Subscribe to Gizbot

ವಿಶ್ವದ ಅತೀ ಹೆಚ್ಚು ಮೊಬೈಲ್ ಡೇಟಾ ಬಳಸುತ್ತಿರುವ ದೇಶ ಯಾವುದು ಗೊತ್ತಾ..?

Written By:

ಮೊಬೈಲ್ ಡೇಟಾ ಬಳಕೆಯಲ್ಲಿ ಸದ್ಯ ಭಾರತವೇ ನಂ.1 ಎಂದರೆ ನೀವು ನಂಬಲೇ ಬೇಕು. ಭಾರತೀಯ ಮೊಬೈಲ್ ಬಳಕೆದಾರರು ಬಳಸುತ್ತಿರುವಷ್ಟು ಡೇಟಾವನ್ನು ಅಮೇರಿಕಾದವರು ಬಳಸುತ್ತಿಲ್ಲ ಎನ್ನಲಾಗಿದೆ. ಈ ಪಟ್ಟ ಭಾರತಕ್ಕೆ ದೊರೆಯುವುದರ ಹಿಂದೆ ಇರುವುದು ರಿಲಯನ್ಸ್ ಮಾಲೀತ್ವದ ಜಿಯೋ.

ವಿಶ್ವದ ಅತೀ ಹೆಚ್ಚು ಮೊಬೈಲ್ ಡೇಟಾ ಬಳಸುತ್ತಿರುವ ದೇಶ ಯಾವುದು ಗೊತ್ತಾ..?

ಓದಿರಿ: ಗೂಗಲ್‌ನಲ್ಲಿ ಕೆಲಸ ಸಿಕ್ಕರೆ ನೀವು ಮನೆಗೆ ಹೋಗುವುದನ್ನೇ ಮೆರೆಯುವಿರಿ..! ಯಾಕೆ ಗೊತ್ತೆ..?

ಹೌದು..! ಜಿಯೋ ಕಳೆದ ಸಪ್ಟೆಂಬರ್ನಲ್ಲಿ ಕಾರ್ಯ ಆರಂಭಿಸಿತು. ಆರಂಭಿಸಿ ಮೂರು ತಿಂಗಳು ಮತ್ತೇ ಮೂರು ತಿಂಗಳು, ಸದ್ಯ ಈಗ ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡಿದ ಹಿನ್ನಲೆಯಲ್ಲಿ 1 GB 3G ಡೇಟಾ ಪಡೆಯಲು 250 ರೂ. ನೀಡುತ್ತಿದ್ದ ಸಂದರ್ಭದಲ್ಲಿ ಜಿಯೋ ಉಚಿತವಾಗಿ 4G ಡೇಟಾ ಬಳಕೆಗೆ ನೀಡಿತ್ತು. ಈ ಹಿನ್ನಲೆಯಲ್ಲಿ ಮೊಬೈಲ್ ಡೇಟಾ ಬಳಕೆ ದೇಶದಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ.

ಓದಿರಿ: ಪ್ರಧಾನಿ ಮೋದಿಯಿಂದ ಡೇಟಾ ಕೊಡುಗೆ: ಕಿರಾಣಿ ಅಂಗಡಿಗಳಲ್ಲಿ 10 ರೂ.ಗೆ ಅನ್‌ಲಿಮಿಟೆಡ್ ವೈ-ಫೈ ಡೇಟಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
150 ನೇ ಸ್ಥಾನದಿಂದ 1ನೇ ಸ್ಥಾನಕ್ಕೆ:

150 ನೇ ಸ್ಥಾನದಿಂದ 1ನೇ ಸ್ಥಾನಕ್ಕೆ:

ಭಾರತದಲ್ಲಿ ಜಿಯೋ ಸೇವೆಯೂ ಆರಂಭವಾಗುವ ಮುನ್ನ ಭಾರತ ದೇಶವೂ ಮೊಬೈಲ್ ಡೇಟಾ ಬಳಕೆಯಲ್ಲಿ 150ನೇ ಸ್ಥಾನದಲ್ಲಿ ಇತ್ತು. ಆದರೆ ಜಿಯೋ ಉಚಿತವಾಗಿ ಹೈ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ನೀಡಿದ ಪರಿಣಾಮವಾಗಿ ಭಾರತ ಇಂದು ಮೊದಲನೇ ಸ್ಥಾನದಲ್ಲಿ ಬಂದು ನಿಂತಿದೆ.

ವಿಶ್ವದ ಅತೀ ದೊಡ್ಡ 4G ನೆಟ್‌ವರ್ಕ್ ಭಾರತದಲ್ಲಿ:

ವಿಶ್ವದ ಅತೀ ದೊಡ್ಡ 4G ನೆಟ್‌ವರ್ಕ್ ಭಾರತದಲ್ಲಿ:

ಈ ಹಿಂದೆ ಬೇರೆ ದೇಶಗಳು ಉಪಯೋಗಿಸಿಬಿಟ್ಟ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿದ್ದ ಭಾರತ ಇಂದು ತನ್ನ ಕಾರ್ಯ ಚಟುವಟಿಕೆಯನ್ನು ಬದಲಾಯಿಸಿಕೊಂಡಿದ್ದು, ವಿಶ್ವದಲ್ಲಿ ಅತಿ ಡೊಡ್ಡ 4G ನೆಟ್‌ವರ್ಕ್ ಜಾಲವನ್ನು ಹೊಂದಿದೆ ಎನ್ನಲಾಗಿದೆ. ಇದಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿರುವುದು ರಿಲಯನ್ಸ್ ಮಾಲೀಕತ್ವದ ಜಿಯೋ ಎಂದರೆ ತಪ್ಪಾಗಲಾಗುವುದಿಲ್ಲ.

ಒಂದು ತಿಂಗಳಲ್ಲಿ ಬಳಸುತ್ತಿರುವುದು 100 ಕೋಟಿ GB:

ಒಂದು ತಿಂಗಳಲ್ಲಿ ಬಳಸುತ್ತಿರುವುದು 100 ಕೋಟಿ GB:

ಜಿಯೋ ದೇಶದಲ್ಲಿ ಸೇವೆಯನ್ನು ಆರಂಭಿಸದ ನಂತರದಲ್ಲಿ ಭಾರತದಲ್ಲಿ ಒಂದು ತಿಂಗಳಿಗೆ ಮೊಬೈಲ್‌ನಲ್ಲಿ ಬಳಕೆಯಾಗುತ್ತಿರುವ ಡೇಟಾ ಸಂಖ್ಯೆಯನ್ನು ಕೇಳಿದರೆ ನೀವು ಶಾಕ್ ಆಗುವುದು ಖಂಡಿತ. ಸೆಪ್ಟೆಂಬರ್ ನಂತರ ಪ್ರತಿ ತಿಂಗಳು 100 ಕೋಟಿ GB ಡೇಟಾವನ್ನು ಬಳಕೆ ಮಾಡುತ್ತಿದ್ದಾರೆ. ಇದು ಚೀನಾಕ್ಕಿಂತ 50% ಜಾಸ್ತಿ ಇದೆ ಎನ್ನಲಾಗಿದೆ.

ಪ್ರತಿ ದಿನ 200 ಕೋಟಿ ನಿಮಿಷ ವಿಡಿಯೋ ಕಾಲ್:

ಪ್ರತಿ ದಿನ 200 ಕೋಟಿ ನಿಮಿಷ ವಿಡಿಯೋ ಕಾಲ್:

ಜಿಯೋ ಬಳಕೆಯೂ ಭಾರತದಲ್ಲಿ ಹೆಚ್ಚಾದ ನಂತರದಲ್ಲಿ ದೇಶದಲ್ಲಿ ಪ್ರತಿ ದಿನ 200 ಕೋಟಿ ನಿಮಿಷಗಳ ವಿಡಿಯೋ ಕಾಲ್ ಮಾಡಲಾಗುತ್ತಿದೆ. ಈ ಹಿಂದೆ ವೇಗದ ಇಂಟರ್‌ನೆಟ್ ಇಲ್ಲದ ಸಂದರ್ಭದಲ್ಲಿ ವಿಡಿಯೋ ಕಾಲಿಂಗ್ ಮಾಡುವುದು ಕಷ್ಟ ಸಾಧ್ಯವಾಗುತ್ತಿತ್ತು. ಈ ಹಿನ್ನಲೆಯಲ್ಲಿ ಇಂದು ಪ್ರತಿ ನಿತ್ಯ ವಿಡಿಯೋ ಕಾಲಿಂಗ್ ಮಾಡುವರರ ಸಂಖ್ಯೆಯೂ ಹೆಚ್ಚಾಗಿದೆ.

ಹೆಚ್ಚಿದ 4G ನೆಟ್‌ವರ್ಕ್:

ಹೆಚ್ಚಿದ 4G ನೆಟ್‌ವರ್ಕ್:

ಜಿಯೋ ಸೇವೆ ಆರಂಭವಾಗುವ ಮುಂಚೆ ಕೆಲವೇ ಬರಳೆಣಿಕೆ ನಗರಗಳಲ್ಲಿ ಮಾತ್ರವೇ 4G ನೆಟ್‌ವರ್ಕ್ ಬಳಕೆಗೆ ಲಭ್ಯವಿತ್ತು. ಆದರೆ ಜಿಯೋ ಇಡೀ ದೇಶದಲ್ಲಿ ತನ್ನ 4G ನೆಟ್‌ವರ್ಕ್ ಜಾಲವನ್ನು ಹಬ್ಬಿಸಿದ್ದು, ಇದು ಬೇರೆಲ್ಲಾ ಟೆಲಿಕಾಂ ಕಂಪನಿಗೆ ಹೊಲಿಸಿದರೆ 2ಪಟ್ಟಿಗಿಂತ ಹೆಚ್ಚು ನೆಟ್‌ವರ್ಕ್ ಜಾಲವನ್ನು ಹೊಂದಿದೆ ಎನ್ನಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
India’s Reliance Jio is already seeing and handling more data traffic on its network than any other telecom operator in the world. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot