Subscribe to Gizbot

ಕಡಿಮೆ ಬೆಲೆಯ ಐಫೋನ್‌ಗೆ ಭಾರತದಲ್ಲಿ 53,441 ರೂಪಾಯಿ!

Posted By:

ಆಪಲ್‌ನ ಕಡಿಮೆ ಬೆಲೆಯ ಐಫೋನ್‌ಗೆ ಭಾರತದಲ್ಲಿ ಎಷ್ಟು ರೂಪಾಯಿ ಆಗಬಹುದು? ಈ ಪ್ರಶ್ನೆ ಭಾರತದ ಆಪಲ್‌ ಅಭಿಮಾನಿಗಳಿಗೆ ಐಫೋನ್‌‌ 5 ಸಿ ಬಿಡುಗಡೆಯಾದ ದಿನದಿಂದ ಭಾರತದ ಮಾರುಕಟ್ಟೆಯಲ್ಲಿ ಈ ಫೋನ್‌ ಬಿಡುಗಡೆಯಾಗುವರೆಗೂ ಕಾಡದೇ ಇರಲಾರದು. ಆದರೆ ಈ ಫೋನ್‌ ಕಡಿಮೆ ಬೆಲೆಗೆ ಸಿಗುವ ಲಕ್ಷಣ ಕಾಣುತ್ತಿಲ್ಲ.

ಐಫೋನ್‌ 5ಸಿ 16GB,32GB ಎರಡು ಆಂತರಿಕ ಮೆಮೋರಿಯಲ್ಲಿ ಅಮೆರಿಕ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ.ಅಮೆರಿಕದಲ್ಲಿ ಕಾಂಟ್ರಾಕ್ಟ್‌ ಹೊರತಾದ ಈ 16 GB ಐಫೋನ್‌ಗೆ 549 ಡಾಲರ್‌‌,32GB ಐಫೋನ್‌ಗೆ 649 ಡಾಲರ್‌ ಆಪಲ್‌ ನಿಗದಿ ಮಾಡಿದೆ.

ಇದೇ ದರವನ್ನು ಭಾರತದ ರೂಪಾಯಿಗೆ ಪರಿವರ್ತಿಸಿದರೆ(ಒಂದು ಡಾಲರ್‌= 62 ರೂಪಾಯಿ)16 GB ಐಫೋನ್‌ಗೆ ಅಂದಾಜು 34 ಸಾವಿರ ರೂ,32GB ಐಫೋನ್‌ಗೆ ಅಂದಾಜು 40 ಸಾವಿರ ರೂ. ಆಗುತ್ತದೆ. ನಂತರ ಸಾಗಣಿಕಾ ವೆಚ್ಚ,ರಿಟೇಲ್‌ ಅಂಗಡಿಗಳ ಲಾಭಗಳನ್ನು ಲೆಕ್ಕ ಹಾಕಿದಾಗ ಕಡಿಮೆ ಬೆಲೆಯ ಐಫೋನ್‌ ಭಾರತದಲ್ಲಿ ದುಬಾರಿಯಾಗಲಿದೆ ಎನ್ನುವ ಮಾಹಿತಿಯನ್ನು ಗಿಝ್‌ಬಾಟ್‌ ಈ ಹಿಂದೆಯೇ ತಿಳಿಸಿತ್ತು.

ಕಡಿಮೆ ಬೆಲೆಯ ಐಫೋನ್‌ಗೆ ಭಾರತದಲ್ಲಿ 53,441 ರೂಪಾಯಿ!

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುವ ಮೊದಲೇ ಆ ಸ್ಮಾರ್ಟ್‌ಫೋನ್‌ ಬೆಲೆಯನ್ನು ಆನ್‌ಲೈನ್‌ ಶಾಪಿಂಗ್‌ ತಾಣಗಳು ಪ್ರಕಟಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಐಫೋನ್‌ 5ಸಿ ಮಾರುಕಟ್ಟೆಗೆ ಬಿಡುಗಡೆಯಾಗುವ ಮೊದಲೇ ದರವನ್ನು ಆನ್‌ಲೈನ್‌ ಶಾಪಿಂಗ್‌ ತಾಣ ಪ್ರಕಟಿಸಿವೆ. ಆನ್‌ಲೈನ್‌ ಶಾಪಿಂಗ್‌ ತಾಣ ibhejo.com ಎಲ್ಲಾ ತೆರಿಗೆ ವೆಚ್ಚಗಳನ್ನು ಸೇರಿಸಿ 16 GB ಐಫೋನ್‌ 5ಸಿಗೆ 45,261 ರೂ.32GBಯ ಐಫೋನ್‌ಗೆ 53,441 ರೂ.ಎಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.ಇನ್ನೂ16 GBಯ ದುಬಾರಿ ಐಫೋನ್‌ 5 ಎಸ್‌ಗೆ ಆನ್‌ಲೈನ್‌ ಶಾಪಿಂಗ್‌ ತಾಣ ಇಬೇ 59,990 ರೂ ನಿಗದಿ ಮಾಡಿದೆ.

ಒಟ್ಟಿನಲ್ಲಿ ಕಡಿಮೆ ಬೆಲೆಯ ಐಫೋನ್‌ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ.ಹೀಗಾಗಿ ಆನ್‌ಲೈನ್‌ ಶಾಪಿಂಗ್‌ ತಾಣಗಳ ಬೆಲೆಗಳ ಮಾಹಿತಿಯೇ ಅಂತಿಮವಲ್ಲ. ಹೆಚ್ಚು ಕಡಿಮೆ ಆದರೂ ಆಗಬಹುದು. ಆದರೆ ಕಡಿಮೆ ಬೆಲೆಯ ಐಫೋನ್‌ ಭಾರತದಲ್ಲಿ ದುಬಾರಿಯಾಗುವುದು ಖಂಡಿತ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot