ಜಿಯೋ ಪ್ರೈಮ್ ಸದಸ್ಯರಿಗೆ ಮತ್ತೊಂದು ಸುವರ್ಣಾವಕಾಶ ನೀಡಿದ ಅಂಬಾನಿ..!

|

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಮತ್ತೊಂದು ಭರ್ಜರಿ ಆಫರ್ ಘೋಷಣೆ ಮಾಡಿದೆ. ಇದೇ ನವೆಂಬರ್ ತಿಂಗಳ 9 ರಂದು ಟ್ರಿಪಲ್ ಕ್ಯಾಷ್ ಬ್ಯಾಕ್ ಆಫರ್ ಘೋಷಣೆ ಮಾಡಿದ್ದ ಜಿಯೋ, ಆ ಆಫರ್ ವ್ಯಾಲಿಡಿಟಿಯನ್ನು ವಿಸ್ತರಣೆ ಮಾಡಿದೆ. ಡಿಸೆಂಬರ್ 15ರ ವರೆಗೂ ಈ ಆಫರ್ ಅವಧಿಯೂ ವಿಸ್ತರಣೆಯಾಗಿದೆ ಎನ್ನಲಾಗಿದೆ.

ಜಿಯೋ ಪ್ರೈಮ್ ಸದಸ್ಯರಿಗೆ ಮತ್ತೊಂದು  ಟ್ರಿಪಲ್ ಕ್ಯಾಷ್ ಬ್ಯಾಕ್

ಓದಿರಿ: ಚೀನಾ ಸ್ಮಾರ್ಟ್‌ಫೋನ್‌ಗಳ ದಹನಕ್ಕೆ ಸ್ಯಾಮ್‌ಸಂಗ್‌ನಿಂದ ಹೊಸ ಅಸ್ತ್ರ..!

ನವೆಂಬರ್ 25ಕ್ಕೆ ಟ್ರಿಪಲ್ ಕ್ಯಾಷ್ ಬ್ಯಾಕ್ ಆಫರ್ ಕೊನೆಯಾಗಲಿದೆ ಎಂದು ತಿಳಿಸಿದ್ದ ಜಿಯೋ, ಮತ್ತೇ ಈ ಆಫರ್ ಅನ್ನು ವಿಸ್ತರಣೆ ಮಾಡಿದೆ. ಡಿಸೆಂಬರ್ 15ರ ವರೆಗೂ ಈ ಆಫರ್ ಚಾಲ್ತಿಯಲ್ಲಿರಲಿದೆ ಎಂದು ತಿಳಿಸಿದೆ. ಈ ಮೂಲಕ ಜಿಯೋ ಬಳಕೆದಾರರು ಈ ಯೋಜನೆಯ ಲಾಭವನ್ನು ಮತ್ತಷ್ಟು ದಿನ ಪಡೆಯುವ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ.

ರೂ.2599ರಷ್ಟು ಲಾಭ:

ರೂ.2599ರಷ್ಟು ಲಾಭ:

ಜಿಯೋ ಬಳಕೆದಾರರು ರೂ.399 ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯಕ್ಕೆ ರಿಚಾರ್ಜ್ ಮಾಡಿಸಿಕೊಂಡ ಸಂದರ್ಭದಲ್ಲಿ ರೂ. 2599ರ ವರೆಗೆ ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ. ಈ ಆಫರ್ ಕೇವಲ ಜಿಯೋ ಪ್ರೈಮ್ ಸದಸ್ಯರಿಗೆ ಮಾತ್ರವೇ ಲಭ್ಯ ಎನ್ನಲಾಗಿದೆ.

ಜಿಯೋ ಕ್ಯಾಷ್ ಬ್ಯಾಕ್;

ಜಿಯೋ ಕ್ಯಾಷ್ ಬ್ಯಾಕ್;

ಜಿಯೋ ಮೂರು ವಿಭಾಗದಲ್ಲಿ ಕ್ಯಾಷ್ ಬ್ಯಾಕ್ ನೀಡಲಿದೆ. ಮೊದಲ ವಿಭಾಗದಲ್ಲಿ ಎಂಟು ಹಂತದ ಕ್ಯಾಷ್ ಬ್ಯಾಕ್ ನೀಡಲಿದೆ. ಅದುವೇ ರೂ.400 (50 x 8) ಲಾಭವನ್ನು ಮಾಡಿಕೊಡಲಿದೆ. ಇದು ನವೆಂಬರ್ 15 ರಿಂದ ದೊರೆಯಲಿದೆ ಎನ್ನಲಾಗಿದೆ. ಇದಕ್ಕಾಗಿ ಮೈ ಜಿಯೋ ಆಪ್‌ನಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

ಡಿಜಿಟಲ್ ಪಾಟ್ನರ್ ಗಳ ಮೂಲಕ:

ಡಿಜಿಟಲ್ ಪಾಟ್ನರ್ ಗಳ ಮೂಲಕ:

ಎರಡನೇ ವಿಭಾಗದಲ್ಲಿ ಜಿಯೋ ತನ್ನ ಡಿಜಿಟಲ್ ಪಾಟ್ನರ್ ಗಳ ಮೂಲಕ ರೀಚಾರ್ಜ್ ಮಾಡಿಸಿಕೊಂಡರೆ ರೂ. 300ರ ವರೆಗೂ ಕ್ಯಾಷ್ ಬ್ಯಾಕ್ ನೀಡಿದೆ. ಇವುಗಳನ್ನು ಈ ಕಾರ್ಮಸ್ ವೋಚರ್ ಗಳಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ. ಇದು ಅಮೆಜಾನ್ ಪೇ, ಆಕ್ಸಿಸ್ ಪೇ, ಫ್ರೀಚಾರ್ಜ್, ಮೊಬಿಕ್ವೀಕ್, ಪೇಟಿಎಂ ಮತ್ತು ಫೋನ್ ಪೇ ಗಳಿಗೆ ಮಾತ್ರವೇ ಸೀಮಿತವಾಗಿದೆ.

ವೋಚರ್‌ಗಳನ್ನು ನೀಡಲಿದೆ:

ವೋಚರ್‌ಗಳನ್ನು ನೀಡಲಿದೆ:

ಜಿಯೋ ತನ್ನ ಬಳಕೆದಾರರು ರೂ.1899ರ ವರೆಗೂ ವೋಚರ್ ಗಳನ್ನು ಪಡೆದುಕೊಳ್ಳಲಿದ್ದಾರೆ. ಇದು Ajio, ರಿಲಯನ್ಸ್ ಗ್ರೂಪ್ ಇ-ಕಾರ್ಮಸ್ ಸೈಟ್‌ಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಕನಿಷ್ಠ ರೂ.1500ಕ್ಕೆ ಖರೀದಿಸಿದರೆ ಈ ವೋಚರ್ ಗಳು ಬಳಕೆಗೆ ದೊರೆಯಲಿದೆ.

Best Mobiles in India

English summary
Reliance Jio Extends the Triple Cashback Offer Until December 15. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X