ಅಮೆಜಾನ್‌ನಲ್ಲಿ ಐಫೋನ್ ಜಾತ್ರೆ: ಬೆಲೆಗಳೂ ಹೋಲ್‌ಸೇಲ್‌ನಲ್ಲಿ....!
ಅಮೆಜಾನ್ ಮತ್ತೊಂಮ್ಮೆ ಆಪಲ್ ಸ್ಮಾರ್ಟ್‌ಫೋನ್‌ಗಳ ಸೇಲ್ ಆರಂಭಿಸಿದ್ದು, ಐಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಅನ್ನು ನೀಡಲು ಮುಂದಾಗಿದೆ. ಐಫೋನ್ ಕೊಳ್ಳುವವರಿಗೆ ಇದಕ್ಕಿಂತ ಒಳ್ಳೆ ಆಫರ್ ಬೇರೆ ಎಲ್ಲಿಯೂ ಕಾಣಲು ಸಿಗುವುದಿಲ್ಲ ಎನ್ನಲಾಗಿದೆ. ಐಪೋನ್ 7, ಐಫೋನ್ SE ಮತ್ತು ಐಪೋನ್ 6 ಗಳ ಮೇಲೆ ಭರ್ಜರಿ ಆಫರ್ ಗಳನ್ನು ಇಲ್ಲಿ ಕಾಣಬಹುದಾಗಿದೆ.

ಓದಿರಿ: ಜಿಯೋ ಪ್ರೈಮ್ ಸದಸ್ಯರಿಗೆ ಮತ್ತೊಂದು ಸುವರ್ಣಾವಕಾಶ ನೀಡಿದ ಅಂಬಾನಿ..!
ಇದಲ್ಲದೇ HDFC ಕಾರ್ಡುದಾರರಿಗೆ ಐಫೋನ್ ಬೆಲೆಯಲ್ಲಿ ರೂ. 2000ದ ವರೆಗೂ ಹೆಚ್ಚುವರಿ ಕಡಿತವನ್ನು ನೀಡಲು ಮುಂದಾಗಿದೆ. ಇದಲ್ಲದೇ ಅಮೆಜಾನ್‌ನಲ್ಲಿ ಐಫೋನ್ 8, ಐಪೋನ್ 8 ಪ್ಲಸ್ ಮತ್ತು ಐಫೋನ್ X ಸಹ ಮಾರಾಟವಾಗುತ್ತಿದ್ದು, ಆದರೆ ಯಾವುದೇ ಆಫರ್‌ಗಳು ಇದರ ಮೇಲೆ ಲಭ್ಯವಿಲ್ಲ ಎನ್ನಲಾಗಿದೆ.

ಐಫೋನ್ 7:
ಅಮೆಜಾನ್‌ನಲ್ಲಿ 32 GB ಐಫೋನ್ 7 ರೂ.41,999ಕ್ಕೆ (ಅಸಲಿ ಬೆಲೆ ರೂ,54,999) ಮಾರಾಟವಾಗುತ್ತಿದೆ. 128GB ಆವೃತ್ತಿಯೂ ರೂ,55,500 (ಅಸಲಿ ಬೆಲೆ ರೂ.67,849) ಮಾರಾಟವಾಗಲಿದ್ದು, 256GB ಆವೃತ್ತಿ ರೂ.58,490ಕ್ಕೆ (ಅಸಲಿ ಬೆಲೆ ರೂ. 79,990) ದೊರೆಯಲಿದೆ.

ಐಫೋನ್ 6 ಎಸ್:
ಅಮೆಜಾನ್‌ನಲ್ಲಿ 32 GB ಐಫೋನ್ 6 ಎಸ್ ರೂ. 36,999ಕ್ಕೆ(ಅಸಲಿ ಬೆಲೆ ರೂ 43,830), 128 GB ರೂ. 49,990ಕ್ಕೆ ಮಾರಾಟವಾಗುತ್ತಿದ್ದು, ಐಫೋನ್ ಖರೀದಿಗೆ ಇದು ಸುಸಂಧರ್ಭವಾಗಲಿದೆ.

ಐಫೋನ್ 6:
ಅಮೆಜಾನ್‌ನಲ್ಲಿ ಐಫೋನ್ 6 32GB ರೂ. 25,999ಕ್ಕೆ ಹಾಗೂ 128GB ಐಫೋನ್ 6 ರೂ. 48,800ಕ್ಕೆ ದೊರೆಯುತ್ತಿದ್ದು, 64GB ಆವೃತ್ತಿ ಔಟ್ ಆಫ್ ಸ್ಟಾಕ್ ಆಗಿದೆ.


ಐಫೋನ್ SE:
ಐಫೋನ್ SE 16 GB ರೂ.18,990ಕ್ಕೆ ಲಭ್ಯವಿದೆ. ಗೋಲ್ಡ್ ಮತ್ತು ರೋಸ್ ಗೋಲ್ಡ್ ಐಫೋನ್ SE 32 GB ಆವೃತ್ತಿ ರೂ 20,000ಕ್ಕೆ ದೊರೆಯುತ್ತಿದೆ. ಸ್ಪೇಸ್ ಗ್ರೇ 32 GB ರೂ. 23,999 ರೂ. ಸ್ಪೇಸ್ ಗ್ರೇ ಮತ್ತು ಸಿಲ್ವರ್ ಆವೃತ್ತಿ 128GB ರೂಪಾಂತರದ ಬೆಲೆ ರೂ. 28,449ಕ್ಕೆ ಲಭ್ಯವಿದೆ.


Click it and Unblock the Notifications








