ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವ ಟಿಪ್ಸ್ ಇಲ್ಲಿದೆ

Written By:

ಸ್ಮಾರ್ಟ್‌ಫೋನ್‌ನಲ್ಲಿ ಲೊ ಬ್ಯಾಟರಿ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಸೂಚನೆಗಳು ನಿಮ್ಮ ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದು ನಿಮ್ಮ ಸಮಸ್ಯೆಯನ್ನು ಪರಿಹರಿಸಲಿದೆ. ಅತಿ ಸುಲಭ ವಿಧಾನದಲ್ಲಿ ಈ ಸಲಹೆಗಳಿದ್ದು ಫೋನ್ ಚಾರ್ಜ್ ಮಾಡುವಾಗ ಇದನ್ನು ಪಾಲಿಸಿದರೆ ಆಯಿತು. ಹಾಗಿದ್ದರೆ ಬನ್ನಿ ಆ ಸಲಹೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ಓದಿರಿ: ವಿಂಡೋಸ್ ವೈಫೈ ಪಾಸ್‌ವರ್ಡ್ ಮರುಪಡೆದುಕೊಳ್ಳುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಪ್ಲೇನ್ ಮೋಡ್

ಏರ್‌ಪ್ಲೇನ್ ಮೋಡ್

ಏರ್‌ಪ್ಲೇನ್‌ನಲ್ಲಿ ನೀವು ಫೋನ್ ಅನ್ನು ಇಟ್ಟು ಚಾರ್ಜ್ ಮಾಡುವುದು ಬೇಗನೇ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ. ಆದರೆ ಡೇಟಾ, ನೆಟ್‌ವರ್ಕ್ ಅನ್ನು ಈ ಮೋಡ್‌ನಲ್ಲಿ ನಿಮಗೆ ಬಳಸಲಾಗುವುದಿಲ್ಲ. ಆದರೆ ವೇಗವಾಗಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಬೇಕು ಎಂದಾದಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ನಿಮಗೆ ಆಯ್ಕೆಮಾಡಿಕೊಳ್ಳಬಹುದಾಗಿದೆ.

ಸರಿಯಾದ ಅಡಾಪ್ಟರ್ ಮತ್ತು ಕೇಬಲ್ ಬಳಸಿ

ಸರಿಯಾದ ಅಡಾಪ್ಟರ್ ಮತ್ತು ಕೇಬಲ್ ಬಳಸಿ

ನಿಮ್ಮ ಫೋನ್‌ನೊಂದಿಗೆ ಬಂದಿರುವ ಅಡಾಪ್ಟರ್ ಅಥವಾ ಚಾರ್ಜರ್ ಅನ್ನು ಫೋನ್ ಚಾರ್ಜಿಂಗ್‌ಗೆ ಬಳಸಿಕೊಳ್ಳಿ. ಬೇರೆ ಬೇರೆ ಚಾರ್ಜರ್ ಸ್ವಭಾವಿಕವಾಗಿ ನಿಮ್ಮ ಫೋನ್‌ನ ಚಾರ್ಜಿಂಗ್‌ಗೆ ಅನುಕೂಲಕರವಾಗಿರುವುದಿಲ್ಲ ಅಂತೆಯೇ ಇನ್ನಿತರ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಕೂಡ ಇರುತ್ತದೆ. ಆದ್ದರಿಂದ ನಿಮ್ಮ ಫೋನ್‌ನ ಉತ್ತಮತೆಗಾಗಿ ಈ ಟಿಪ್ಸ್ ಅನ್ನು ಅನುಸರಿಸಿಕೊಳ್ಳಿ.

ವಾಲ್ ಪ್ಲಗ್ ಪಾಯಿಂಟ್ ಆಯ್ಕೆಮಾಡಿಕೊಳ್ಳಿ

ವಾಲ್ ಪ್ಲಗ್ ಪಾಯಿಂಟ್ ಆಯ್ಕೆಮಾಡಿಕೊಳ್ಳಿ

ಯುಎಸ್‌ಬಿ ಪೋರ್ಟ್ ಅನ್ನು ಹೆಚ್ಚಿನ ಫೋನ್ ಬಳಕೆದಾರರು ಫೋನ್ ಚಾರ್ಜಿಂಗ್‌ಗೆ ಆಯ್ಕೆಮಾಡಿಕೊಳ್ಳುತ್ತಾರೆ. ವಾಲ್ ಅಡಾಪ್ಟರ್ ಒಮ್ಮೊಮ್ಮೆ ಇಲ್ಲದೇ ಇರುವ ಸಂದರ್ಭದಲ್ಲಿ ಈ ಆಯ್ಕೆ ಉಚಿತವಾಗಿದ್ದರೂ ವಾಲ್ ಅಡಾಪ್ಟರ್‌ನಿಂದ ನೀವು ಫೋನ್ ಚಾರ್ಜ್ ಮಾಡಿಕೊಳ್ಳುವುದು ವೇಗವಾಗಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡುತ್ತದೆ.

ಫೋನ್ ಕೇಸ್ ಮತ್ತು ಕವರ್ ತೆಗೆದಿರಿಸಿ

ಫೋನ್ ಕೇಸ್ ಮತ್ತು ಕವರ್ ತೆಗೆದಿರಿಸಿ

ಯಾವಾಗಲೂ ಫೋನ್ ಚಾರ್ಜ್ ಮಾಡುವಾಗ ಕೇಸ್ ಅಥವಾ ಕವರ್ ಅನ್ನು ತೆಗೆದಿರಿಸಬೇಕು ಎಂದೇನಿಲ್ಲ. ಆದರೆ ಹೀಗೆ ಮಾಡುವುದು ಇನ್ನಷ್ಟು ವೇಗವಾಗಿ ನಿಮ್ಮ ಫೋನ್ ಅನ್ನು ಚಾರ್ಜ್ ಮಾಡಲು ಅನುಕೂಲಕರವಾಗಿರುತ್ತದೆ. ಏಕೆಂದರೆ ಹೆಚ್ಚಿನ ಬ್ಯಾಟರಿಗಳನ್ನು ಲಿಥಿಯಮ್ - ಐಯಾನ್‌ನಿಂದ ತಯಾರಿಸಿರುವುದರಿಂದ ನೀವು ಕವರ್ ತೆಗೆದಾಗ ಕೊಠಡಿಯ ತಾಪಮಾನಕ್ಕೆ ಸರಿಯಾಗಿ ಫೋನ್ ಅನ್ನು ಇರಿಸುತ್ತದೆ.

ಪವರ್ ಬ್ಯಾಂಕ್‌ಗಳನ್ನು ಬಳಸಿ

ಪವರ್ ಬ್ಯಾಂಕ್‌ಗಳನ್ನು ಬಳಸಿ

ಚಾರ್ಜರ್ ಇಲ್ಲದ ಸಂದರ್ಭದಲ್ಲಿ ಪವರ್ ಬ್ಯಾಂಕ್‌ಗಳು ಹೆಚ್ಚು ವೇಗವಾಗಿ ಫೋನ್ ಚಾರ್ಜ್ ಮಾಡಲು ಅನುಕೂಲಕರವಾಗಿದೆ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳಬೇಕು ಎಂದಾದಲ್ಲಿ ಪವರ್ ಬ್ಯಾಂಕ್ ಉತ್ತಮ ಆಯ್ಕೆಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
In this article we are giving you some tips and tricks on how to charge your phone fast. You should follow these tips to charge your phone quickly.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot