ಶಿಯೋಮಿಯಿಂದ ಹೊಸದಾಗಿ 'R' ಸರಣಿಯ ಸ್ಮಾರ್ಟ್‌ಫೋನ್: ಬೆಲೆ ಎಷ್ಟು? ಬಿಡುಗಡೆ ಎಂದು?
ಈ ಹೊಸ ಸ್ಮಾರ್ಟ್‌ಫೋನ್ ನೂತನ ಸರಣಿಯ ಸ್ಮಾರ್ಟ್‌ಫೋನ್ ಆಗಲಿದ್ದು, ಶಿಯೋಮಿ ಹೊಸದಾಗಿ 'R' ಸರಣಿಯ ಸ್ಮಾರ್ಟ್‌ಫೋನ್ ಅನ್ನು ಮಾರಕಟ್ಟೆಗೆ ಪರಿಚಯ ಮಾಡಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ನೂತನ ಸ್ಮಾರ್ಟ್‌ಫೋನ್ ಶಿಯೋಮಿ R1 ಎನ್ನಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಭದ್ರವಾಗಿ ತಳವೂರಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ, ಭಾರತದಲ್ಲಿಯೇ ತನ್ನ ಸ್ಮಾರ್ಟ್‌ಫೋನ್ ಸೇರಿದಂತೆ ಮೊಬೈಲ್ ಪರಿಕರಗಳನ್ನು ತಯಾರಿಸುವ ಕಾರ್ಯಕ್ಕೆ ಮುಂದಾಗಿದೆ. ಇದೇ ಮಾದರಿಯಲ್ಲಿ ಇದೇ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿಯೇ ನಿರ್ಮಾಣವಾದ ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಿದ್ಧತೆಯನ್ನು ನಡೆಸಿದೆ.

ಓದಿರಿ: ಜಿಯೋ ಪ್ರೈಮ್ ಸದಸ್ಯರಿಗೆ ಮತ್ತೊಂದು ಸುವರ್ಣಾವಕಾಶ ನೀಡಿದ ಅಂಬಾನಿ..!
ಮೂಲಗಳ ಪ್ರಕಾರ ಈ ಹೊಸ ಸ್ಮಾರ್ಟ್‌ಫೋನ್ ನೂತನ ಸರಣಿಯ ಸ್ಮಾರ್ಟ್‌ಫೋನ್ ಆಗಲಿದ್ದು, ಶಿಯೋಮಿ ಹೊಸದಾಗಿ 'R' ಸರಣಿಯ ಸ್ಮಾರ್ಟ್‌ಫೋನ್ ಅನ್ನು ಮಾರಕಟ್ಟೆಗೆ ಪರಿಚಯ ಮಾಡಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ನೂತನ ಸ್ಮಾರ್ಟ್‌ಫೋನ್ ಶಿಯೋಮಿ R1 ಎನ್ನಲಾಗಿದೆ.

ಫುಲ್ ಸ್ಕ್ರಿನ್ ವಿನ್ಯಾಸ:
ಫುಲ್ ಸ್ಕ್ರಿನ್ ವಿನ್ಯಾಸದಿಂದ ಕೂಡಿರುವ ಈ ಶಿಯೋಮಿ R1 ಸ್ಮಾರ್ಟ್‌ಫೋನ್ ಫೋಟೋಗಳು ಲೀಕ್ ಆಗಿದ್ದು, ಈ ಸ್ಮಾರ್ಟ್‌ಫೋನ್ ಈಗಾಗಲೇ ಪರೀಕ್ಷೆಯ ಹಂತದಲ್ಲಿದೆ ಎನ್ನಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ತೆಗೆದ ಚಿತ್ರಗಳು ಸದ್ಯ ವೈರಲ್ ಆಗಿದೆ.

ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್:
ಶಿಯೋಮಿ R1 ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಈ ಹಿಂದೆಯೋ ಶಿಯೋಮಿ ತನ್ನ ಸ್ಮಾರ್ಟ್‌ಪೋನ್‌ಗಳ ಹಿಂಭಾಗದಲ್ಲಿಯೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡುತ್ತಿತ್ತು, ಆದರೆ ಪರಿಪಾಠವನ್ನು ಮುಂದುವರೆಸಿಕೊಂದು ಹೋಗುತ್ತಿದೆ.

ಬೆಲೆ..?
ಈ ಶಿಯೋಮಿ R1 ಸ್ಮಾರ್ಟ್‌ಫೋನಿನ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ. ಈ ಫೋನ್ ರೂ. 14,500ರ ಅಸುಪಾಸಿನಲ್ಲಿ ಲಾಂಚ್ ಆಗುವ ಸಾಧ್ಯತೆಗಳಿದ್ದು, ಅಲ್ಲದೇ ಎರಡರಿಂದ ಮೂರು ಆವೃತ್ತಿಯಲ್ಲಿ ಈ ಫೋನ್ ದೊರೆಯಲಿದೆ.


Click it and Unblock the Notifications