Subscribe to Gizbot

2015 ಕ್ಕೆ ಆಪಲ್ ಐಫೋನ್ ಏರ್ ಬಿಡುಗಡೆ!

Posted By:

ಇಲ್ಲಿಯವರೆಗೆ ನಾಲ್ಕು ಇಂಚಿನ ಐಫೋನ್‌ ಬಿಡುಗಡೆ ಮಾಡುತ್ತಿದ್ದ ಆಪಲ್‌ ಇದೀಗ ದೊಡ್ಡ ಸ್ಕ್ರೀನ್‌ನ ಫ್ಯಾಬ್ಲೆಟ್‌ ನಿರ್ಮಾ‌ಣ ಮಾಡುವತ್ತ ತನ್ನ ದೃಷ್ಟಿಯನ್ನು ನೆಟ್ಟಿದೆ. ಆಪಲ್‌ 5.5 ಇಂಚಿನ ಐಫೋನ್ 6 ಫ್ಯಾಬ್ಲೆಟ್‌ನ್ನು ತಯಾರಿಸುತ್ತಿದ್ದು ಮುಂದಿನ ವರ್ಷ‌ ಈ ಫ್ಯಾಬ್ಲೆಟ್‌ ಬಿಡುಗಡೆಯಾಗುವ ಸಾಧ್ಯತೆಯಿದೆ.

ಆಪಲ್‌ ಮುಂದಿನ ವರ್ಷದಿಂದ 4.7 ಇಂಚಿನ ಹಾಗೂ 5.5 ಇಂಚಿನ ಡಿಸ್ಪ್ಲೇ ಐಫೋನ್ 6ನ್ನು ನಿರ್ಮಿಸುತ್ತಿದ್ದು,ಆಪಲ್‌ ಈ ಫೋನ್‌ಗಳಿಗೆ ಸ್ಲಿಮ್‌ ಆಗಿರುವ ಬ್ಯಾಟರಿಯನ್ನು ನೀಡಲು ನಿರ್ಧರಿಸಿದೆ.

2015 ಕ್ಕೆ ಆಪಲ್ ಐಫೋನ್ ಏರ್ ಬಿಡುಗಡೆ!

ಸ್ಮಾರ್ಟ್‌ಫೋನ್‌ ಬ್ಯಾಟರಿಗಳು ಸಾಮಾನ್ಯವಾಗಿ 2.8 ಮಿ.ಮೀ ಅಥವಾ 2.9 ಮಿ.ಮೀ ದಪ್ಪವಿರುತ್ತದೆ. ಆದರೆ 5.5 ಇಂಚಿನ ಫ್ಯಾಬ್ಲೆಟ್‌ಗೆ‌ ಆಪಲ್‌ 2 ಮಿ.ಮೀ ಗಾತ್ರದ ಬ್ಯಾಟರಿಯನ್ನು ನೀಡಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ತೆಳ್ಳಗಿನ ಬ್ಯಾಟರಿ ನಿರ್ಮಾಣದಲ್ಲಿ ಕೆಲ ಸಮಸ್ಯೆಗಳು ಸೃಷ್ಟಿಯಾಗಿರುವುದರಿಂದ ಇದರ ನಿರ್ಮಾ‌ಣ ಕಾರ್ಯ‌ ವಿಳಂಬವಾಗುತ್ತಿದೆ. ಈ ಕಾರಣಕ್ಕಾಗಿ ಈ ವರ್ಷ‌ ಬಿಡುಗಡೆಯಾಗಬೇಕಿದ್ದ ದೊಡ್ಡ ಸ್ಕ್ರೀನ್‌ ಆಪಲ್‌ ಐಫೋನ್‌ ಏರ್‌ ಫ್ಯಾಬ್ಲೆಟ್‌ ಮುಂದಿನ ವರ್ಷ‌ ಬಿಡುಗಡೆಯಾಗಲಿದೆ ಎಂದು ವಿದೇಶಿ ಟೆಕ್‌ ಮಾಧ್ಯಮಗಳು ವರದಿ ಮಾಡಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot