ಗ್ರಾಹಕರನ್ನು ಸೆಳೆಯಲು ಐಫೋನ್ 8ರಲ್ಲಿ ಈ ಹೊಸ ಶೈಲಿ ಪರಿಚಯಿಸಲಿದೆ ಆಪಲ್!

By: Precilla Dias

ಪ್ರತಿ ಬಾರಿ ಆಪಲ್ ಹೊಸ ಐಫೋನ್ ನಿರ್ಮಾಣ ಮಾಡುವ ಸಂದರ್ಭದಲ್ಲಿ ಯಾವುದಾದರೊಂದು ಒಂದು ಹೊಸ ಆವಿಷ್ಕಾರವನ್ನು ಮಾಡುವುಲ್ಲದೇ ಬೇರೆಲ್ಲೂ ಸಿಗದಂತಹ ಹೊಸ ಆಯ್ಕೆಗಳನ್ನು ತನ್ನ ಗ್ರಾಹಕರಿಗೆ ನೀಡಲು ಮುಂದಾಗುತ್ತದೆ. ಸದ್ಯ ಮುಂದಿನ ಐಫೋನ್ 8ರಲ್ಲಿರಬಹುದಾದ ಫೀಚರ್ಸ್ಗಳ ಕುರಿತಾಗಿ ರೂಮರ್ಸ್ ಗಳು ಈಗಾಗಲೇ ಸದ್ದು ಮಾಡುತ್ತಿವೆ. ಈ ಬಾರಿ ಐಫೋನ್'ನಲ್ಲಿ ಹೊಸತನವೊಂದು ಕಂಡು ಬರಲಿದೆಯಂತೆ! ಅದೇನು ಅಂತೀರಾ? ಇಲ್ಲಿದೆ ವಿವರ

ಗ್ರಾಹಕರನ್ನು ಸೆಳೆಯಲು ಐಫೋನ್ 8ರಲ್ಲಿ ಈ ಹೊಸ ಶೈಲಿ ಪರಿಚಯಿಸಲಿದೆ ಆಪಲ್!

ಈಗ ದೊರೆತಿರುವ ಮತ್ತೊಂದು ಮಾಹಿತಿ ಮೂಲಗಳ ಪ್ರಕಾರ ನೂತನ ಐಫೋನ್'ನ ಹಿಂಭಾಗದಲ್ಲಿ ಲಿಕ್ವಿಡ್ ಮೆಟೆಲ್ ಗ್ಲಾಸ್'ನ್ನು ಅಳವಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಮೇರಿಕಾದ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ಈ ಕುರಿತಾಗಿ ಮಾಹಿತಿ ನೀಡಿದ್ದು, ಆಪಲ್ ತನ್ನ ಮುಂದಿನ ಐಫೋನ್'ಗಳ ಹಿಂಬದಿಯಲ್ಲಿ ಲಿಕ್ವಿಡ್ ಮೆಟಲ್ ಗ್ಲಾಸ್ ಅಳವಡಿಸಿ ಫೋನಿನ ಅಂದವನ್ನು ಹೆಚ್ಚಿಸಲಿದೆ. ಆಪಲ್ ಗ್ರಾಹಕರನ್ನು ಸೆಳೆಯಲು ಈ ಹೊಸ ಮಾದರಿಯನ್ನು ಪರಿಚಯಿಸಲಿದೆ ಎಂದು ತಿಳಿಸಿದೆ.

ಓದಿರಿ: ವಿಶ್ವದ ಅತೀ ಹೆಚ್ಚು ಮೊಬೈಲ್ ಡೇಟಾ ಬಳಸುತ್ತಿರುವ ದೇಶ ಯಾವುದು ಗೊತ್ತಾ..?

ತನ್ನ ನೂತನ ಐಫೋನ್'ಗಳ ಹಿಂಬದಿಯನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಮೆಟಲ್ ಗ್ಲಾಸ್ ಕೋಟಿಂಗ್ ಮಾಡುತ್ತಿದ್ದು, ಇದಕ್ಕಾಗಿ ರಾಸಾಯನಿಗಳನ್ನು ಬಳಸಿಕೊಳ್ಳುತ್ತಿದ್ದು, ಮೈಕ್ರೋ ಅಲೈಯಿಂಗ್ ತಂತ್ರವನ್ನು ಆಪಲ್ ಅಳವಡಿಸಿಕೊಂಡಿದೆ. ಇದು ಫೋನಿಗೆ ಗಟ್ಟಿತನವನ್ನು ನೀಡುವುದರ ಜೊತೆಗೆ ಲುಕ್'ನ್ನು ಇನ್ನಷ್ಟು ಉತ್ತಮಗೊಳಿಸಲಿದೆ.

ಆದರೆ ಈ ಕುರಿತು ಆಪಲ್ ಕಂಪನಿಯೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಈವರೆಗೂ ತನ್ನ ನೂತನ ಫೋನ್ ಲಾಂಚ್ ಆಗುವವರೆಗೂ ಆಪಲ್ ಯಾವುದೇ ಸಣ್ಣ ಮಾಹಿತಿಯೂ ಹೊರ ಬರದಂತೆ ಕಾಳಜಿ ವಹಿಸುತ್ತದೆ. ಅದೇನಿದ್ದರೂ ರೂಮರ್ಸ್'ಗಳು ಮಾತ್ರ ಹರಿದಾಡುತ್ತವೆ. ಇದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇವುಗಳು ಎಷ್ಟು ಸತ್ಯ ಎಂಬುದನ್ನು ತಿಳಿದುಕೊಳ್ಳಲು ನಾವು ನೂತನ ಐಫೋನ್ ಲಾಂಚ್ ಆಗುವವರೆಗೂ ಕಾಯಲೇಬೇಕಾಗಿದೆ.

Read more about:
English summary
A new patent reveals that iPhone 8 may have a liquid metal glass back.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot