Subscribe to Gizbot

ಮುಂದೆ ಬರಲಿರುವ ಟಾಪ್‌ ಕಂಪೆನಿಗಳ ಸ್ಮಾರ್ಟ್‌ಫೋನ್‌,ಟ್ಯಾಬ್ಲೆಟ್‌ಗಳು

Posted By:

ಟೆಕ್‌ ಕ್ಷೇತ್ರ ದೊಡ್ಡ ಕಂಪೆನಿಗಳು ಸದ್ಯದಲ್ಲೇ ಹೊಸ ಸ್ಮಾರ್ಟ್‌ಫೋನ್‌,ಫ್ಯಾಬ್ಲೆಟ್‌,ಟ್ಯಾಬ್ಲೆಟ್‌ ಬಿಡುಗಡೆ ಮಾಡಲಿವೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ ಈ ತಿಂಗಳು ಅಥವಾ ಮುಂದಿನ ತಿಂಗಳೊಳಗೆ ಈ ಎಲ್ಲಾ ಗ್ಯಾಜೆಟ್‌ಗಳು ಬಿಡುಗಡೆಯಾಗಲಿದೆ.

ಆಪಲ್‌ ಕಂಪೆನಿಯ ಐಪ್ಯಾಡ್‌,ನೋಕಿಯಾದ ಟ್ಯಾಬ್ಲೆಟ್‌ ಮತ್ತು ಫ್ಯಾಬ್ಲೆಟ್‌,ಗೂಗಲ್‌ ಭಾರೀ ನಿರೀಕ್ಷೆಯ ಹೊಸ ಸ್ಮಾರ್ಟ್‌ಫೋನ್‌, ಎಚ್‌ಟಿಸಿ, ಸೋನಿ ಕಂಪೆನಿಯ ಸ್ಮಾರ್ಟ್‌ಫೋನ್‌‌ಗಳು ಬಿಡುಗಡೆಯಾಗಲಿದೆ.ಹೀಗಾಗಿ ಕಂಪೆನಿಗಳು ಇನ್ನೂ ಅವರ ಉತ್ಪನ್ನದ ಬಗ್ಗೆ ಮಾಹಿತಿ ಪ್ರಕಟಿಸದಿದ್ದರೂ ಆ ಉತ್ಪನ್ನಗಳ ವಿಶೇಷತೆಗಳ ಬಗ್ಗೆ ಮಾಧ್ಯಮದಲ್ಲಿ ಸುದ್ದಿಗಳು ಪ್ರಕಟಗೊಳ್ಳಲಾರಂಭಿಸಿದೆ.ಹೀಗಾಗಿ ಇಲ್ಲಿ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿರುವ ಟಾಪ್‌ ಕಂಪೆನಿಗಳ ಗ್ಯಾಜೆಟ್‌ಗಳ ಮಾಹಿತಿಯಿದೆ.ಒಂದೊಂದೆ ಪುಟವನ್ನು ತಿರುಗಿಸಿ ವಿಶೇಷತೆಯನ್ನು ಓದಿಕೊಂಡು ಹೋಗಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ:ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗೂಗಲ್ ನೆಕ್ಸಸ್‌ 5

ಗೂಗಲ್ ನೆಕ್ಸಸ್‌ 5


ಆಂಡ್ರಾಯ್ಡ್‌ನ ಕಿಟ್‌ಕ್ಯಾಟ್‌ ಓಎಸ್‌ನ ಹೆಸರು ಪ್ರಕಟಗೊಂಡ ಬಳಿಕ ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮಾಹಿತಿಗಳ ಪ್ರಕಾರ ಕಿಟ್‌ಕ್ಯಾಟ್‌ ಓಎಸ್‌ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಇದೇ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. 32GB ಆಂತರಿಕ ಮೆಮೋರಿ,13 ಎಂಪಿ ಹಿಂದುಗಡೆ ಕ್ಯಾಮೆರಾ 2GB ನೊಂದಿಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ವಿಶೇಷತೆ ಏನಿರಬಹುದು?

 ನೋಕಿಯಾ ಲೂಮಿಯಾ 1520

ನೋಕಿಯಾ ಲೂಮಿಯಾ 1520


ನೋಕಿಯಾ ಸಹ ಫ್ಯಾಬ್ಲೆಟ್‌ ನಿರ್ಮಾಣದಲ್ಲಿ ತೊಡಗಿದೆ.6 ಇಂಚು ಹೊಂದಿರುವ ಫ್ಯಾಬ್ಲೆಟ್‌ ಲೂಮಿಯಾ 1520 ಇದೇ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ.20 ಎಂಪಿ ಕ್ಯಾಮೆರಾ ಕ್ವಾಡ್‌ ಕೋರ್‌ ಪ್ರೊಸೆಸರ್‍, 2GB ರ್‍ಯಾಮ್‌ನ್ನು ಈ ಫ್ಯಾಬ್ಲೆಟ್‌ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ.

 ಆಪಲ್‌ ಐಪ್ಯಾಡ್‌ ಮಿನಿ 2

ಆಪಲ್‌ ಐಪ್ಯಾಡ್‌ ಮಿನಿ 2


ಐಪ್ಯಾಡ್‌ ಮಿನಿ ಯಶಸ್ಸಿನ ನಂತರ ಆಪಲ್‌ ಐಪ್ಯಾಡ್‌ ಮಿನಿ 2ಬಿಡುಗಡೆ ಮಾಡಲು ಮುಂದಾಗುತ್ತಿದೆ.ನವೆಂಬರ್‌ ಮೊದಲ ವಾರದಲ್ಲಿ ಈ ಟ್ಯಾಬ್ಲೆಟ್‌ ಬಿಡುಗಡೆ ಮಾಡಬಹುದು ಎಂದು ಹೇಳಲಾಗುತ್ತಿದೆ.7.9 ಇಂಚಿನ ರೆಟಿನಾ ಡಿಸ್ಪ್ಲೇ(2048x153),ಎ6 ಪ್ರೊಸೆಸರ್‌ ಜೊತೆಗೆ ಐಫೋನ್‌ 5 ಎಸ್‌ನಲ್ಲಿರುವ ಟಚ್‌ ಐಡಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ವಿಶೇಷತೆಯೊಂದಿಗೆ ಬಿಡುಗಡೆ ಮಾಡಲು ಆಪಲ್‌ ಮುಂದಾಗುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

 ನೋಕಿಯಾ ಲೂಮಿಯಾ 2520

ನೋಕಿಯಾ ಲೂಮಿಯಾ 2520


ನೋಕಿಯಾ ಲೂಮಿಯಾ ಸಹ ಹೊಸ ಟ್ಯಾಬ್ಲೆಟ್‌ ಬಿಡುಗಡೆ ಮಾಡಲು ಮುಂದಾಗುತ್ತಿದೆ.10.1 ಇಂಚಿನ ಎಚ್‌ಡಿ ಸ್ಕ್ರೀನ್‌ ಹೊಂದಿರುವ ಟ್ಯಾಬ್ಲೆಟ್‌ ಕ್ವಾಡ್‌ ಕೋರ್‌‌ ಪ್ರೊಸೆಸರ್‌ 6.7 ಎಂಪಿ ಹಿಂದುಗಡೆ ಕ್ಯಾಮೆರಾ,ಬ್ಲೂಟೂತ್‌,ವೈಫೈ,4ಜಿ ವಿಶೇಷತೆಯೊಂದಿಗೆ ಬರುವ ಸಾಧ್ಯತೆಯಿದೆ.

 ಆಪಲ್‌ ಐಪ್ಯಾಡ್‌ 5

ಆಪಲ್‌ ಐಪ್ಯಾಡ್‌ 5


ಐದನೇ ತಲೆಮಾರಿನ ಐಪ್ಯಾಡ್‌‌ನ್ನು ಆಪಲ್‌ ಸಧ್ಯದಲ್ಲೇ ಬಿಡುಗಡೆ ಮಾಡಲಿದೆ. ತೆಳಗ್ಗಿನ ಕಡಿಮೆ ಭಾರವನ್ನು ಹೊಂದಿರುವ ಐಪ್ಯಾಡ್‌ 9.7 ಇಂಚಿನ ಸ್ಕ್ರೀನ್‌,8 ಎಂಪಿ ಕ್ಯಾಮೆರಾ, ಟಚ್‌ ಐಡಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌‌,64 ಬಿಟ್‌ ಎ7 ಪ್ರೊಸೆಸರ್‌ನೊಂದಿಗೆ ಈ ಟ್ಯಾಬ್ಲೆಟ್‌ ಬಿಡುಗಡೆಯಾಗುವ ಸಾಧ್ಯತೆ ಇದೆ.

 ಸೋನಿ ಎಕ್ಸ್‌ಪೀರಿಯಾ ಝಡ್‌1 ಮಿನಿ

ಸೋನಿ ಎಕ್ಸ್‌ಪೀರಿಯಾ ಝಡ್‌1 ಮಿನಿ

20 ಎಂಪಿ ಕ್ಯಾಮೆರಾ ಸ್ಮಾರ್ಟ್‌ಫೋನ್‌ ಸೋನಿ ಎಕ್ಸ್‌ಪೀರಿಯಾ ಝಡ್‌1 ಬಿಡುಗಡೆ ಮಾಡಿದ ಬಳಿಕ ಸೋನಿ ಅದೇ ಹೆಸರಿನ ಸಣ್ಣ ಗಾತ್ರದ ಸ್ಮಾರ್ಟ್‌ಫೋನ್‌ನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ 4.3 ಇಂಚಿನ ಸ್ಕ್ರೀನ್‌, 2GB RAM,2,300mAh ಬ್ಯಾಟರಿ,16GB ಆಂತರಿಕ ಮೆಮೋರಿ,ಆಂಡ್ರಾಯ್ಡ್‌ 4.2 ಜೆಲ್ಲಿ ಬೀನ್‌ ಓಎಸ್‌ ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

 ಎಚ್‌ಟಿಸಿ ಒನ್‌ ಮ್ಯಾಕ್ಸ್‌:

ಎಚ್‌ಟಿಸಿ ಒನ್‌ ಮ್ಯಾಕ್ಸ್‌:


ಗೂಗಲ್‌ ಕಿಟ್‌ಕ್ಯಾಟ್‌ ಓಎಸ್‌ ಬಿಡುಗಡೆ ಮಾಡಿದ ಬಳಿಕ ಈ ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. 5.9 ಇಂಚಿನ ಸ್ಕ್ರೀನ್‌, ಆಂಡ್ರಾಯ್ಡ್‌ 4.3 ಕಿಟ್‌ಕ್ಯಾಟ್‌ ಓಎಸ್‌,4 ಎಂಪಿ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ,2GB ರ್‍ಯಾಮ್‌,3,300mAh ಬ್ಯಾಟರಿ.ಜೊತೆಗೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ವಿಶೇಷತೆಯೊಂದಿಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುವ ಸಾಧ್ಯತೆಯಿದೆ.

 ಮೊಟರೋಲಾ ಡ್ರಾಯಿಡ್ 5

ಮೊಟರೋಲಾ ಡ್ರಾಯಿಡ್ 5


ಗೂಗಲ್‌ ಮಾಲೀಕತ್ವದ ಮೊಟರೋಲಾ ಕಂಪೆನಿ ಡ್ರಾಯಿಡ್‌ 5 ಹೆಸರಿನ ಕ್ವರ್ಟಿ ಕೀಪ್ಯಾಡ್‌ ಹೊಂದಿರುವ ಸ್ಮಾರ್ಟ್‌ಫೋನ್‌ ನಿರ್ಮಾಣದಲ್ಲಿ ತೊಡಗಿದೆ.ಈ ಸ್ಮಾರ್ಟ್‌ಫೋನ್‌ 4.3 ಇಂಚಿನ ಸ್ಕ್ರೀನ್‌, 1GB ರ್‍ಯಾಮ್‌,ಎನ್‌ಎಫ್‌ಸಿ,16GB ಆಂತರಿಕ ಮೆಮೋರಿಯೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot