ಹಳೆ ಸ್ಮಾರ್ಟ್‌ಫೋನ್‌ ನೀಡಿ,ಹೊಸ ಐಫೋನ್‌4 ಖರೀದಿಸಿ

Posted By:

ಆಪಲ್‌ ಐಫೋನ್4 ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಒಂದು ಗುಡ್‌ ನ್ಯೂಸ್‌. ಆಪಲ್‌ ಕಂಪೆನಿ ಐಫೋನ್ 4 ಮಾರುಕಟ್ಟೆಗೆ ಹೊಸ ತಂತ್ರ ಹೂಡಿದೆ.ನಿಮ್ಮಲ್ಲಿರುವ ಯಾವುದೇ ಸ್ಮಾರ್ಟ್‌ಫೋನ್‌ ನೀಡಿ ಐಫೋನ್‌ 4 ಖರೀದಿಸಬಹುದು.

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ಈಗಾಗ್ಲೇ ನಂಬರ್‌ ಒನ್‌ ಸ್ಥಾನ ಉಳಿಸಿದ್ರೆ ಎರಡನೇ ಸ್ಥಾನದತ್ತ ಮೈಕ್ರೋಮ್ಯಾಕ್ಸ್ ಮುನ್ನುಗ್ಗುತ್ತಿದೆ. ಇದರ ಜೊತೆಯಲ್ಲೇ ದೇಶಿಯ ಕಂಪೆನಿ ಕಾರ್ಬನ್‌ ಸಹ ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ ತಯಾರಿಸಿ ದೊಡ್ಡ ಕಂಪೆನಿ ಸೆಡ್ಡು ಹೊಡೆಯುತ್ತಿದೆ. ಈ ಕಂಪೆನಿಗಳ ಮಧ್ಯೆ ಗ್ರಾಹಕರನ್ನು ಸೆಳೆಯಲು ವಿಫಲವಾಗಿರುವ ಆಪಲ್‌ ಈಗ ಈ ತಂತ್ರವನ್ನು ಹೂಡಿ ಜನರನ್ನು ಸೆಳೆಯುವ ಪ್ರಯತ್ನ ನಡೆಸಲು ಮುಂದಾಗಿದೆ. ಹೇಗೆ ನೀವು ಆಪಲ್‌ 4ನ್ನು ವಿನಿಮಯಮ ಮಾಡಬಹುದು ಎಂಬುದನ್ನು ಮುಂದಿನ ಪುಟದಲ್ಲಿ ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.ನಂತರ ನಿಮ್ಮ ಹಳೆ ಸ್ಮಾರ್ಟ್ ಫೋನ್‌ ನೀಡಿ ಹೊಸ ಆಪಲ್‌4 ಖರೀದಿಸಿ.

ಇದನ್ನೂ ಓದಿ : ಬೆಂಗಳೂರಿನಲ್ಲಿರುವ ಎಲೆಕ್ಟ್ರಾನಿಕ್ಸ್‌ ಶೋರೂಮ್‌ಗಳು ಇಲ್ಲಿವೆ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೇಗೆ ಆಪಲ್‌ ಐಫೋನ್4 ಖರೀದಿಸಬಹುದು ?

ಹೇಗೆ ಆಪಲ್‌ ಐಫೋನ್4 ಖರೀದಿಸಬಹುದು ?

ಹಳೆ ಸ್ಮಾರ್ಟ್‌ಫೋನ್‌ ನೀಡಿ,ಹೊಸ ಐಫೋನ್‌4 ಖರೀದಿಸಿ

ಐಫೋನ್‌ಗೆ ಸದ್ಯದ ಮಾರುಕಟ್ಟೆಯಲ್ಲಿ 25,799 ರೂಪಾಯಿ ಇದೆ. ಆದರೆ ವಿನಿಮಯ ದರದಲ್ಲಿ ನೀವು ಸುಮಾರು 16ಸಾವಿರ ರೂಪಾಯಿಯಲ್ಲಿ ಪಡೆಯಬಹುದು. ವಿನಿಮಯ ಮಾಡಬೇಕಾದ್ರೆ ನಿಮ್ಮಲ್ಲಿ ಎರಡು ವರ್ಷದ ಒಳಗಿನ ಸದ್ಯ ಉತ್ತಮ ಪರಿಸ್ಥಿಯಲ್ಲಿರುವ(working condition) ಸ್ಯಾಮ್‌ಸಂಗ್‌,ಸೋನಿ,ಎಲ್‌ಜಿ,ನೋಕಿಯಾ,ಬ್ಲ್ಯಾಕ್‌ಬೆರಿಯಂತಹ ಜಾಗತಿಕ ಮಟ್ಟದ ಕಂಪೆನಿಗಳ ಸ್ಮಾರ್ಟ್‌ಫೋನ್‌ ವಿನಿಮಯ ಮಾಡಿ ಖರೀದಿಸಬಹುದು.

ವಿನಿಮಯ ಮಾಡುವಂತಹ ಸ್ಮಾರ್ಟ್‌ಫೋನಲ್ಲಿ ಯಾವ ದಾಖಲೆಗಳಿರಬೇಕು?

ವಿನಿಮಯ ಮಾಡುವಂತಹ ಸ್ಮಾರ್ಟ್‌ಫೋನಲ್ಲಿ ಯಾವ ದಾಖಲೆಗಳಿರಬೇಕು?

ಹಳೆ ಸ್ಮಾರ್ಟ್‌ಫೋನ್‌ ನೀಡಿ,ಹೊಸ ಐಫೋನ್‌4 ಖರೀದಿಸಿ

ಒಂದು ವೇಳೆ ನೀವು ಸ್ಮಾರ್ಟ್‌ಫೋನ್‌ ವಿನಿಮಯ ಮಾಡಿ ಐಫೋನ್‌4 ಖರೀದಿಸಬೇಕೆಂದಿದ್ದರೆ, ವಿನಿಮಯ ಮಾಡಬೇಕಾದ ಸ್ಮಾರ್ಟ್‌ಫೋನ್‌ ಬಿಲ್ಲಿಂಗ್‌,ಮತ್ತು ಅದರ ಬಾಕ್ಸ್‌ ನೀಡಿ ವಿನಿಮಯ ಮಾಡಬಹುದು.

ಎಲ್ಲಿ ಐ ಫೋನ್‌ ಖರೀದಿಸಬಹುದು ?

ಎಲ್ಲಿ ಐ ಫೋನ್‌ ಖರೀದಿಸಬಹುದು ?

ಹಳೆ ಸ್ಮಾರ್ಟ್‌ಫೋನ್‌ ನೀಡಿ,ಹೊಸ ಐಫೋನ್‌4 ಖರೀದಿಸಿ

ಸದ್ಯ ಈಗ ಎಲ್ಲಾ ಐಸ್ಟೋರ್‌ಗಳಲ್ಲಿ ನೀವು ವಿನಿಮಯ ಮಾಡಿಕೊಳ್ಳಬಹುದು. ಜೊತೆಗೆ ಆಪಲ್ ಐಫೋನ್‌ಗಳನ್ನು ಮಾರಾಟ ಮಾಡುವಂತಹ ರಿಟೇಲ್‌ ಅಂಗಡಿಗಳನ್ನು ವಿನಿಮಯ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot