Subscribe to Gizbot

ಮೂರು ಗಾತ್ರದ ಸ್ಕ್ರೀನ್‌ನಲ್ಲಿ ಐಫೋನ್‌ 6 ಬರುತ್ತಂತೆ!

Posted By:

ದೊಡ್ಡ ಸ್ಕ್ರೀನ್‌ ಫ್ಯಾಬ್ಲೆಟ್‌ಗಳ ಅಬ್ಬರದ ಮಧ್ಯೆ ಮಂಕಾದಂತಿದ್ದ ಆಪಲ್‌ ಈಗ ದೊಡ್ಡ ಸ್ಕ್ರೀನ್‌ ಹೊಂದಿರುವ ಫ್ಯಾಬ್ಲೆಟ್‌ ನಿರ್ಮಾಣಕ್ಕೆ ಮುಂದಾಗುತ್ತಿದೆಯಂತೆ. ಅಷ್ಟೇ ಅಲ್ಲದೇ ಈ ವರ್ಷ‌ ಮೂರು ವಿವಿಧ ಗಾತ್ರದ ಐಫೋನ್‌ಗಳನ್ನು ಬಿಡುಗಡೆಯಾಗುವ ಸಾಧ್ಯತೆಯಿದೆ.

ಟೆಕ್‌ ಮಾಧ್ಯಮಗಳಲ್ಲಿ ಐಫೋನ್‌6 ಸಂಬಂಧಿಸಿದಂತೆ ಮತ್ತಷ್ಟು ಹೊಸ ಹೊಸ ಸುದ್ದಿ ವಿಡಿಯೋ,ಪ್ರಕಟಗೊಳ್ಳಲು ಆರಂಭವಾಗಿದೆ. ವಿಶ್ವದ ಬೇರೆ ಬೇರೆ ಕಂಪೆನಿಗಳು ವಿವಿಧ ಗಾತ್ರದ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದ್ದರೂ ಆಪಲ್‌ 2012ರವರೆಗೆ ಒಂದೊಂದು ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿಕೊಂಡು ಬಂದಿತ್ತು.ಕಳೆದ ವರ್ಷ‌ ದುಬಾರಿ ಬೆಲೆಯ ಐಫೋನ್‌ 5 ಎಸ್‌ ಮತ್ತು ಕಡಿಮೆ ಬೆಲೆಯ ಐಫೋನ್‌ 5ಸಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಐಫೋನ್‌ 5ಎಸ್‌ ಮಾರುಕಟ್ಟೆಯಲ್ಲಿ ಯಶಸ್ವಿಯಾದರೆ ಐಫೋನ್‌ 5ಸಿ ವಿಫಲವಾಗಿತ್ತು. ಆಪಲ್‌‌ ಸ್ಮಾರ್ಟ್‌‌ಫೋನ್‌‌ ಮಾರಾಟದಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದರೂ ಕಳೆದ ವರ್ಷದ ಮಾರಾಟದಲ್ಲಿ ಕುಸಿತ ಕಂಡಿತ್ತು.

ಐಫೋನ್‌ ಮಾರಾಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ‌ದಿಂದ ಆಪಲ್‌ ಮೂರು ರೀತಿಯ ಸ್ಕ್ರೀನ್‌‌ ಹೊಂದಿರುವ ಐಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. 4 ಇಂಚು, 4.7ಇಂಚು, 5.5 ಇಂಚಿನ ಸ್ಕ್ರೀನ್‌ನಲ್ಲಿ ಬಿಡುಗಡೆ ಮಾಡಲು ಆಪಲ್‌ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹಿಂದೆಯೂ ಐಫೋನ್‌ 6ಕ್ಕೆ ಸಂಬಂಧಿಸಿದಂತೆ ಕೆಲವೊಂದು ಸುದ್ದಿಗಳು ಮಾಧ್ಯಮಗಳಲ್ಲಿ ಬಂದಿತ್ತು. ಸಪ್‌ಹೈರ್‌ ಗ್ಲಾಸ್‌, 128Gಜಿಬಿ ಆಂತರಿಕ ಮೆಮೊರಿ, 16 ಎಂಪಿ ಕ್ಯಾಮೆರಾ,ಸೋಲಾರ್‌ ಚಾರ್ಜಿಂಗ್‌ ಟಚ್‌ಸ್ಕ್ರೀನ್‌ನೊಂದಿಗೆ ಐಫೋನ್‌ 6 ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಬೇರೆ ಬೇರೆ ಹೆಸರು:
  

 

4 ಇಂಚಿನ ಸ್ಮಾರ್ಟ್‌ಫೋನಿಗೆ ಐಫೋನ್‌ ಹೆಸರು,4.7 ಇಂಚಿನ ಐಫೋನ್‌ಗೆ 'ಐಫೋನ್‌ ಏರ್‌' ಹೆಸರು, 5.5 ಇಂಚಿನ ಐಫೋನ್‌‌ 'ಐಫೋನ್‌ ಪ್ರೋ' ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

 ಪಿಪಿಐ,ರೆಸೂಲೂಶನ್‌
  


4 ಇಂಚಿನ ಐಫೋನ್‌ ಸ್ಕ್ರೀನ್‌ 326 ಪಿಪಿಐ,1136x640 ಪಿಕ್ಸೆಲ್‌ ರೆಸೂಲೂಶನ್‌,
4.7 ಇಂಚಿನ ಐಫೋನ್‌ ಸ್ಕ್ರೀನ್‌ 440 ಪಿಪಿಐ,1920x1080 ಪಿಕ್ಸೆಲ್‌ ರೆಸೂಲೂಶನ್‌,5.5 ಇಂಚಿನ ಐಫೋನ್‌ ಸ್ಕ್ರೀನ್‌ 510 ಪಿಪಿಐ,2272x1280 ಪಿಕ್ಸೆಲ್‌ ರೆಸೂಲೂಶನ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ


ವಿಡಿಯೋ ವೀಕ್ಷಿಸಿ

 ಮೂರು ಗಾತ್ರದ ಸ್ಕ್ರೀನ್‌ನಲ್ಲಿ ಐಫೋನ್‌ 6 ಬರುತ್ತಂತೆ!
  

 

ಐಫೋನ್‌ 6ಗೆ ಹೀಗಿರುತ್ತಂತೆ

 

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot