Home
ಮೊಬೈಲ್

ರೂ.10,500 ನೀಡಿ ಐಫೋನ್ 8 ತೆಗೆದುಕೊಂಡು ಹೋಗಿ: ಏರ್‌ಟೆಲ್ ಕೊಟ್ಟ ಹೊಸ ಆಫರ್..!

By Srinidhi

ಮಾರುಕಟ್ಟೆಯಲ್ಲಿ ನೂತನವಾಗಿ ಲಾಂಚ್ ಆಗಿರುವ ಐಫೋನ್ 8 ಅಷ್ಟಾಗಿ ಸದ್ದು ಮಾಡಲಿಲ್ಲ. ಐಫೋನ್ X ನೊಂದಿಗೆ ಲಾಂಚ್ ಆದ ಹಿನ್ನಲೆಯಲ್ಲಿ ಈ ಐಫೋನ್ ಅನ್ನು ಕೇಳುವವರಿಲ್ಲ ಎನ್ನಲಾಗಿದೆ. ಆದರೆ ಐಫೋನ್ ಬಳಕೆದಾರರಿಗೆ ಐಫೋನ್ 8 ಮೇಲೆ ಪ್ರೀತಿ ಹೊಂದಿದ್ದಾರೆ, ಈ ಹಿನ್ನಲೆಯಲ್ಲಿ ಏರ್‌ಟೆಲ್ ಐಪೋನ್ 8 ಮೇಲೆ ಭರ್ಜರಿ ಆಫರ್ ಅನ್ನು ನೀಡಲು ಮುಂದಾಗಿದೆ.

ರೂ.10,500 ನೀಡಿ ಐಫೋನ್ 8 ತೆಗೆದುಕೊಂಡು ಹೋಗಿ: ಏರ್‌ಟೆಲ್ ಕೊಟ್ಟ ಹೊಸ ಆಫರ್..!

ಓದಿರಿ: ಯಾವುದೇ ಸಿಮ್‌ಗೆ ರಿಚಾರ್ಜ್ ಮಾಡಿಸುವ ಮುನ್ನ ತಿಳಿಯಲೇ ಬೇಕು..!

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋದೊಂದಿಗೆ ಸ್ಪರ್ಧೆಗೆ ಬಿದ್ದಿರುವ ಏರ್‌ಟೆಲ್ ತನ್ನ ವೆಬ್ ಸೈಟಿನಲ್ಲಿ ಐಫೋನ್ 8 ಮೇಲೆ ಆಫರ್ ವೊಂದನ್ನು ನೀಡಿದ್ದು, ಇಲ್ಲಿ ಅತೀ ಕಡಿಮೆ ಐಫೋನ್ 8 ಅನ್ನು ಮಾರಾಟ ಮಾಡುತ್ತಿದೆ. ಕೇಲವ ರೂ.10,500ಕ್ಕೆ ಮಾರಾಟ ಮಾಡುತ್ತಿದೆ. ಇಷ್ಟು ಪ್ರಮಾಣದ ಡೌನ್‌ ಪೇಮೆಂಟ್ ಮಾಡಿ ಐಫೋನ್ 8 ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಈ ಹಿನ್ನಲೆ ಏರ್‌ಟೆಲ್ ನೀಡಿರುವ ಆಫರ್ ಕುರಿತ ಮಾಹಿತಿಯೂ ಮುಂದಿದೆ.

ಏರ್‌ಟೆಲ್‌ ಆಫರ್:

ಏರ್‌ಟೆಲ್‌ ಆಫರ್:

ರೂ.10,500 ಪಾವತಿ ಮಾಡಿದವರಿಗೆ ಏರ್‌ಟೆಲ್ ಐಫೋನ್ 8 ನೀಡಲಿದ್ದು, ಇದಾದ ನಂತರದಲ್ಲಿ 24 ತಿಂಗಳು ಗಳ ಕಾಲ ರೂ.2499 ಗಳನ್ನು ಪ್ರತಿ ತಿಂಗಳು ಪಾವತಿ ಮಾಡಬೇಕಾಗದೆ. ಆದರೆ ಇದು ಕೇಲವ EMI ಅಲ್ಲ ಬದಲಿಗೆ ಇದರೊಂದಿಗೆ ಏರ್‌ಟೆಲ್ ಹಲವು ಸೇವೆಗಳನ್ನು ನೀಡಲಿದೆ ಎನ್ನಲಾಗಿದೆ. ಈ ಕುರಿತ ಮಾಹಿತಿಯೂ ಮುಂದಿದೆ.

ತಿಂಗಳಿಗೆ 40GB ಡೇಟಾ:

ತಿಂಗಳಿಗೆ 40GB ಡೇಟಾ:

ಇದಲ್ಲದೇ ಐಫೋನ್ 8 ಖರೀದಿಸಿದವರಿಗೆ ಏರ್‌ಟೆಲ್ ತಿಂಗಳಿಗೆ 40GB ಡೇಟಾವನ್ನು ನೀಡಲಿದ್ದು, ಇದರಿಂದಾಗಿ ಬೇರೆ ಯಾವುದೇ ಪ್ಲಾನ್ ರೀಚಾರ್ಜ್ ಮಾಡಿಸಿಕೊಳ್ಳುವ ಅಗತ್ಯತೆ ಇರುವುದಿಲ್ಲ. ಇಲ್ಲಿ ಹಣ ಉಳಿಕೆಯಾಗಲಿದೆ.

ಉಚಿತ ಅಮೆಜಾನ್ ಪ್ರೈಮ್:

ಉಚಿತ ಅಮೆಜಾನ್ ಪ್ರೈಮ್:

ಐಫೋನ್ EMI ಕಟ್ಟುವ ಆಷ್ಟು ದಿನಗಳ ಕಾಲ ಅಮೆಜಾನ್ ಪ್ರೈಮ್ ಸೇವೆಯನ್ನು ಬಳಕೆದಾರರು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಯಾವುದೇ ರೀತಿಯಲ್ಲಿ ದರಗಳು ಹೆಚ್ಚುವರಿಯಾಗುವುದಿಲ್ಲ.

ಡ್ಯಾಮೆಜ್ ಪ್ರೋಟೆಕ್ಷನ್:

ಡ್ಯಾಮೆಜ್ ಪ್ರೋಟೆಕ್ಷನ್:

ಇದಲ್ಲದೇ ಏರ್‌ಟೆಲ್‌ನಲ್ಲಿ ನೀವು ಐಫೋನ್ 8 ಖರೀದಿ ಮಾಡಿದ ಸಂದರ್ಭದಲ್ಲಿ ನಿಮಗೆ ಉಚಿತವಾಗಿ ಹ್ಯಾಡ್ ಸೆಟ್ ಡ್ಯಾಮೆಜ್ ಪ್ರೋಟೆಕ್ಷನ್ ಸೇವೆಯೂ ದೊರೆಯಲಿದೆ. ನಿಮ್ಮ ಹ್ಯಾಡ್‌ಸೆಟ್ ಡ್ಯಾಮೆಜ್ ಆದರೂ ಸಹ ಯಾವುದೇ ರೀತಿಯಲ್ಲಿ ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ.

ಐಫೋನ್ 8 ವಿಶೇಷತೆ:

ಐಫೋನ್ 8 ವಿಶೇಷತೆ:

ಐಫೋನ್ 8ನಲ್ಲಿ 4.7 ಇಂಚಿನ ರೆಟಿನಾ ಎಚ್‌ಡಿ ಡಿಸ್‌ಪ್ಲೇ ಅಳವಡಿಸಲಾಗಿದ್ದು, ಎಡ್ಜ್ ಟು ಎಡ್ಜ್ ಸ್ಕ್ರೀನ್ ವಿನ್ಯಾಸ ಕಾಣಬಹುದಾಗಿದೆ. ಇದಕ್ಕಾಗಿ ಐಫೋನ್ 8ನಲ್ಲಿ 12MP ಕ್ಯಾಮೆರಾ ಹೊಂದಿದ್ದು, ಅತ್ಯಾಧುನಿಕ ಲೆನ್ಸ್ ಬಳಸಲಾಗಿದೆ. ಇನ್ನು 3ಡಿ ಗೇಮ್‌ಗಳಿಗೆ ಸ್ಮಾರ್ಟ್ಗಫೋನ್ ಪೂರ್ಣ ಸಪೋರ್ಟ್ ಮಾಡಲಿದೆ. iOS 11 ನಲ್ಲಿ ಈ ಫೋನ್ ಕಾರ್ಯನಿರ್ವಹಿಸಲಿದೆ.

Best Mobiles in India

English summary
airtel give offer to buy iphone 8. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+