ಅತಿಯಾದರೆ ಅಮೃತ ಕೂಡ ವಿಷ: ಸ್ಮಾರ್ಟ್‌ಫೋನ್ ಬೇಕೇ ಬೇಡವೇ?

By Shwetha
|

ಇಂದಿನ ದಿನದಲ್ಲಿ ಮೊಬೈಲ್ ಫೋನ್‌ಗಳು ಜೀವನದ ಬಹುಮುಖ್ಯ ಭಾಗವಾಗಿ ಮಾರ್ಪಟ್ಟಿದೆ. ಬರಿಯ ಕರೆ ಮಾತ್ರವಲ್ಲದೆ ಸಂದೇಶ ರವಾನೆ, ಗೇಮ್ಸ್ ಆಡಲು, ಅಪ್ಲಿಕೇಶನ್‌ಗಳನ್ನು ಬಳಸಿಕೊಳ್ಳಲು, ಇಮೇಲ್, ಚಾಟಿಂಗ್, ಹೀಗೆ ನಿಮ್ಮ ಅಂಗೈಯಗಲದ ಮಾಣಿಕ್ಯ ಹತ್ತು ಹಲವು ಬಗೆಯಲ್ಲಿ ವರವಾಗಿ ಪರಿಣಮಿಸಿದೆ.

ಓದಿರಿ: ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವ ಟಿಪ್ಸ್ ಇಲ್ಲಿದೆ

ಅತಿ ಆದರೆ ಅಮೃತ ಕೂಡ ವಿಷ ಎಂಬ ಮಾತಿನಂತೆ ಬಹುಪಯೋಗಿ ಸ್ಮಾರ್ಟ್‌ಫೋನ್ ನಿಮಗೆ ಪ್ರಯೋಜನಕಾರಿ ಹೇಗೆಯೋ ಅಂತೆಯೇ ನಿಮ್ಮ ಜೀವನಕ್ಕೆ ಸಂಚಕಾರವನ್ನು ತರಬಲ್ಲವು. ಅದು ಹೇಗೆ ಎಂಬುದನ್ನು ಅರಿತುಕೊಳ್ಳಲು ಈ ಲೇಖನ ನಿಮಗೆ ಸಹಕಾರಿಯಾಗಿದೆ. ನಿಮ್ಮ ಡಿವೈಸ್ ಅನ್ನು ನೀವು ಬಹುವಾಗಿ ಬಳಸುತ್ತಿದ್ದಲ್ಲಿ ಈ ಲೇಖನ ನಿಮಗೆ ಇದರ ಅಪಾಯಗಳನ್ನು ತಿಳಿಸಿಕೊಡಲಿದೆ.

ಪ್ರಯೋಜನಗಳು

ಪ್ರಯೋಜನಗಳು

ಸಂವಹನಕ್ಕೆ ಸಹಕಾರಿ

ನಿಮ್ಮ ದೂರದೂರದ ಸ್ನೇಹಿತರು ಮತ್ತು ಸಂಬಂಧಿಕರನ್ನು ಸಮೀಪದಲ್ಲಿರಿಸಿಕೊಳ್ಳಲು ಮೊಬೈಲ್ ಫೋನ್ ನೆರವಾಗಿದೆ. ಹಿಂದೆ ಎಲ್ಲಾ ಟೆಲಿಗ್ರಾಮ್ ಕಳುಹಿಸಿ ಸುದ್ದಿಮುಟ್ಟಿಸಬೇಕಾದ ಅನಿವಾರ್ಯತೆ ಇತ್ತು, ಆದರೀಗ ಮೊಬೈಲ್ ಫೋನ್ ಇದೇ ಕೆಲಸವನ್ನು ಕೆಲವೇ ನಿಮಿಷಗಳಲ್ಲಿ ಮಾಡಿ ಮುಗಿಸಲಿದೆ.

ಯಾವಾಗಲೂ ಸಂಪರ್ಕದಲ್ಲಿರಲು ಸಹಕಾರಿ

ಯಾವಾಗಲೂ ಸಂಪರ್ಕದಲ್ಲಿರಲು ಸಹಕಾರಿ

ಹೊಸ ಹೊಸ ಅಪ್‌ಡೇಟ್‌ಗಳನ್ನು ಮೊಬೈಲ್‌ಗಳು ಪಡೆದುಕೊಂಡಂತೆಲ್ಲಾ ಇವುಗಳು ಕಂಪ್ಯೂಟರ್ ಸಮಾನವಾಗಿ ಕೆಲಸ ಮಾಡತೊಡಗಿವೆ. ಇಮೇಲ್ ಕಳುಹಿಸುವುದು, ಸ್ವೀಕರಿಸುವುದು, ವೆಬ್‌ಸೈಟ್‌ಗಳನ್ನು ಬ್ರೌಸ್ ಮಾಡುವುದು, ಗೇಮ್ಸ್ ಮತ್ತು ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೀಗೆ ಸದಾಕಾಲ ಇಂಟರ್ನೆಟ್‌ನಲ್ಲಿ ನಿಮಗೆ ತೊಡಗಿಕೊಂಡಿರಲೂಬಹುದಾಗಿದೆ.

ಬಹು ಬಳಕೆ

ಬಹು ಬಳಕೆ

ನಿಮ್ಮ ಡಿವೈಸ್ ಅನ್ನು ಬಳಸಿಕೊಂಡು ಹತ್ತು ಹಲವು ಕೆಲಸಗಳನ್ನು ಒಮ್ಮೆಲೆ ನಿಭಾಯಿಸಬಹುದಾಗಿದೆ. ಹಾಡು ಆಲಿಸುವುದು, ಚಲನ ಚಿತ್ರಗಳ ವೀಕ್ಷಣೆ, ಗೇಮ್ಸ್ ಆಡುವುದು, ನೋಟ್‌ಗಳನ್ನು ಸ್ಟೋರ್ ಮಾಡುವುದು, ವೀಡಿಯೊ ಕರೆಗಳನ್ನು ಮಾಡುವುದು, ಅಲರಾಮ್ ಹೊಂದಿಸುವುದು ಹೀಗೆ ಒಂದೇ ಸಾಧನ ನಿಮ್ಮ ಹತ್ತೆಲ್ಲಾ ಚಟುವಟಿಕೆಗಳನ್ನು ಮಾಡಲು ಸಹಕಾರಿಯಾಗಲಿದೆ. ಇನ್ನು ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಇದೀಗ ಟಿವಿ, ಮನೆಯ ಲೈಟ್‌ಗಳನ್ನು ನಿಯಂತ್ರಿಸಬಹುದಾಗಿದೆ.

ತುರ್ತು ಪರಿಸ್ಥಿತಿಗಳಲ್ಲಿ

ತುರ್ತು ಪರಿಸ್ಥಿತಿಗಳಲ್ಲಿ

ನಿಮಗೆ ತುರ್ತು ಸಂದರ್ಭಗಳಲ್ಲಿ ನಿಮ್ಮ ಡಿವೈಸ್ ಆಪತ್ಬಾಂಧವನಾಗಿ ಕೆಲಸ ಮಾಡಿರಬಹುದು. ನಿಮ್ಮ ಫೋನ್‌ನೊಂದಿಗೆ ಪ್ರಯಾಣಮಾಡುವುದು ಸೂಕ್ತ ಉಪಾಯವಾಗಿದೆ. ತುರ್ತು ಸಮಯಗಳಲ್ಲಿ ನಿಮಗೆ ಸ್ನೇಹಿತರ ನೆರವನ್ನು ಪಡೆದುಕೊಳ್ಳಲು ನಿಮ್ಮ ಡಿವೈಸ್ ಸಹಕಾರಿಯಾಗಲಿದೆ.

ದುಷ್ಪರಿಣಾಮಗಳು

ದುಷ್ಪರಿಣಾಮಗಳು

ಕಿರಿಕಿರಿಯನ್ನುಂಟು ಮಾಡುತ್ತದೆ

ನಿಮ್ಮ ಫೋನ್ ನಿಮ್ಮೊಂದಿಗೆ ಇದ್ದ ಸಂದರ್ಭದಲ್ಲಿ ನಿಮಗೆ ಕುಟುಂಬದವರೊಂದಿಗೆ ಸಮಯ ಕಳೆಯುವ ಅವಕಾಶವಿರುವುದು ಕಡಿಮೆಯಾಗಿಬಿಡುತ್ತದೆ. ನಿಮ್ಮ ಫೋನ್‌ಗೆ ಬರುವ ಕರೆಗಳು, ಸಂದೇಶಗಳು, ಅಧಿಸೂಚನೆಗಳು ಹೀಗೆ ಆಗಾಗ್ಗೆ ನೀವು ಡಿವೈಸ್ ಅನ್ನು ಪರಿಶೀಲಿಸುತ್ತಲೇ ಇರುತ್ತೀರಿ. ಇದರಿಂದ ನಿಮ್ಮ ವೈಯಕ್ತಿಕ ಸಮಯ ಹಾಳಾಗಿಬಿಡುತ್ತದೆ.

ಗೌಪ್ಯ ವಿಷಯ ಸೋರಿಕೆ

ಗೌಪ್ಯ ವಿಷಯ ಸೋರಿಕೆ

ನಿಮ್ಮ ಡಿವೈಸ್‌ನಲ್ಲಿ ನಿಮ್ಮೆಲ್ಲಾ ಗೌಪ್ಯ ವಿಷಯಗಳನ್ನು ಸಂಗ್ರಹಿಸಿಡುವುದು ಅಪಾಯಕಾರಿಯಾಗಿದೆ. ನಿಮ್ಮ ಫೋನ್ ಅನ್ನು ಬೇರೆ ಯಾರಾದರೂ ಆಕ್ರಮಿಸುವ ಸಾಧ್ಯತೆ ಹೆಚ್ಚಿರುತ್ತದೆ. ಮೊಬೈಲ್ ಕಳ್ಳತನ ಈಗೀಗ ಹೆಚ್ಚು ನಡೆಯುತ್ತಿದ್ದು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಫೋನ್‌ನಲ್ಲಿ ಸಂಗ್ರಹಿಸಿಡುವುದು ಹೆಚ್ಚು ಅಪಾಯಕಾರಿಯಾಗಿದೆ.

ಏಕಾಗ್ರತೆಗೆ ಭಂಗ

ಏಕಾಗ್ರತೆಗೆ ಭಂಗ

ಸಾಮಾನ್ಯವಾಗಿ ನೀವು ವಾಹನ ಚಲಾಯಿಸುತ್ತಿರುವಾಗ ಮುಖ್ಯ ಕರೆಬರುತ್ತದೆ ಆಗ ನೀವು ಮೊಬೈಲ್ ಅನ್ನು ಚಾಲನೆಯಲ್ಲಿರುವಾಗಲೇ ಬಳಸುತ್ತೀರಿ. ಆದರೆ ನಂತರದ ಅಪಾಯಕ್ಕೆ ಇದು ಕಾರಣವಾಗುತ್ತದೆ. ಅಂತೆಯೇ ಸಭೆ ಸಮಾರಂಭಗಳಲ್ಲಿ ನಿಮ್ಮ ಫೋನ್ ಆಗಾಗ್ಗೆ ಹೊಡೆದುಕೊಳ್ಳುವುದು ಶಾಂತಿಗೆ ಭಂಗವನ್ನು ತರುತ್ತದೆ.

ಮುಖತಃ ಸಂವಹನ ಕಡಿಮೆ

ಮುಖತಃ ಸಂವಹನ ಕಡಿಮೆ

ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್‌ನಂತಹ ಸಾಮಾಜಿಕ ರಂಗಗಳಲ್ಲೇ ಹೆಚ್ಚಿನ ಸಂವಹನಗಳು ನಡೆಯುತ್ತಿದೆ. ಜನರು ತಮ್ಮ ಭೇಟಿಯ ಸಮಯಗಳನ್ನು ಈ ಅಪ್ಲಿಕೇಶನ್‌ಗಳ ಬಳಕೆಯಲ್ಲೇ ಮಾಡುತ್ತಿದ್ದು, ಸ್ನೇಹ ಸಂಬಂಧ ಹೀಗೆ ಮರೆಯಾಗುತ್ತಿದೆ ಮತ್ತು ಇದರಿಂದ ಕುಟುಂಬದಲ್ಲಿ ಕಲಹಗಳು ಉಂಟಾಗುತ್ತಿದ್ದು, ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ.

Most Read Articles
Best Mobiles in India

English summary
The mobile phone is one of the phenomenal inventions of this age. So what are the repercussions of constantly using these devices day in day out? Let’s find out the advantages and disadvantages of mobile phones below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more