Subscribe to Gizbot

ಎಚ್‌ಟಿಸಿಯ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ ಏ.21ಕ್ಕೆ ಬಿಡುಗಡೆ

Posted By:

ತೈವಾನ್‌ ಮೂಲದ ಎಚ್‌ಟಿಸಿ ಕಂಪೆನಿಯ ಈ ವರ್ಷದ ದುಬಾರಿಯ ಬೆಲೆಯ ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಒನ್‌ ಎಂ8 ಏಪ್ರಿಲ್‌ 21ಕ್ಕೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಚ್‌ಟಿಸಿ ಈ ಸ್ಮಾರ್ಟ‌ಫೋನ್‌ ಬಿಡುಗಡೆ ಮಾಡಲಿದೆ.ನ್ಯಾನೋ ಸಿಮ್‌ ಹಾಕಬಹುದಾದ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಸ್ಮಾರ್ಟ್‌ಫೋನ್ ಇದಾಗಿದ್ದು,ಎಚ್‌ಟಿಸಿ ಒನ್‌ನಂತೆ ಮೆಟಲ್‌ ಬಾಡಿಯನ್ನು ಎಚ್‌ಟಿಸಿ ಈ ಸ್ಮಾರ್ಟ್‌‌‌‌ಫೋನ್‌ಗೆ ನೀಡಿದೆ.

ಸ್ಮಾರ್ಟ್‌ಫೋನ್‌ ಹಿಂದುಗಡೆ ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಇರುವ 4 ಆಲ್ಟ್ರಾ ಪಿಕ್ಸೆಲ್‌ ಡ್ಯು ಕ್ಯಾಮೆರಾ ಹೊಂದಿದ್ದು ವಸ್ತುವನ್ನು ಶೇ.300ಕ್ಕಿಂತ ಹೆಚ್ಚಿನ ಬೆಳಕಿನಲ್ಲಿ ಸೆರೆಹಿಡಿಯುವ ಸಾಮರ್ಥ್ಯ‌ ಹೊಂದಿದೆ ಎಂದು ಎಚ್‌ಟಿಸಿ ಹೇಳಿದೆ.ಜೊತೆಗೆ ವಸ್ತುವನ್ನು ಮಾತ್ರ ಫೋಕಸ್‌ ಮಾಡಿ ಅದರ ಸುತ್ತಲಿನ ದೃಶ್ಯವನ್ನು ಕಾಣದದಂತೆ ಈ ಸ್ಮಾರ್ಟ್‌‌ಫೋನ್‌‌ಲ್ಲಿ ಚೆನ್ನಾಗಿ ಮಸುಕು ಮಾಡಬಹುದಾಗಿದೆ.ಇನ್ನು ಮುಂದುಗಡೆ 5 ಎಂಪಿ ಕ್ಯಾಮೆರಾವನ್ನು ಹೊಂದಿದ್ದು, ಸೆಲ್ಫಿ ಫೋಟೋ ಕ್ಲಿಕ್ಕಿಸಲು ಟೈಮರ್‌ನ್ನು ಸಹ ಎಚ್‌ಟಿಸಿ ಈ ಸ್ಮಾರ್ಟ್‌‌ಫೋನಿಗೆ ನೀಡಿದೆ.

ಈ ಸ್ಮಾರ್ಟ್‌ಫೋನ್‌‌‌‌ ಲಾಕ್‌ ಮತ್ತು ಅನ್‌ಲಾಕ್‌ ಮಾಡಲು ಹೊಸ ವಿಶೇಷತೆಗಳನ್ನು ಎಚ್‌ಟಿಸಿ ಈ ಸ್ಮಾರ್ಟ್‌ಫೋನ್‌ಗೆ ನೀಡಿದೆ.ವಿವಿಧ ಜಾಲತಾಣಗಳ ಮಾಹಿತಿಗಳು,ಅಪ್‌ಡೇಟ್‌ಗಳು ಎಲ್ಲಾ ಸ್ಮಾರ್ಟ್‌ಫೋನಲ್ಲಿ ಒಂದೇ ಪೇಜ್‌ ನೋಡಲು ಸಾಧ್ಯವಿಲ್ಲ. ಅದಕ್ಕಾಗಿ ಎಚ್‌ಟಿಸಿ ಕಳೆದ ವರ್ಷ‌ ಈ ಎಲ್ಲಾ ಮಾಹಿತಿಗಳನ್ನು ನೋಡಲು ಬ್ಲಿಂಕ್‌ ಫೀಡ್‌‌ ಆಪ್‌ನ್ನು ತಯಾರಿಸಿದೆ. ಈ ಬ್ಲಿಂಕ್‌ ಫೀಡ್‌ ಆಪ್‌ನ್ನು ಈ ಸ್ಮಾರ್ಟ್‌‌ಫೋನಲ್ಲಿ ಹೋಮ್‌ ಸ್ಕ್ರೀನಲ್ಲೇ ಸುಲಭವಾಗಿ ಒಪನ್‌ ಮಾಡಬಹುದು. ಹೋಮ್‌ ಸ್ಕ್ರೀನ್‌ ಬಲಗಡೆಯಿಂದ ಎಡಗಡೆ ಸ್ಲೈಡ್‌ ಮಾಡಿ ಬ್ಲಿಂಕ್‌ ಫೀಡ್‌ ಆಪ್‌ ಒಪನ್‌ ಆಗುತ್ತದೆ. ಇನ್ನು ಎಡಗಡೆಯಿಂದ ಬಲಗಡೆಗೆ ಸ್ಲೈಡ್‌ ಮಾಡಿದ್ರೆ ಹೋಮ್‌ ಸ್ಕ್ರೀನ್‌ ಅನ್‌ಲಾಕ್‌ ಅಗುತ್ತದೆ.

ಎಚ್‌ಟಿಸಿಯ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ ಏ.21ಕ್ಕೆ ಬಿಡುಗಡೆ

ಎಚ್‌‌ಟಿಸಿ ಒನ್‌ ಎಂ8
ವಿಶೇಷತೆ:
ಸಿಂಗಲ್‌ ಸಿಮ್‌ (ನ್ಯಾನೋ ಸಿಮ್‌)
5 ಇಂಚಿನ ಸುಪರ್‍ ಅಮೊಲೆಡ್ ಕೆಪಾಸಿಟಿವ್‌ ಸ್ಕ್ರೀನ್‌(1080 x 1920 ಪಿಕ್ಸೆಲ್‌,441 ಪಿಪಿಐ)
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್‌ ಓಎಸ್‌
2.3 GHz ಕ್ವಾಲಕಂ ಸ್ನಾಪ್‌ಡ್ರಾಗನ್ ಕ್ವಾಡ್‌ ಕೋರ್‌ ಪ್ರೊಸೆಸರ್‍
Adreno 330 ಗ್ರಾಫಿಕ್‌ ಪ್ರೊಸೆಸರ್‌
16/32ಜಿಬಿ ಆಂತರಿಕ ಮೆಮೊರಿ
2 GB ರ್‍ಯಾಮ್‌
ಹಿಂದುಗಡೆ 4 ಆಲ್ಟ್ರಾ ಪಿಕ್ಸೆಲ್‌ ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಕ್ಯಾಮೆರಾ
ಮುಂದುಗಡೆ 5 ಎಂಪಿ ಕ್ಯಾಮೆರಾ
128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,4ಜಿ,ಬ್ಲೂಟೂತ್‌,ಜಿಪಿಎಸ್‌,ಎನ್‌ಎಫ್‌ಸಿ,
ಎಕ್ಸಲರೋಮೀಟರ್‌,ಲೈಟ್‌,ಗೈರೋ,ಪ್ರಾಕ್ಸಿಮಿಟಿ,ಕಂಪಾಸ್‌
2600 mAh ಬ್ಯಾಟರಿ


ಇದನ್ನೂ ಓದಿ: ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot