ಜಿಯೋ ಎಫೆಕ್ಟ್..ಭಾರಿ ಬಂಡವಾಳ ಹೂಡಿಕೆಗೆ ಮುಂದಾದ ಏರ್‌ಟೆಲ್!!
ಭಾರತೀಯ ಟೆಲಿಕಾಂನಲ್ಲಿ ಮೊದಲಿನಿಂದಲೂ ದಿಗ್ಗಜನಾಗಿಯೇ ಬಂದಿರುವ ಏರ್‌ಟೆಲ್ ತನ್ನ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲು ಈ ವರ್ಷ 25ಸಾವಿರ ಕೋಟಿ ರೂ.ಹೂಡಿಕೆ ಮಾಡಲಿದೆ.!!
ಭಾರತೀಯ ಟೆಲಿಕಾಂನಲ್ಲಿ ಹೆಚ್ಚು ಸ್ಪರ್ಧೆ ಏರ್ಪಟ್ಟಿರುವುದರಿಂದ ಏರ್‌ಟೆಲ್ ತನ್ನ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲು ಭಾರಿ ಬಂಡವಾಳ ಹೂಡಲು ಮುಂದಾಗಿದೆ.! ಭಾರತೀಯ ಟೆಲಿಕಾಂನಲ್ಲಿ ಮೊದಲಿನಿಂದಲೂ ದಿಗ್ಗಜನಾಗಿಯೇ ಬಂದಿರುವ ಏರ್‌ಟೆಲ್ ತನ್ನ ಮಾರುಕಟ್ಟೆ ವ್ಯಾಪ್ತಿ ವಿಸ್ತರಿಸಲು ಈ ವರ್ಷ 25 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ.!!
ಭಾರತೀಯ ಟೆಲಿಕಾಂಗೆ ಜಿಯೋ ಕಾಲಿಟ್ಟ ನಂತರ ಭಾರಿ ನಷ್ಟ ಅನುಭವಿಸುತ್ತಿರುವ ಏರ್‌ಟೆಲ್, ಮತ್ತೆ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಪ್ರಸಕ್ತ ಹಣಕಾಸು ವರ್ಷದಲ್ಲಿ 25 ಸಾವಿರ ಕೋಟಿಗೂ ರೂಪಾಯಿಗಳಿಗೂ ಹೆಚ್ಚು ಹೂಡಿಕೆ ಮಾಡಲು ನಿರ್ಧರಿಸಿದ್ದು, ಈ ಹಣವನ್ನು 4ಜಿ ಜಾಲವನ್ನು ಬಲಪಡಿಸಲು ಈ ಹಣವನ್ನು ವಿನಿಯೋಗಿಸಲಿದೆ.!!

ಈ ಮೊದಲು 20,000 ಕೋಟಿ ರೂ.ಹೂಡಿಕೆಗೆ ಮುಂದಾಗಿದ್ದೆವು. ಆದರೆ, ಏರ್‌ಟೆಲ್ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಹೂಡಿಕೆಯ ಪ್ರಮಾಣವನ್ನು 25,000 ಕೋಟಿ ರೂ.ಗೆ ವಿಸ್ತರಿಸಿದ್ದೇವೆ ಎಂದು ಏರ್‌ಟೆಲ್ ಕಂಪನಿ ಮುಖ್ಯ ಹಣಕಾಸು ಅಧಿಕಾರಿ ನೀಲಾಂಜನ್ ರಾಯ್ ಗುರುವಾರ ಘೋಷಿಸಿದ್ದಾರೆ.!!

ಜಿಯೋ ಬರುವುದಕ್ಕಿಂತ ಮೊದಲು 4Gಗೆ ಬಂಡವಾಳ ಹೂಡುವ ವಿಷಯದಲ್ಲಿ ಅಷ್ಟೇನು ಮುತುವರ್ಜಿ ತೋರದ ಏರ್‌ಟೆಲ್, ಇದೀಗ 4G ಮಾರುಕಟ್ಟೆ ವಿಸ್ತರಣೆಗಾಗಿ ಭಾರಿ ಬಂಡವಾಳ ಹೂಡಲು ಸಿದ್ದಾವಾಗಿದೆ. ಇದೇ ಸಮಯದಲ್ಲಿ 5G ತಂತ್ರಜ್ಞಾನವನ್ನು ಜಿಯೋಗಿಂತಲೂ ಮೊದಲು ತರಲು ಏರ್‌ಟೆಲ್ ಚಿಂತಿಸಿದೆ.!!
ಓದಿರಿ: ಫ್ಲಿಪ್‌ಕಾರ್ಟ್ ಫೋನ್ ಪೇಯಿಂದ 699.ರೂಗೆ "ಪಿಒಎಸ್" ಸಾಧನ ಬಿಡುಗಡೆ!!..ಏನಿದು ಗೊತ್ತಾ?


Click it and Unblock the Notifications








