Subscribe to Gizbot

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

Posted By:

ಭಾರತದ ಮತ್ತು ಚೀನಾದಲ್ಲಿ ದೇಶಿಯ ಕಂಪೆನಿಗಳ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ‌ ನೀಡಲು ಆಪಲ್‌ ಮುಂದಾಗಿದ್ದು, ಇದೀಗ ಹೊಸ ಕಡಿಮೆ ಬೆಲೆಯ ಐಫೋನ್‌ 5 ಸಿಯನ್ನು ಆಪಲ್‌ ಬಿಡುಗಡೆ ಮಾಡಿದೆ. ಆದರೆ ಆಪಲ್‌ ಕಡಿಮೆ ಬೆಲೆಯ ಐಫೋನ್‌ ಎಂದು ಹೇಳಿದರೆ,ಸ್ಮಾರ್ಟ್‌ಫೋನ್‌ ದುಬಾರಿ ಬೆಲೆಯ ಐಫೋನ್‌ ಆಗುವ ಸಾಧ್ಯತೆಯಿದೆ.ಜೊತೆಗೆ ಈ ಹಿಂದೆ ಬಿಡುಗಡೆ ಮಾಡಲಾದ ಐಫೋನ್‌ 5ಗೆ ಮತ್ತು ಈ ಕಡಿಮೆ ಬಜೆಟ್‌ಗೆ ಐಫೋನ್‌ಗೆ ಏನು ವ್ಯತ್ಯಾಸವಿಲ್ಲ.ಕೆಲವು ವಿಶೇಷತೆಗಳು ಸುಧಾರಿಸಿ ಹೊಸ ಐಫೋನ್‌ 5 ಸಿಯನ್ನು ಬಿಡುಗಡೆ ಮಾಡಿದ್ದಾರೆ.

ಹೀಗಾಗಿ ಯಾಕೆ ಈ ಐಫೋನ್‌ 5ಸಿ ದುಬಾರಿಯಾಗುತ್ತದೆ?ಮತ್ತು ಐಫೋನ್‌ 5ಕ್ಕೂ ಈ ಕಡಿಮೆ ಬೆಲೆಯ ಐಫೋನ್‌ಗೆ ಏನು ವ್ಯತ್ಯಾಸ ಎನ್ನುವ ಮಾಹಿತಿ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಸ್ಲೇಟ್‌ ಹೋಯ್ತು.ಐಪ್ಯಾಡ್‌ ಬಂತು! ನೆದರ್‌ಲ್ಯಾಂಡ್‌ನಲ್ಲಿ ಹೊಸ ಶಾಲೆ!

ಆಪಲ್‌ ಐಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಐಫೋನ್‌ 5ಸಿ 16 GB,32GB ಎರಡು ಆಂತರಿಕ ಮಮೋರಿಯಲ್ಲಿ ಅಮೆರಿಕದಲ್ಲಿ ಬಿಡುಗಡೆಯಾಗಿದೆ. ಅಮೆರಿಕದಲ್ಲಿ ಕಾಂಟ್ರಾಕ್ಟ್‌ ಹೊರತಾದ ಈ 16 GB ಐಫೋನ್‌ಗೆ 549 ಡಾಲರ್‌‌, 32GB ಐಫೋನ್‌ಗೆ 649 ಡಾಲರ್‌ ಆಪಲ್‌ ನಿಗದಿ ಮಾಡಿದೆ.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಇದೇ ದರವನ್ನು ಭಾರತದ ರೂಪಾಯಿಗೆ ಪರಿವರ್ತಿಸಿದರೆ (ಒಂದು ಡಾಲರ್‌= 64 ರೂಪಾಯಿ) 16 GB ಐಫೋನ್‌ಗೆ ಅಂದಾಜು 35 ಸಾವಿರ ರೂ, 32GB ಐಫೋನ್‌ಗೆ ಅಂದಾಜು 41500 ರೂ. ಆಗುತ್ತದೆ. ಹೀಗಾಗಿ ಕಡಿಮೆ ಬೆಲೆಯ ಐಫೋನ್‌ ಭಾರತದಲ್ಲಿ ದುಬಾರಿಯಾಗುತ್ತದೆ.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಆಪಲ್‌ ಇನ್ನೂ ಭಾರತದಲ್ಲಿ ಯಾವಾಗ ಈ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡುತ್ತದೆ ಎಂದು ಹೇಳಿಲ್ಲ.ಇನ್ನು ತೆರಿಗೆ,ಸಾಗಾಣಿಕಾ ವೆಚ್ಚ, ರಿಟೇಲ್‌ ಅಂಗಡಿಗಳ ಲಾಭ ಲೆಕ್ಕ ಹಾಕಿದರೆ ಕಡಿಮೆ ಬೆಲೆಯ ಐಫೋನ್‌ 5ಸಿ ಭಾರತದಲ್ಲಿ ಮತ್ತಷ್ಟು ದುಬಾರಿಯಾಗಲಿದೆ.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


132 ಗ್ರಾಂ ತೂಕ ಐಫೋನ್‌ 5ಸಿ 4.ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326ppi, ಗೊರಿಲ್ಲ ಗ್ಲಾಸ್‌ನಲ್ಲಿ ಬಿಡುಗಡೆಯಾಗಿದೆ.ಈ ಹಿಂದೆ ಬಿಡುಗಡೆಯಾದ ಐಫೋನ್‌ 5 ಈ ಎಲ್ಲಾ ವಿಶೇಷತೆಗಳೊಂದಿಗೆ ಬಿಡುಗಡೆಯಾಗಿತ್ತು.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಐಫೋನ್‌ 5ಸಿ,ಈ ಹಿಂದೆ ಬಿಡುಗಡೆಯಾದ ಐಫೋನ್‌ 5ರಲ್ಲಿ ಬಳಕೆಯಾಗಿದ್ದ ಎ6 ಪ್ರೊಸೆಸರ್‌ನ್ನು ಹೊಂದಿದೆ. ಆದರೆ ಆಪರೇಟಿಂಗ್ ಸಿಸ್ಟಂ ಬದಲಾಗಿದೆ. ಹೊಸ ಐಫೋನಲ್ಲಿ ಐಓಎಸ್‌ 7 ಇದ್ದರೆ, ಹಳೇಯ ಐಫೋನ್‌ 5ರಲ್ಲಿ ಐಓಎಸ್‌ 6 ಬಳಕೆಯಾಗಿತ್ತು ನಂತರ ಇದನ್ನು ಐಓಎಸ್‌ 7 ಅಪ್‌ಡೇಟ್‌ ಮಾಡಬಹುದಾಗಿತ್ತು.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಕ್ಯಾಮೆರಾ ವಿಚಾರದಲ್ಲೂ ಐಫೋನ್‌ 5ರಲ್ಲಿ ಇದ್ದಂತೆ ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್‌ ಇರುವ 8 ಎಂಪಿ ಕ್ಯಾಮೆರಾ ನೀಡಿದ್ದಾರೆ. ಮುಂದುಗಡೆ 1.2 ಎಂಪಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಿದೆ.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಆಪಲ್‌ನ ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್‌ ಸಿರಿ ಹೇಳುವಷ್ಟು ಉತ್ತಮವಾಗಿಲ್ಲ ಎನ್ನುವ ದೂರಿಗೆ ಆಪಲ್‌ ಈ ಹೊಸ ಐಫೋನ್‌ನಲ್ಲಿ ಸಿರಿ ಆವೃತ್ತಿಯನ್ನು ಸುಧಾರಿಸಿದೆ. ಪುರುಷ ಮತ್ತು ಮಹಿಳೆಯರ ಧ್ವನಿಯನ್ನು ಚೆನ್ನಾಗಿ ಗೃಹಿಸಿ ಪ್ರತಿಕ್ರಿಯೇ ನೀಡುವ ಸಾಮರ್ಥ್ಯ ಈ ಸಿರಿಯಲ್ಲಿದೆ ಎಂದು ಆಪಲ್‌ ಹೇಳಿದೆ. ಇಂಗ್ಲಿಷ್‌‌,ಸ್ಪ್ಯಾನಿಷ್‌,ಫ್ರೆಂಚ್‌,ಜರ್ಮ‌ನ್‌, ಸೇರಿದಂತೆ 9 ಭಾಷೆಗಳಲ್ಲಿಸಿರಿಯಲ್ಲಿ ಸಂವಹನ ಮಾಡಬಹುದು. ಭಾರತದ ಯಾವುದೇ ಭಾಷೆಯನ್ನು ಸಿರಿಗೆ ಆಪಲ್‌ ಸೇರಿಸಿಲ್ಲ.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಪ್ಲಾಸ್ಟಿಕ್‌ ದೇಹವನ್ನು ಹೊಂದಿರುವ ಐಫೋನ್‌ 5ಸಿ ಹಳದಿ,ಬಿಳಿ,ಹಸಿರು,ನೀಲಿ, ಬಣ್ಣದಲ್ಲಿ ಬಿಡುಗಡೆಯಾಗಿದೆ. ಹೊಸ ಐಫೋನ್‌ 5ಸಿ ಬ್ಯಾಟರಿ ಶಕ್ತಿಶಾಲಿಯಾಗಿದ್ದು 10 ಗಂಟೆ‌ 3ಜಿ ಟಾಕ್‌ ಟೈಮ್‌ ಮತ್ತು 250 ಗಂಟೆ ಸ್ಟ್ಯಾಂಡ್‌ ಬೈ ಟೈಮ್‌ ಹೊಂದಿದೆ.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಕೊನೆಯದಾಗಿ ಭಾರತದಲ್ಲಿ ಇನ್ನೂ ಈ ಕಡಿಮೆ ಬಜೆಟ್‌ನ ಐಫೋನ್‌ ಬೆಲೆ ಎಷ್ಟು? ಯಾವಾಗ ಬರುತ್ತದೆ ಎಂಬುದನ್ನು ಆಪಲ್‌ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.ಆದರೆ ಈ ಹಿಂದೆ ಬಿಡುಗಡೆಯಾದ ಐಫೋನ್‌5ನ್ನು 36,500 ರೂ ನೀಡಿ ಸದ್ಯದ ಮಾರುಕಟ್ಟೆಯಲ್ಲಿ ಖರೀದಿಸಬಹುದು.

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಐಫೋನ್‌ 5 ಸಿ

 ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಐಫೋನ್‌ 5 ಸಿ

 ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!

ಅಗ್ಗದ ಐಫೋನ್‌ ಭಾರತದಲ್ಲಿ ದುಬಾರಿ!


ಐಫೋನ್‌ 5 ಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot