Subscribe to Gizbot

ಸ್ಯಾಮ್‌ಸಂಗ್‌ನ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆ

Posted By:

ಸ್ಯಾಮ್‌ಸಂಗ್‌ ತನ್ನ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ದಿಢೀರ್‌ ಇಳಿಕೆ ಮಾಡಿದೆ. ತನ್ನ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಮಿನಿ ಮತ್ತು ಗೆಲಾಕ್ಸಿ ಎಸ್‌ 3 ಬೆಲೆಯನ್ನು ಅಂದಾಜು ಸುಮಾರು ಮೂರು ಸಾವಿರ ರೂಪಾಯಿ ಕಡಿತ ಮಾಡಿದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಮಿನಿ ಇದೇ ಏಪ್ರಿಲ್‌ನಲ್ಲಿ 27,990 ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು.ಈಗ ಸ್ಮಾರ್ಟ್‌ಫೋನ್‌ಗೆ ಸ್ಯಾಮ್‌ಸಂಗ್ ನಾಲ್ಕು ಸಾವಿರ ರೂಪಾಯಿ ಕಡಿಮೆ ಮಾಡಿದ್ದು 23,360 ರೂ ನಿಗದಿ ಮಾಡಿದ್ದು ಸ್ಯಾಮ್‌ಸಂಗ್‌ ಈ ಸ್ಟೋರ್‌ನಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ಸ್ಯಾಮ್‌ಸಂಗ್‌ನ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆ

ಇನ್ನೂ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 3ಗೆ ಇದೇ ಏಪ್ರಿಲ್‌ನಲ್ಲಿ 28,900 ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿತ್ತು. ಆದರೆ ಈಗ16 GBಯ ಸ್ಮಾರ್ಟ್‌ಫೋನ್‌ಗೆ 25,400 ರೂಪಾಯಿ ಬೆಲೆ ನಿಗದಿ ಮಾಡಿದ್ದು ಸ್ಯಾಮ್‌ಸಂಗ್‌ ಈ ಸ್ಟೋರ್‌ನಲ್ಲಿ ಲಭ್ಯವಿದೆ.


ಸ್ಯಾಮ್‌ಸಂಗ್‌ ತನ್ನ ಈ ಸ್ಟೋರ್‌ನಲ್ಲೂ ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿಮೆ ಮಾಡಿದ್ದರೂ ಆನ್‌ಲೈನ್‌ ಶಾಪಿಂಗ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಸ್ಯಾಮ್‌ಸಂಗ್‌ ಇ ಸ್ಟೋರ್‌ ಬೆಲೆಗಿಂತಲೂ ಕಡಿಮೆ ಬೆಲೆಯನ್ನು ಪ್ರಕಟಿಸಿದೆ. ಗೆಲಾಕ್ಸಿ ಎಸ್‌ 3ಗೆ 24,900 ಬೆಲೆಯನ್ನು ಪ್ರಕಟಿಸಿದ್ದರೆ,ಗೆಲಾಕ್ಸಿ ಎಸ್‌ 4 ಮಿನಿಗೆ 22,080 ಬೆಲೆಯನ್ನು ನಿಗದಿ ಮಾಡಿದೆ.

ಇದನ್ನೂ ಓದಿ:ಟಾಪ್‌ ಮೈಕ್ರೋಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ಗಳ ಬೆಲೆ ದಿಢೀರ್‌ ಇಳಿಕೆ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot