Subscribe to Gizbot

ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಏರ್‌ಟೆಲ್‌ನಿಂದ 10GB 4G ಡಾಟಾ ಆಫರ್

Written By:

ಏರ್‌ಟೆಲ್‌ ಶುಕ್ರವಾರ (ಆಗಸ್ಟ್‌ 19) ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ ಖರೀದಿದಾರರಿಗೆ 10GB 4G ಇಂಟರ್ನೆಟ್‌ ಡಾಟಾ ಆಫರ್ ನೀಡುವ ಬಗ್ಗೆ ಮಾಹಿತಿ ಪ್ರಕಟಣೆಗೊಳಿಸಿದೆ.

ಅಂದಹಾಗೆ ಏರ್‌ಟೆಲ್‌ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್ ಖರೀದಿದಾರರಿಗಾಗಿ ಪ್ರಕಟಣೆಗೊಳಿಸಿರುವ 10GB 4G ಇಂಟರ್ನೆಟ್‌ ಡಾಟಾ 3G ಏರ್‌ಟೆಲ್‌ ನೆಟ್‌ವರ್ಕ್‌ನಲ್ಲೂ ಬಳಸಬಹುದಾಗಿದೆ. ಈ ಆಫರ್ ಹೊಸ ಏರ್‌ಟೆಲ್‌ ಗ್ರಾಹಕರಿಗೆ ಮತ್ತು ಈಗಾಗಲೇ ಏರ್‌ಟೆಲ್‌ ಬಳಸುತ್ತಿರುವವರಿಗೆ ದೊರೆಯಲಿದ್ದು, 10GB 4G ಇಂಟರ್ನೆಟ್‌ ಡಾಟಾ ಪಡೆಯುವುದು ಹೇಗೆ, ಎಲ್ಲಿ, ಯಾರಿಗೆ ಈ ಆಫರ್ ದೊರೆಯಲಿದೆ ಎಂದು ತಿಳಿಯಲು ಫೋಟೋ ಕ್ಲಿಕ್‌ ಮಾಡಿ ಲೇಖನ ಓದಿರಿ.

ಏರ್‌ಟೆಲ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್‌ನಿಂದ 10GB 4G ಡಾಟಾ ಆಫರ್‌

ಏರ್‌ಟೆಲ್‌ನಿಂದ 10GB 4G ಡಾಟಾ ಆಫರ್‌

ಏರ್‌ಟೆಲ್‌ ಶುಕ್ರವಾರ ಪ್ರಕಟಣೆಗೊಳಿಸಿರುವ 10GB 4G ಇಂಟರ್ನೆಟ್‌ ಡಾಟಾ ಆಫರ್ 'ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಜೆ' ಸೀರೀಸ್‌ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ಸಿಗಲಿದೆ. ಈ ಆಫರ್‌ ಏರ್‌ಟೆಲ್‌ನ ಹೊಸ ಗ್ರಾಹಕರು ಮತ್ತು ಹಳೆಯ ಪ್ರೀಪೇಡ್‌ ಗ್ರಾಹಕರಿಗೆ ದೊರೆಯಲಿದ್ದು, ಇವರುಗಳು ಬೆಲೆ ರೂ. 250 ಕ್ಕೆ 10GB 4G ಇಂಟರ್ನೆಟ್‌ ಡಾಟಾ ಪಡೆಯಬಹುದಾಗಿದೆ.

ಸೂಚನೆ

ಸೂಚನೆ

10GB 4G ಇಂಟರ್ನೆಟ್‌ ಡಾಟಾ ಆಫರ್‌ ಕೇವಲ ಯಾರು 'ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಜೆ ಸೀರೀಸ್‌ ಸ್ಮಾರ್ಟ್‌ಫೋನ್‌' ಸೆಲೆಕ್ಟ್‌ ಮಾಡುತ್ತಾರೋ ಅವರಿಗೆ ಅಪ್ಲೆ ಆಗಲಿದ್ದು, ಸ್ಯಾಮ್‌ಸಂಗ್‌ ಅಥವಾ ಏರ್‌ಟೆಲ್‌ ನಿಖರವಾಗಿ ಯಾವ ಡಿವೈಸ್‌ಗಳಿಗೆ ಡಾಟಾ ಆಫರ್‌ ಸಿಗಲಿದೆ ಎಂದು ಹ್ಯಾಂಡ್‌ಸೆಟ್‌ ಆಫರ್‌ಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್‌ ಅನ್ನು ಶೀಘ್ರದಲ್ಲಿ ಮಾಡುತ್ತವಂತೆ.

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಜೆ ಸೀರೀಸ್‌ ಸ್ಮಾರ್ಟ್‌ಫೋನ್‌ ಮಾಲೀಕರು

ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಜೆ ಸೀರೀಸ್‌ ಸ್ಮಾರ್ಟ್‌ಫೋನ್‌ ಮಾಲೀಕರು

ಹೊಸ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಜೆ ಸೀರೀಸ್‌ ಸ್ಮಾರ್ಟ್‌ಫೋನ್‌ ಮಾಲೀಕರು ಆಫರ್‌ ಪಡೆಯಲು ಹತ್ತಿರದ ಏರ್‌ಟೆಲ್‌ ರೀಟೇಲ್‌ ಶಾಪ್‌ಗೆ ಹೋಗಿ ಆಫರ್‌ ಆಕ್ಟಿವೇಟ್‌ ಮಾಡಿ ಎಂದು ಕೇಳಬಹುದು. ಅಥವಾ ಅದೇ ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಟೆಲ್‌ ಮೊಬೈಲ್‌ ಇಂಟರ್ನೆಟ್ ಬಳಸಿ "ww.offers.airtel.com" ಲಾಗಿನ್‌ ಆಗಿ ನಂತರ ಸೂಚನೆಗಳನ್ನು ಪಾಲಿಸಿರಿ. ಆದರೆ ವೈಫೈ ನೆಟ್‌ವರ್ಕ್‌ ಬಳಸಿ ಲಾಗಿನ್‌ ಆಗಬಾರದು.

3G ನೆಟ್‌ವರ್ಕ್‌ನಲ್ಲೂ ಬಳಕೆ

3G ನೆಟ್‌ವರ್ಕ್‌ನಲ್ಲೂ ಬಳಕೆ

ಹೊಸ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಜೆ ಸೀರೀಸ್‌ ಸ್ಮಾರ್ಟ್‌ಫೋನ್‌ ಬಳಕೆದಾರರು ತಮ್ಮ ಸುತ್ತಮುತ್ತಲಿನಲ್ಲಿ 4G ನೆಟ್‌ವರ್ಕ್‌ ಇಲ್ಲದಿದ್ದಲ್ಲಿ 3G ನೆಟ್‌ವರ್ಕ್‌ನಲ್ಲೂ 10GB 3G ಡಾಟಾ ಪಡೆಯಬಹುದು. ಹಗಲಿನ ವೇಳೆ 1GB ಬಳಸಿ ರಾತ್ರಿ ವೇಳೆ 9GB 3G ಡಾಟಾ ಬಳಸಬಹುದು.

ಅಜಯ್ ಪೂರಿ

ಅಜಯ್ ಪೂರಿ

" ಸ್ಯಾಮ್‌ಸಂಗ್‌ ಜೆ ಸೀರೀಸ್‌ನೊಂದಿಗೆ ಸಹಯೋಗ ವಿಸ್ತರಿಸಲು ಸಂತೋಷವಾಗುತ್ತದೆ. ಈ ಪಾಲುದಾರಿಕೆ ಗ್ರಾಹಕರಿಗೆ 4G ನೆಟ್‌ವರ್ಕ್‌ನಲ್ಲಿ ಉತ್ತಮ ಅನುಭವ ನೀಡಲು ಸಹಕಾರಿಯಾಗಲಿದೆ ಎಂದು ನಂಬಿದ್ದೇವೆ" ಎಂದು ಆಫರ್‌ ಲಾಂಚ್‌ ಮಾಡಿದ ಭಾರತಿ ಏರ್‌ಟೆಲ್‌ ಮಾರುಕಟ್ಟೆ ಕಾರ್ಯಾಚರಣೆ ನಿರ್ದೇಶಕ 'ಅಜಯ್‌ ಪೂರಿ' ಹೇಳಿದ್ದಾರೆ. ಟೆಲಿಕಾಂ ಆಪರೇಟರ್‌ ಈ ಹಿಂದೆ ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ಜೆ ಸೀರೀಸ್‌ನೊಂದಿಗೆ 'ಡಬಲ್‌ ಡಾಟಾ' ಆಫರ್‌ ಅನ್ನು ಡಿವೈಸ್‌ಗಳ ಜೊತೆ ನೀಡಿತ್ತು.

ಗಿಜ್‌ಬಾಟ್‌

ಗಿಜ್‌ಬಾಟ್‌

ಏರ್‌ಟೆಲ್‌ನಲ್ಲಿ ಉಚಿತ ರೀಚಾರ್ಜ್‌ ಪಡೆಯುವುದು ಹೇಗೆ?

ಸುಂದರ ಏರ್‌ಟೆಲ್‌ ಆಫೀಸ್‌ ಇಲ್ಲಿದೆ ನೋಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Airtel on Friday announced 10GB 4G data offer for buyers of Samsung Galaxy J Series smartphones. The offer is available to both existing and new Airtel prepaid users, who can avail 10GB of 4G data for Rs. 250.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot