Subscribe to Gizbot

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

Posted By:

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ನಡುವೆ ಅರ್ಥಿ‌ಕ ಸಂಕಷ್ಟಕ್ಕೆ ತುತ್ತಾಗಿರುವ ಕೆನಡಾ ಮೂಲದ ಬ್ಲ್ಯಾಕ್‌ಬೆರಿ ಮೊಬೈಲ್‌ ಕಂಪೆನಿಯನ್ನು ಭಾರತೀಯ ಮೂಲದ ಪ್ರೇಮ್‌ ವಾಟ್ಸಾ ಸಿಇಒ ಆಗಿರುವ ಫೇರ್‌ಫ್ಯಾಕ್ಸ್‌(Fairfax)ಕಂಪನಿ ಖರೀದಿಸಲು ನಿರ್ಧರಿಸಿದೆ.

ಬ್ಲ್ಯಾಕ್‌ಬೆರಿ ಮಾರುಕಟ್ಟೆಯಲ್ಲಿ ನಷ್ಟವನ್ನು ಹೊಂದುತ್ತಿದ್ದರೂ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಕಂಪೆನಿ ಎಂದು ಹೇಳುತ್ತಿದ್ದ ಪ್ರೇಮ್‌ ವಾಟ್ಸಾ ಈಗ ಫೇರ್‌ಫ್ಯಾಕ್ಸ್‌ ನೇತೃತ್ವದಲ್ಲಿ ಹೂಡಿಕೆದಾರರ ಒಕ್ಕೂಟವನ್ನು ರಚಿಸಿಕೊಂಡು ಅದರ ಮೂಲಕ ಬ್ಲಾಕ್‌ಬೆರಿ ಕಂಪನಿ ಖರೀದಿಗೆ ನಿರ್ಧರಿಸಿದ್ದಾರೆ.ಕೆನಡಾ ಮೂಲದ ಕಂಪನಿ ಫೇರ್‌ಫ್ಯಾಕ್ಸ್‌ ಈಗಾಗಲೇ ಬ್ಲ್ಯಾಕ್‌ಬೆರಿಯಲ್ಲಿ ಮುಖ್ಯ ಷೇರುದಾರ ಕಂಪನಿಯಾಗಿದ್ದು ಶೇ.10 ರಷ್ಟು ಷೇರುಗಳನ್ನು ಫೇರ್‌ಫ್ಯಾಕ್ಸ್‌ ಹೊಂದಿದೆ.

ಬ್ಲ್ಯಾಕ್‌ಬೆರಿ, ಫೇರ್‌ಫ್ಯಾಕ್ಸ್‌ ಕಂಪೆನಿಗೆ ಮಾರಾಟವಾಗಲಿರುವ ಹಿನ್ನೆಲೆಯಲ್ಲಿ ಯಾಕೆ ಮಾರುಕಟ್ಟೆಯಲ್ಲಿ ಬ್ಲ್ಯಾಕ್‌‌ಬೆರಿಗೆ ಸೋಲಾಯಿತು ಎನ್ನುವುದಕ್ಕೆ ಕೆಲವು ಕಾರಣಗಳನ್ನು ಇಲ್ಲಿವೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಬಿಸಿನೆಸ್‌ ವ್ಯಕ್ತಿಗಳಿಗೆ,ಸೆಲೆಬ್ರಿಟಿಗಳಿಗೆ ಮೀಸಲಾಗಿರುವಂತೆ ಬ್ಲ್ಯಾಕ್‌ಬೆರಿ ಫೋನ್‌ಗಳು ತಯಾರಾಗುತ್ತಿತ್ತು.ಜೊತೆಗೆ ಬೆಲೆ ದುಬಾರಿ ಆಗಿತ್ತು.ಸಿಇಒ Thorsten Hein ಬ್ಲ್ಯಾಕ್‌ಬೆರಿಯ ಈ ನಿರ್ಧಾರವನ್ನು ಸಮರ್ಥಿ‌ಸಿದ್ದರು.

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಫೀಚರ್‌ ಫೋನ್‌ಗಳ ಕಾಲದಲ್ಲಿ ಕ್ವಾರ್ಟಿ‌ ಕೀಪ್ಯಾಡ್‌ ಹೊಂದಿದ ಬ್ಲ್ಯಾಕ್‌ಬೆರಿ ಫೋನ್‌ಗಳಿಗೆ ಭಾರೀ ಬೇಡಿಕೆ ಇತ್ತು. ಆದರೆ ಗೂಗಲ್‌ನ ಆಂಡ್ರಾಯ್ಡ್,ಮತ್ತು ಆಪಲ್‌ನ ಐಓಎಸ್‌ ಸ್ಮಾರ್ಟ್‌ಫೋನ್‌‌ಗಳ ಆರ್ಭಟ ಶುರುವಾದ ಮೇಲೆ ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿಯ ಹಿಡಿತ ಕಡಿಮೆಯಾಗತೊಡಗಿತು.

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ವಿಶ್ವದ ವಿವಿಧ ಉದ್ಯಮಗಳನ್ನು ಅಧ್ಯಯನ ಮಾಡುವ ಗಾರ್ಟ್‌ನರ್‌ ಅಗಸ್ಟ್‌ ವರದಿಯಂತೆ ಈ ವರ್ಷದ ಉತ್ಪಾದನೆಯಾದ ವಿಶ್ವದ ಸ್ಮಾರ್ಟ್‌ಫೋನ್‌ಗಳ ಆಪರೇಟಿಂಗ್‌ ಸಿಸ್ಟಂನಲ್ಲಿ ಆಂಡ್ರಾಯ್ಡ್‌ ಪಾಲು ಶೇ.79.0,ಐಓಎಸ್‌ ಪಾಲು ಶೇ.14.2 ಇದ್ದರೆ ಬ್ಲ್ಯಾಕ್‌ಬೆರಿ ಪಾಲು ಕೇವಲ ಶೇ2.7 ಮಾತ್ರ. ಕಳೆದ ವರ್ಷ‌ ಶೇ.5.2 ಮಾರುಕಟ್ಟೆ ಪಾಲು ಹೊಂದಿದ್ದ ಬ್ಲ್ಯಾಕ್‌ಬೆರಿ,ಈ ವರ್ಷ‌ ಮತ್ತಷ್ಟು ಕುಸಿದಿತ್ತು

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಗಾರ್ಟ್‌ನರ್‍ ವರದಿಯಂತೆ ಅತೀ ಹೆಚ್ಚು ಮಾರಾಟ ಮಾಡಿದ ವಿಶ್ವದ ಟಾಪ್‌ 10 ಸ್ಮಾರ್ಟ್‌ಫೋನ್‌ ತಯಾರಿಕಾ‌ ಕಂಪೆನಿಗಳ ಹೆಸರುಗಳ ಪಟ್ಟಿಯಲ್ಲೂ ಬ್ಲ್ಯಾಕ್‌ಬೆರಿ ಸ್ಥಾನ ಪಡೆಯಲು ವಿಫಲವಾಗಿತ್ತು.

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲೂ ಬ್ಲ್ಯಾಕ್‌ಬೆರಿ ತನ್ನ ಮಾರುಕಟ್ಟೆ ತಂತ್ರವನ್ನು ಬದಲಿಸಲಿಲ್ಲ.ವಿವಿಧ ಕಂಪೆನಿಗಳ ಮಾರುಕಟ್ಟೆಗಳನ್ನು ಅಧ್ಯಯನ ಮಾಡುವ ಐಡಿಸಿ ವರದಿಯಂತೆ ಭಾರತದಲ್ಲಿ ದೇಶಿಯ ಮತ್ತು ಚೀನಾ ಕಂಪೆನಿಗಳ ಸ್ಮಾರ್ಟ್‌ಫೋನ್‌ ಮಧ್ಯೆ ಬ್ಲ್ಯಾಕ್‌ಬೆರಿ ಸಂಪೂರ್ಣ‌ ಸೋತುಹೋಗಿತ್ತು.

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ವಿಕಿಪೀಡಿಯಾದ ಮಾಹಿತಿಯಂತೆ ಬ್ಲ್ಯಾಕ್‌ಬೆರಿ ಆಪ್‌ ವರ್ಲ್ಡ್‌ನಲ್ಲಿರುವ ಆಪ್‌ಗಳ ಸಂಖ್ಯೆ 2 ಲಕ್ಷದ 5 ಸಾವಿರ, ಅದೇ ಆಪಲ್‌ ಸ್ಟೋರ್‌ನಲ್ಲಿ9 ಲಕ್ಷಕ್ಕೂ ಅಧಿಕ,ಇನ್ನೂ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಆಪ್‌‌ಗಳಿಗೆ. ಸ್ಮಾರ್ಟ್‌ಫೋನ್‌ ಯುಗದಲ್ಲಿ ಆಪ್‌ಗಳೇ ಮುಖ್ಯವಾಗಿರುವಾಗ, ಬಳಕೆದಾರರಿಗೆ ಬೇಕಾಗಿರುವ ಆಪ್‌ಗಳು ಇಲ್ಲದ ಕಾರಣ ಬ್ಲ್ಯಾಕ್‌ಬೆರಿ ಸೋಲಲು ಇದು ಒಂದು ಕಾರಣವಾಯಿತು.

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಬೇರೆ ಕಂಪೆನಿಗಳಿಗೆ ಹೋಲಿಸಿದ್ದಲ್ಲಿ ಬ್ಲ್ಯಾಕ್‌ಬೆರಿ ಕಡಿಮೆ ಸಂಖ್ಯೆಯಲ್ಲಿ ಟಚ್‌ಸ್ಕ್ರೀನ್‌‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿಕೊಂಡು ಬಂದಿದೆ.ಮೊನ್ನೆಯಷ್ಟೇ ಬ್ಲ್ಯಾಕ್‌ಬೆರಿ ಝಡ್‌ 30ಯನ್ನು ಬಿಡುಗಡೆ ಮಾಡಿದ್ದರೆ, ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ಲ್ಯಾಕ್‌ಬೆರಿ ಝಡ್‌ 10 ಜನವರಿಯಲ್ಲಿ ಬಿಡುಗಡೆ ಮಾಡಿತ್ತು.ಬ್ಲ್ಯಾಕ್‌ಬೆರಿ ಕ್ಯೂ5,ಬ್ಲ್ಯಾಕ್‌ಬೆರಿ ಬೊಲ್ಡ್‌,ಬ್ಲ್ಯಾಕ್‌ಬೆರಿ ಕ್ಯೂ 10 ಕ್ವಾರ್ಟಿ‌ ಕೀ ಪ್ಯಾಡ್‌ ಹೊಂದಿರುವ ಟಚ್‌ಸ್ಕ್ರೀನ್‌ ಸ್ಮಾರ್ಟ್‌ಫೋನ್‌ಗಳಾಗಿವೆ.

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ಬೆರಿ ಸೋತಿದ್ದು ಯಾಕೆ?

ಇಷ್ಟೆಲ್ಲದರ ಜೊತೆಗೆ ಒಂದೇ ರೀತಿಯ ವಿನ್ಯಾಸ, ಕ್ಯಾಮೆರಾದಲ್ಲಿ ಸುಧಾರಣೆ ಇಲ್ಲದೇ ಇರುವುದು, ಆಪ್‌ಗಳ ಕೊರತೆ,ಹಳೇಯ ಮಾರುಕಟ್ಟೆ ತಂತ್ರ,ಸೃಜನಶೀಲತೆ ಕೊರತೆ, ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯದ ಕಾರಣ ಬ್ಲ್ಯಾಕ್‌ ಬೆರಿ ಮಾರುಕಟ್ಟೆಯಲ್ಲಿ ಸೋಲಬೇಕಾಯಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot