ಸ್ಮಾರ್ಟ್‌ಫೋನ್ ಓಎಸ್ ಮಾರುಕಟ್ಟೆ: ಆಂಡ್ರಾಯ್ಡ್ ನಂ.1
ಇಂಟರ್‌ನೆಟ್ ದಿಗ್ಗಜ ಗೂಗಲ್‌ಗೆ ಮತ್ತೊಂದು ಪಟ್ಟ ಲಭಿಸಿದೆ.ಸ್ಮಾರ್ಟ್‌ಫೋನ್ ಆಪರೇಟಿಂಗ್ ಸಿಸ್ಟಂನಲ್ಲಿ ನಂ. 1 ಸ್ಥಾನವನ್ನು ಆಂಡ್ರಾಯ್ಡ್ ತನ್ನಲ್ಲೇ ಉಳಿಸಿಕೊಂಡಿದೆ. ವಿಶ್ವದ ಐಟಿ ಕಂಪೆನಿಗಳ ವಿವಿಧ ಉತ್ಪನ್ನಗಳ ಬಗ್ಗೆ ಅಧ್ಯಯನ ನಡೆಸುವ ಐಡಿಸಿ ಹೊಸ ವರದಿ ನೀಡಿದ್ದು, ಕಳೆದ ವರ್ಷ 79.36 ಕೋಟಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ವಿಶ್ವದ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಸ್ಮಾರ್ಟ್‌ಫೋನ್ ಓಎಸ್‌ನಲ್ಲಿ ಎರಡನೇ ಸ್ಥಾನವನ್ನು ಆಪಲ್ ಐಓಎಸ್, ಮೂರನೇ ಸ್ಥಾನವನ್ನು ವಿಂಡೋಸ್ ಫೋನ್ ಓಎಸ್ ಪಡೆದುಕೊಂಡಿದೆ. ಆಂಡ್ರಾಯ್ಡ್,ಐಓಎಸ್ ಮಧ್ಯೆ ಮಾರುಕಟ್ಟೆಯಲ್ಲಿ ಸೋತು ಹೋಗಿ ಫೇರ್‌ಫ್ಯಾಕ್ಸ್ ಪಾಲಾಗಿರುವ ಬ್ಲ್ಯಾಕ್‌ಬೆರಿ ಕಂಪೆನಿಯ ಬ್ಲ್ಯಾಕ್‌ಬೆರಿ ಓಎಸ್ ನಾಲ್ಕನೇಯ ಸ್ಥಾನಗಳಿಸಿದೆ.
ವಿಶ್ವದ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಓಎಸ್ ಶೇ. 78.6 ಪಾಲುಗಳಿಸಿದ್ದರೆ,ಐಓಎಸ್ ಶೇ.15.2ರಷ್ಟು ಪಾಲು, ವಿಂಡೋಸ್ ಫೋನ್ ಓಎಸ್ ಶೇ.3.3 ಪಾಲುಗಳಿಸಿದೆ ಎಂದು ಐಡಿಸಿ ಹೇಳಿದೆ.

1
ನಾಲ್ಕನೇಯ ತ್ರೈಮಾಸಿಕ ಐಡಿಸಿ ವರದಿ

2
ಸ್ಮಾರ್ಟ್‌ಫೋನ್ ಸರಾಸರಿ ಮಾರಾಟ ಬೆಲೆ

3
ಕಳೆದ ವರ್ಷ 79.36ಕೋಟಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಸ್ಮಾರ್ಟ್‌ಫೋನ್ ವಿಶ್ವದ ಮಾರುಕಟ್ಟೆಯಲ್ಲಿ ಮಾರಾಟ
ಮಾಹಿತಿ:www.idc.com

4
ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.


Click it and Unblock the Notifications








