ಬೆಂಗಳೂರಿನಲ್ಲಿ ಸ್ಥಾಪನೆಯಾಗಲಿದೆ 'ಐಫೋನ್ 7' ತಯಾರಿಕಾ ಘಟಕ.!
ಐಫೋನ್‌ಗಳ ಫೀಚರ್ಸ್‌ಗಳು ಅತ್ಯುನ್ನತವಾಗಿರುತ್ತವೆ ಆದರೆ ಬೆಲೆ ದುಬಾರಿ ಎನ್ನುವ ಮಾತು ಭಾರತೀಯ ಗ್ರಾಹಕರಲ್ಲಿ ಸಾಮಾನ್ಯವಾಗಿ ಕೇಳಿಬರುತ್ತದೆ. ಇದೀಗ ಜನಪ್ರಿಯ ಐಫೋನ್ ತಯಾರಿಕಾ ಕಂಪನಿ ಆಪಲ್ ದೇಶಿಯ ಐಫೋನ್ ಪ್ರಿಯ ಗ್ರಾಹಕರಿಗೆ ಖುಷಿ ಸುದ್ದಿಯೊಂದನ್ನು ನೀಡಿದ್ದು, ತನ್ನ ಮುಂದಿನ 'ಐಫೋನ್ 7' ಫೋನ್‌ಗಳ ತಯಾರಿಕೆಯನ್ನು ಬೆಂಗಳೂರಿನಲ್ಲಿ ಮಾಡುವುದಾಗಿ ತಿಳಿಸಿದೆ.

ಹೌದು, ಆಪಲ್ ತನ್ನ ಐಫೋನ್ 7 ಫೋನ್ ಉತ್ಪಾದನೆಯನ್ನು ಬೆಂಗಳೂರಿನಲ್ಲಿ ಆರಂಭಿಸುವುದಾಗಿ ಯೋಜನೆ ಇದ್ದು, ಇಲ್ಲಿಯೇ ಐಫೋನ್ ಅಸೆಂಬಲ್ ಮಾಡಲಿದೆ ಎಂದು ಕಂಪನಿಯ ವಕ್ತಾರ ತಿಳಿಸಿದ್ದು, ಐಫೋನ್‌ಗಳ ಉತ್ಪಾದನೆಯ ಸಂಖ್ಯೆಯನ್ನು ಸಹ ಹೆಚ್ಚಿಸುವುದಾಗಿಯು ತಿಳಿಸಿದ್ದಾರೆ. ಇದರೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಸಂಸ್ಥೆಯ ಅಧಿಕೃತ ಆಪಲ್ ಶೋರಂಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗುವುದು ಯೋಜನೆಗಳನ್ನು ಹೇಳಿದ್ದಾರೆ.

ಭಾರತದಲ್ಲಿ ಆಪಲ್ ಗ್ರಾಹಕರಿದ್ದು, ಐಫೋನ್ 7 ಫೋನ್‌ಗಳ ಉತ್ಪಾದನೆಯನ್ನು ಬೆಂಗಳೂರಿನಲ್ಲಿ ಆರಂಭಿಸುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ ಎಂಬುದನ್ನು ಆಪಲ್ ವಕ್ತಾರ ತಿಳಿಸಿದ್ದಾರೆ.ಅದಕ್ಕಾಗಿ ಸಂಸ್ಥೆಯು ತೈವಾನ ಮೂಲಕ 'ವಿಸ್ಟ್ರೋನ್' ಕಂಪನಿಯ ಸಹಯೋಗದೊಂದಿಗೆ ಐಫೋನ್ 7 ತಯಾರಿಕೆಗೆ ಮುಂದಾಗಿದೆ. ವಿಸ್ಟ್ರೋನ್ ಕಂಪನಿ ಈ ಹಿಂದೆ ಆಪಲ್ ಐಫೋನ್ 6S ಮಾದರಿಯ ಫೋನ್‌ಗಳನ್ನು ತಯಾರಿಸಿತ್ತು.

'ವಿಸ್ಟ್ರೋನ್' ಕಂಪನಿಯ ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 3000ರೂ. ಕೋಟಿಯ ಘಟಕ ಸ್ಥಾಪಿಸುವ ಯೋಜನೆಯನ್ನು ಹೊಂದಿರುವುದಾಗಿ ತಿಳಿಸಿದ್ದು, ಆಪಲ್ ಆರಂಭಿಕ ಐಫೋನ್ ಮಾದರಿಗಳಾದ ಐಪೋನ್SE ಮತ್ತು ಐಫೋನ್ 6S ಗಳ ಅಸೆಂಬಲ ಮಾಡಲಾಗುವುದು ಎನ್ನಲಾಗಿದೆ. ಐಫೋನ್ ತಯಾರಿಕೆಗಾಗಿ 43 ಎಕರೆ ಸ್ಥಳ ದೊರೆತಿದ್ದು, ಸುಮಾರು 10000 ಜನರಿಗೆ ಉದ್ಯೋಗ ಅವಕಾಶ ದೊರೆಯಲಿದೆ. ಎಂದು 'ವಿಸ್ಟ್ರೋನ್ ಕಂಪನಿಯ ಭಾರತ ವಿಭಾಗದ ಮುಖ್ಯಸ್ಥ ಗುರುರಾಜ ತಿಳಿಸಿದ್ದಾರೆ.
ಐಫೋನ್ 7 ಫೋನ್ ರೆಟಿನಾ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, iOS 12 ಅಪರೇಟಿಂಗ್ ಸಿಸ್ಟಮ್ ಇದರಲ್ಲಿ ಕಾರ್ಯನಿರ್ವಹಿಸಲಿದೆ. 12 ಮೆಗಾಪಿಕ್ಸಲ್ ಕ್ಯಾಮೆರಾವನ್ನು ಹೊಂದಿರಲಿದ್ದು, ವಾಟರ್ ರೆಸಿಸ್ಟನ್ಸ್ ಸಾಮರ್ಥ್ಯವಿರಲಿದೆ. ಇದರೊಂದಿಗೆ ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿಯನ್ನು ಒದಗಿಸಲಾಗಲಿದ್ದು, ಅತ್ಯುತ್ತಮ ಸೌಂಡ್‌ಗಾಗಿ ಸ್ಟೀರಿಯೊ ಸ್ಪೀಕರ್ಸ್ ಇರಲಿವೆ.


Click it and Unblock the Notifications








