ಐಫೋನ್ 8ರ ವಿಶೇಷತೆಗಳು ಈಗ ವೈರಲ್!! ಫ್ಯೂಚರ್ ಐಫೋನ್ ಹೇಗಿರಲಿದೆ?

Written By:

ವಿಶ್ವದಲ್ಲಿಯೇ ಅತ್ಯುತ್ತಮ ಮೊಬೈಲ್ ಬ್ರಾಂಡ್ ಎಂದರೆ ಅದು ಆಪಲ್. ಬೆಲೆ ಹೆಚ್ಚಿದ್ದರೂ ಸಹ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ರೂಪುಗೊಳ್ಳುವ ಮತ್ತು ಗ್ರಾಹಕರ ಅಗತ್ಯಕ್ಕಿಂತ ಹೆಚ್ಚಿನ ಫೀಚರ್ ನೀಡುವುದು ಈ ಆಪಲ್ ಮೊಬೈಲ್ ವಿಶೇಷಗಳು.

ಹಾಗಾಗಿ, ಆಪಲ್‌ ಕಂಪೆನಿಯ ಹೊಸದೊಂದು ಮೊಬೈಲ್ ಮಾರುಕಟ್ಟೆಗೆ ಬರುತ್ತಿದೆ ಎನ್ನುವಾಗಲೇ ಆ ಮೊಬೈಲ್‌ ಬಗ್ಗೆ ಹಲವು ಊಹಾಪೋಹಗಳು ಹುಟ್ಟಿಕೊಳ್ಳುತ್ತವೆ. ಮೊಬೈಲ್ ಏನೆಲ್ಲಾ ಒಳಗೊಂಡಿರುತ್ತದೆ ಎಂಬುವ ಊಹೆಯೆ ಸುದ್ದಿಯೂ ಆಗುತ್ತದೆ. ಆದರೆ ಹೆಚ್ಚಿನದಾಗಿ ಆಪಲ್ ಕಂಪೆನಿಯ ನೌಕರರು ಇವುಗಳ ಬಗ್ಗೆ ಮಾಹಿತಿಯನ್ನು ಹೊರಹಾಕುತ್ತಾರೆ ಎಂಬ ವದಂತಿಯೂ ಇದೆ.

ಓದಿರಿ:ಪೇಟಿಎಂ ಮೂಲಕ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾವಣೆ ಹೇಗೆ?

ಇದೀಗ ಆಪಲ್ ಕಂಪೆನಿಯ ಮುಂದಿನ ಮೊಬೈಲ್ ಐಫೋನ್ 8 ಬಿಡುಗಡೆಯಾಗುವ ಕಾಲಬಂದಿದೆ. ಊಹಾಪೋಹಗಳಿಂತ ಹೆಚ್ಚಿನ ಫೀಚರ್ಸ್‌ ಇಟ್ಟುಕೊಂಡು ಮಾರುಕಟ್ಟೆಗೆ ಬರುವುದು ಆಪಲ್‌ನ ವಿಶೇಷ. ಹಾಗಾಗಿ ಆಪಲ್ 8 ಐಫೋನ್ ಏನೆಲ್ಲಾ ವಿಶೇಷಗಳನ್ನು ಹೊಂದಿರಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೂರು ವಿವಿಧ ಗಾತ್ರದಲ್ಲಿ ಆಪಲ್

ಮೂರು ವಿವಿಧ ಗಾತ್ರದಲ್ಲಿ ಆಪಲ್

ಗ್ರಾಹಕರು ಡಿಸ್‌ಪ್ಲೇ ದೊಡ್ಡದಾಗಿರುವ ಮೊಬೈಲ್‌ಗಳಿಗೆ ಆಕರ್ಷಿತರಾಗಿದ್ದನ್ನು ಅರಿತಿರುವ ಆಪಲ್ ತನ್ನ 4.7 ಇಂಚು ಐಫೋನ್ ಮೊಬೈಲ್‌ಗಳಿಂದ 5.5 ಇಂಚು ಐಫೋನ್ ಮೊಬೈಲ್‌ಗಳಾಗಿ ಬದಲಾಯಿಸಿಕೊಂಡಿತು. ಇನ್ನು ಐಫೋನ್ 8 ನ್ನು 5.8 ಇಂಚುಗಳಿಗೆ ಹೆಚ್ಚಿಸುತ್ತದೆ ಎನ್ನಲಾಗಿದೆ. ಹಾಗಾಗಿಇನ್ನು ಮೂರು ಗಾತ್ರದಲ್ಲಿ ನಾವು ಆಪಲ್ ಮೊಬೈಲ್‌ಗಳನ್ನು ನೋಡಬಹುದು.

ಒಎಲ್ಇಡಿ( OLED-organic light-emitting diode) ಡಿಸ್‌ಪ್ಲೇ

ಒಎಲ್ಇಡಿ( OLED-organic light-emitting diode) ಡಿಸ್‌ಪ್ಲೇ

ಒಎಲ್ಇಡಿ ಡಿಸ್‌ಪ್ಲೇಯನ್ನು ಆಪಲ್ ಹೊರತರುತ್ತದೆ ಎಂಬುದು ಹಳೆಯ ಊಹಾಪೋಹ! ಆದರೆ ಇಲ್ಲಿಯವರೆಗೂ ಆಪಲ್ ಒಎಲ್ಇಡಿ ಡಿಸ್‌ಪ್ಲೇ ಹೊರತಂದಿಲ್ಲ. ಇನ್ನು ಆಪಲ್ ಐಫೋನ್ 8 ರಲ್ಲಿ ಈ ಒಎಲ್ಇಡಿ ಡಿಸ್‌ಪ್ಲೇ ಇರಬಹುದು!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೂರ್ಣ ಗ್ಲಾಸ್ ಸ್ಕ್ರೀನ್!

ಪೂರ್ಣ ಗ್ಲಾಸ್ ಸ್ಕ್ರೀನ್!

ಆಪಲ್ ಐಫೋನ್ 8 ಪೂರ್ಣವಾಗಿ ಗ್ಲಾಸ್‌ ಸ್ಕ್ರೀನ್ ಹೊಂದಿರುತ್ತದೆ ಎನ್ನಲಾಗಿದೆ. ಇನ್ನು ಇದರಲ್ಲಿ ಮೆನು ಬಟನ್ ಬಳಸುವುದಿಲ್ಲ ಎಂಬುದು ದೊಡ್ಡ ಊಹಾಪೋಹ!

3D ಡ್ಯುಯಲ್ ಕ್ಯಾಮರಾ ಲೆನ್ಸ್

3D ಡ್ಯುಯಲ್ ಕ್ಯಾಮರಾ ಲೆನ್ಸ್

ಐಫೋನ್‌ನ 3D ಡ್ಯುಯಲ್ ಕ್ಯಾಮರಾ ಲೆನ್ಸ್ ಹೊಂದಿರುತ್ತದೆ ಎಂಬುದು ಇತ್ತೀಚನ ರೂಮರ್. LG ಇನೋಟೆಕ್ 3D ಕ್ಯಾಮಾರಾದಂತೆ ಐಫೋನ್ ಲಿಂಕ್ಸ್ 3D ಡ್ಯುಯಲ್ ಕ್ಯಾಮರಾವನ್ನು ಹೋಂದಿರುವುದಂತೆ.

ವೈರ್‌ಲೆಸ್ ಚಾರ್ಜರ್.

ವೈರ್‌ಲೆಸ್ ಚಾರ್ಜರ್.

ವೈರ್‌ಲೆಲ್ ಚಾರ್ಜರ್ ಫೀಚರ್ ಹೊಂದಿರುವ ಮೊಬೈಲ್‌ ಬೇಕು ಎನ್ನುವುದು ಸ್ಮಾರ್ಟ್‌ಫೋನ್ ಬಳಕೆದಾರರ ಆಶಯ. ಹಾಗಾಗಿ, ಆಪಲ್ ವೈರ್‌ಲೆಲ್ ಮೂಲಕ ಚಾರ್ಜ್ ಆಗುವ ಫೀಚರ್‌ ಅನ್ನು ಐಫೋನ್ 8 ರಲ್ಲಿ ನೀಡುತ್ತದೆ ಎನ್ನಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Apple fans have high expectations for the iPhone 8, and if rumours are to be believed true, the company may match, if not surpass, the expectations. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot