'ಐಫೋನ್ 10' ಖರೀದಿಸಲು ಬೆಂಗಳೂರಿನಲ್ಲಿ ಮುಗಿಬಿದ್ದ ಜನರು!!

Written By:

ಆಪಲ್‌ನ ದುಬಾರಿ ಪೋನ್ 'ಐಫೋನ್ 10' ಆಟ ಭಾರತದಲ್ಲಿ ನಡೆಯುವುದಿಲ್ಲ ಎಂದು ಮೂಗುಮುರಿಯುತ್ತಿದ್ದವರಿಗೆ ಶಾಕ್ ಆಗುವಂತಹ ರೀತಿಯಲ್ಲಿ 'ಐಫೋನ್ 10' ಖರೀದಿಸಲು ಗ್ರಾಹಕರು ಎಲ್ಲೆಡೆ ಮಳಿಗೆಗಳಿಗೆ ಮುಗಿಬಿದ್ದಿದ್ದಾರೆ. ಮಾರಾಟ ಆರಂಭವಾದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿನಲ್ಲಿ 'ಐಫೋನ್ 10' ಔಟ್ ಆಫ್ ಸ್ಟಾಕ್ ಲೀಸ್ಟ್‌ಗೆ ಸೇರಿಕೊಂಡಿದೆ.!!

ಐಫೋನ್‌ನ 10ನೇ ವಾರ್ಷಿಕೋತ್ಸವದ ನೆನಪಿಗಾಗಿ 'ಐಫೋನ್ 10' ತಯಾರಿಸಿರುವ ವಿಶ್ವದ ತಂತ್ರಜ್ಞಾನ ದೈತ್ಯ ಸಂಸ್ಥೆ ಆಪಲ್, ಇದೇ ಮೊದಲ ಬಾರಿಗೆ 'ಐಫೋನ್ 10'ರ ಜಾಗತಿಕ ಬಿಡುಗಡೆ ಜತೆಗೆ ಭಾರತದ ಮಾರುಕಟ್ಟೆಗೂ ಪರಿಚಯಿಸಿತ್ತು. ಹಾಗಾಗಿ, ಆಪಲ್ ಅಭಿಮಾನಿಗಳು 'ಐಫೋನ್ 10' ಮೊಬೈಲ್‌ ಖರೀದಿಸಲು ಧಾವಂತ ತೋರಿದ್ದಾರೆ.!!

'ಐಫೋನ್ 10' ಖರೀದಿಸಲು ಬೆಂಗಳೂರಿನಲ್ಲಿ ಮುಗಿಬಿದ್ದ ಜನರು!!

ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿನ ಆಪಲ್‌ನ ಆಪ್ಟ್ರಾನಿಕ್ಸ್ ಮಳಿಗೆಯವರು ಹೇಳಿದಂತೆ, 'ಐಫೋನ್ 10' ಖರೀದಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಳಿಗೆಯಲ್ಲಿದ್ದ 30 ಫೋನ್‌ಗಳೆಲ್ಲವೂ ಮಾರಾಟವಾಗಿವೆ. ಬಹಳಷ್ಟು ಜನರು ಐಫೋನ್ 10 ಸಿಗದೆ ಬೇಸರದಿಂದ ಹಿಂದಿರುಗಿದ್ದಾರೆ ಎಂದು ತಿಳಿಸಿದ್ದಾರೆ.!!

'ಐಫೋನ್ 10' ಖರೀದಿಸಲು ಬೆಂಗಳೂರಿನಲ್ಲಿ ಮುಗಿಬಿದ್ದ ಜನರು!!

ಅತ್ಯಾಧುನಿಕ ವಿನ್ಯಾಸ ಮತ್ತು ತಂತ್ರಜ್ಞಾನ ಹಾಗೂ ಇದೇ ಮೊದಲ ಭಾರಿಗೆ ಅತ್ಯುನ್ನತ ಮುಖ ಗುರುತಿಸುವ ತಂತ್ರಜ್ಞಾನ ಹೊತ್ತು ಬಂದಿರುವ ಐಫೋನ್ 10' ಬೆಲೆ ಬೆಂಗಳುರಿನಲ್ಲಿ ತೆರಿಗೆ ಒಳಗೊಂಡು 64 ಜಿಬಿ ಸಾಮರ್ಥ್ಯದ ಫೋನ್‌ ಬೆಲೆ ₹ 89,000 ಹಾಗೂ 256 ಜಿಬಿ ಸಾಮರ್ಥ್ಯದ ಫೋನ್ ಬೆಲೆ ₹1,02,000 ಇದೆ.!!

ಓದಿರಿ: ಜಿಯೋ ಎಫೆಕ್ಟ್..ಭಾರಿ ಬಂಡವಾಳ ಹೂಡಿಕೆಗೆ ಮುಂದಾದ ಏರ್‌ಟೆಲ್‌!!

English summary
iPhone X has finally gone on sale in India with scores of fans flocking stores to buy Apple’s tenth-anniversary iPhone.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot