Home
ಮೊಬೈಲ್

ಆಂಡ್ರಾಯ್ಡ್ 7.0 'ನ್ಯೂಗಾ' ಓಎಸ್‌ ನೆಕ್ಸಸ್ ಸ್ಮಾರ್ಟ್‌ಫೋನ್‌ಗೆ ಇಂದಿನಿಂದ ಅಪ್‌ಡೇಟ್‌

By Suneel

ಗೂಗಲ್‌ ತನ್ನ ಲೇಟೆಸ್ಟ್‌ ಓಎಸ್‌ ಆಂಡ್ರಾಯ್ಡ್ 7.0 ನ್ಯೂಗಾ ಅಪ್‌ಡೇಟ್‌ ಅನ್ನು ಆರಂಭಿಸಿದ್ದು, ನ್ಯೂಗಾ ಓಎಸ್‌ ನೆಕ್ಸಸ್‌ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌ಗಳಿಗೆ ದೊರೆಯಲಿದೆ. ಆಂಡ್ರಾಯ್ಡ್‌ ಮಾರ್ಷ್‌ಮಲ್ಲೊ ನಂತರ ಅಭಿವೃದ್ದಿಪಡಿಸಿರುವ ಹೊಸ ಓಎಸ್‌ ನ್ಯೂಗಾ ಹಲವು ವಿಶೇಷತೆಗಳನ್ನು ಹೊಂದಿದೆ. ನ್ಯೂಗಾ ಓಏಸ್‌ ಅಪ್‌ಡೇಟ್‌ ಆದ ಸ್ಮಾರ್ಟ್‌ಫೋನ್‌ಗಳಲ್ಲಿ ಮಲ್ಟಿ ವಿಂಡೋಸ್‌ಗಳನ್ನು ಓಪನ್‌ ಮಾಡಿ ಒಂದೇ ಸಮಯದಲ್ಲಿ ಎರಡು ಆಪ್‌ಗಳನ್ನು ಎರಡು ಸೈಡ್‌ಗಳಲ್ಲೂ ಸಹ ಉಪಯೋಗಿಸಬಹುದಾಗಿದೆ.

ಆಂಡ್ರಾಯ್ಡ್ 7.0 'ನ್ಯೂಗಾ' ಓಎಸ್‌ ನೆಕ್ಸಸ್ ಫೋನ್‌ಗೆ ಇಂದಿನಿಂದ ಅಪ್‌ಡೇಟ್‌

ಸುಧಾರಿತ ನೋಟಿಫಿಕೇಶನ್ ಆನ್‌ಲೈನ್‌ ರೀಪ್ಲೇ, ಬ್ಯಾಗ್ರೌಂಡ್ ಡಾಟಾ ನಿರ್ಬಂಧನೆ, ಬ್ಯಾಟರಿ ಲೈಫ್‌ ಹೆಚ್ಚಿಸುವ ಡೋಜ್ ಮೋಡ್‌ಗಳನ್ನು ನ್ಯೂಗಾ ಓಎಸ್‌ನಿಂದ ನಿರ್ವಹಿಸಬಹುದಾಗಿದೆ. ಗೂಗಲ್‌ ಎಮೋಜಿ ಯುನಿಕೋಡ್‌ 9, ವುಲ್ಕಾನ್‌ ಗ್ರಾಫಿಕ್ಸ್‌ ಎಪಿಐ ಮತ್ತು ಮೀಸಲಿಟ್ಟ ವಿಆರ್‌ ಮೋಡ್‌ ಅನ್ನು ಸಪೋರ್ಟ್‌ ಮಾಡುವಂತೆ ಅಭಿವೃದ್ದಿಪಡಿಸಿದೆ. ಅಂದಹಾಗೆ ಈ ಅಪ್‌ಡೇಟ್‌ ಓಟಿಎ (Over-the=air) ಮೂಲಕ ಜಾರಿಗೊಂಡಿದ್ದು, ನೆಕ್ಸಸ್‌ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್‌ ಮಾಡಬಹುದಾಗಿದೆ.

ಆಂಡ್ರಾಯ್ಡ್ 7.0 'ನ್ಯೂಗಾ' ಓಎಸ್‌ ನೆಕ್ಸಸ್ ಫೋನ್‌ಗೆ ಇಂದಿನಿಂದ ಅಪ್‌ಡೇಟ್‌

ಅಂದಹಾಗೆ ಗೂಗಲ್‌ನ ಆಂಡ್ರಾಯ್ಡ್ 7.0 ನ್ಯೂಗಾ ಓಎಸ್‌ ಸಪೋರ್ಟ್ ಮಾಡುವ ಡಿವೈಸ್‌ಗಳೆಂದರೆ " ನೆಕ್ಸಸ್‌ ಸ್ಮಾರ್ಟ್‌ಫೋನ್‌ ಮತ್ತು ಟ್ಯಾಬ್ಲೆಟ್‌. ನೆಕ್ಸಸ್ 5X ಮತ್ತು ನೆಕ್ಸಸ್ 6P, ನೆಕ್ಸಸ್ 6, ನೆಕ್ಸಸ್ 9, ನೆಕ್ಸಸ್ ಪ್ಲೇಯರ್ ಮತ್ತು ಪಿಕ್ಸೆಲ್‌ ಸಿ ಟ್ಯಾಬ್ಲೆಟ್‌. ಆದರೆ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಮಾರ್ಷ್‌ಮಲ್ಲೊ 6.01 ಓಎಸ್‌ ಸಪೋರ್ಟ್ ಮಾಡುವಲ್ಲಿ ಕೊನೆಗೊಂಡಿವೆ. ಇತರೆ ಸ್ಮಾರ್ಟ್‌ಫೋನ್‌ಗಳಾದ ಸ್ಯಾಮ್‌ಸಂಗ್‌, ಎಲ್‌ಜಿ, ಎಚ್‌ಟಿಸಿ ಮತ್ತು ಶ್ಯೋಮಿ ಕಂಪನಿ ಡಿವೈಸ್‌ಗಳಿಗೆ ತಡವಾಗಿ ಅಪ್‌ಡೇಟ್‌ ಮಾಡಲು ನಿರ್ಧರಿಸಿದೆ.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಏರ್‌ಟೆಲ್‌ನಿಂದ 10GB 4G ಡಾಟಾ

Best Mobiles in India

English summary
Android 7.0 Nougat update on your Nexus smartphone today. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+