಯೊ ಶೂಟಿಂಗ್‌ಗಾಗಿ ಮ್ಯಾನುವಲ್ ಮೋಡ್

ವೀಡಿಯೊ ಶೂಟಿಂಗ್‌ಗಾಗಿ ಮ್ಯಾನುವಲ್ ಮೋಡ್

ಹೋನರ್ 8 ಸಂಪೂರ್ಣವಾಗಿ ಮ್ಯಾನುವಲ್ ಮೋಡ್ ಕಂಟ್ರೋಲ್‌ಗಳನ್ನು ಹೊಂದಿದ್ದು ಶಟರ್ ಸ್ಪೀಡ್, ವೈಟ್ ಬ್ಯಾಲೆನ್ಸ್ ಮತ್ತು ರೆಕಾರ್ಡಿಂಗ್‌ಗೆ ಅನುಕೂಲವನ್ನು ಮಾಡಿಕೊಡಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಕ್ಸ್‌ಪೋಶರ್ ಶಾಟ್‌ಗಳಿಗೆ ಬಿಲ್ಟ್ ಇನ್ ಲೈಟ್ ಪೇಂಟಿಂಗ್ ಮೋಡ್ಸ್

ಎಕ್ಸ್‌ಪೋಶರ್ ಶಾಟ್‌ಗಳಿಗೆ ಬಿಲ್ಟ್ ಇನ್ ಲೈಟ್ ಪೇಂಟಿಂಗ್ ಮೋಡ್ಸ್

ಕ್ಯಾಮೆರಾ ಅಪ್ಲಿಕೇಶನ್ ದೀರ್ಘ ಎಕ್ಸ್‌ಪೋಶರ್ ಶಾಟ್‌ಗಳನ್ನು ತೆಗೆಯಲು ಅನುವು ಮಾಡಿಕೊಡುವಂತಿದೆ. 'ಲೈಟ್ ಪೇಂಟಿಂಗ್' ಮೋಡ್ ನಾಲ್ಕು ಭಿನ್ನ ಪ್ರಿ ಡಿಫೈನ್ಡ್ ಮೋಡ್‌ಗಳನ್ನು ಪಡೆದುಕೊಂಡಿದ್ದು ಟೈಲ್ ಲೈಟ್ಸ್, ಲೈಟ್ಸ್ ಗ್ರಾಫಿ, ಸಿಲ್ಕಿ ವಾಟರ್ ಮತ್ತು ಸ್ಟಾರ್ ಟೆಕ್ ಹೀಗೆ ವೃತ್ತಿಪರ ರೀತಿಯಲ್ಲಿ ನಿಮಗೆ ಚಿತ್ರಗಳನ್ನು ಕ್ಯಾಪ್ಚರ್ ಮಾಡಲು ಅನುವು ಮಾಡಿಕೊಡುತ್ತದೆ.

ಬಳಸಲು ಸುಲಭವಾಗಿರುವ ಕ್ಯಾಮೆರಾ ಅಪ್ಲಿಕೇಶನ್

ಬಳಸಲು ಸುಲಭವಾಗಿರುವ ಕ್ಯಾಮೆರಾ ಅಪ್ಲಿಕೇಶನ್

ಹೆಚ್ಚು ಸುಧಾರಿತ ಮಾದರಿಯಲ್ಲಿರುವ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಹೋನರ್ 8 ಪಡೆದುಕೊಂಡಿದ್ದು ಇದು ಬಳಸಲು ಹೆಚ್ಚು ಸರಳವಾಗಿದೆ. ಬೇರೆ ಬೇರೆ ರೀತಿಯ ಮೋಡ್‌ಗಳನ್ನು ಇದು ಪಡೆದುಕೊಂಡು ಬಂದಿದ್ದು, ಫಿಲ್ಟರ್ ಮತ್ತು ಫಂಕ್ಶನ್‌ಗಳನ್ನು ಇದು ಪಡೆದಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸರಳವಾದ ಸ್ಮಾರ್ಟ್‌ಫೋನ್ ಕ್ಯಾಮೆರಾ

ಸರಳವಾದ ಸ್ಮಾರ್ಟ್‌ಫೋನ್ ಕ್ಯಾಮೆರಾ

ಹೋನರ್ 8 ಲೈಟ್ ಬ್ಯಾಲೆನ್ಸಿಂಗ್ ಅನ್ನು ಅದ್ಭುತವಾಗಿ ನಿರ್ವಹಿಸಲಿದ್ದು ಬೇರೆ ಬೇರೆ ಕಂಡೀಷನ್‌ನಲ್ಲಿ ಇದನ್ನು ಕಾರ್ಯಗತಗೊಳಿಸಲಿದೆ. ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್ ಅನ್ನು ಡಿವೈಸ್ ಪಡೆದುಕೊಂಡಿದ್ದು 5.2 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್ ಅನ್ನು ಹೋನರ್ 8 ಹೊಂದಿದ್ದು ಇಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ ಫೋನ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು ನಾನ್ ಸ್ಕಿನ್ನಿ ಇಮೇಜ್ ಮತ್ತು ವೀಡಿಯೊಗಳಲ್ಲಿ ಇನ್ನಷ್ಟು ಉತ್ತಮವಾಗಿ ಬರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
The handset packs in an innovative set of sensors built on the foundations of basic photography principles to give the best possible results. Let's find out what makes Honor 8 the best smartphone camera around.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X