Subscribe to Gizbot

ಕೆಂಪು ಬಣ್ಣದಲ್ಲಿ ಮಾರುಕಟ್ಟೆಗೆ ಬರಲಿವೆ ಐಪೋನ್ 8 ಮತ್ತು ಐಪೋನ್ 10!!

Written By:

ಆಪಲ್ ಐಪೋನ್ 7 ಅನ್ನು ಕೆಂಪು ಬಣ್ಣದಲ್ಲಿ ಬಿಡುಗಡೆ ಮಾಡಿದ ಆಪಲ್ ಕಂಪೆನಿ ಇದೀಗ ಐಪೋನ್ 8 ಮತ್ತು ಐಪೋನ್ 10 ಅನ್ನು ಕೂಡ ಕೆಂಪು ಬಣ್ಣದಲ್ಲಿ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. ಆಫ್ರಿಕಾದಲ್ಲಿ HIV/AIDS ಅನ್ನು ಸಮರ್ಥವಾಗಿ ಎದುರಿಸಲು ಸಮರ್ಪಿತವಾದ (RED) ವಕೀಲ ಸಮುದಾಯ ಪಾಲುದಾರಿಕೆಗೆ ನೂತನ ಬಣ್ಣದ ಐಪೋನ್ ಬರುತ್ತಿವೆ.

ಬಿಜಿಆರ್, ದ ವರ್ಜ್ ಸೇರಿದಂತೆ ಹಲವು ಟೆಕ್ ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ, ಇನ್ನೆರಡು ದಿನಗಳಲ್ಲಿ ಆಪಲ್ ಕಂಪೆನಿಯ ಐಪೋನ್ 8 ಮತ್ತು ಐಪೋನ್ 10 ಫೋನುಗಳು ಕಂಪುಬಣ್ಣದಲ್ಲಿ ಬಿಡುಗಡೆಯಾಗುವ ಬಗ್ಗೆ ಆಪಲ್ ಘೋಷಿಸಲಿದೆ ಎಂದು ಹೇಳಿವೆ. ಆದರೆ, ಐಪೋನ್ 10 ಕೆಂಪು ಬಣ್ಣದಲ್ಲಿ ಬರುವ ಬಗ್ಗೆ ಸಂದೇಹವನ್ನು ಸಹ ಮೂಡಿಸಿವೆ. !

ಕೆಂಪು ಬಣ್ಣದಲ್ಲಿ ಮಾರುಕಟ್ಟೆಗೆ ಬರಲಿವೆ ಐಪೋನ್ 8 ಮತ್ತು ಐಪೋನ್ 10!!

U2 ಫ್ರಂಟ್ ಮ್ಯಾನ್ ಬೊನೊ ಮತ್ತು ONE ಅಭಿಯಾನದ ಕಾರ್ಯಕರ್ತ ಬಾಬಿ ಶ್ರೀವರ್ ಅವರಿಂದ 2006 ರಲ್ಲಿ ಸ್ಥಾಪಿತವಾದ ಕೆಂಪು ಉತ್ಪನ್ನ" (Product Red) ಜೊತೆ ಆಪಲ್ ಪಾಲುದಾರಿಕೆ ನೀಡುತ್ತಿದೆ. ಎಚ್ಐವಿ / ಏಡ್ಸ್ ಅನ್ನು ಎದುರಿಸಲು ಪ್ರಯತ್ನಗಳನ್ನು ಎತ್ತಿಹಿಡಿಯಲು RED ಸಮುದಾಯ ಕೂಡ ಖಾಸಗಿ ಕಂಪನಿಗಳಿಗೆ ತನ್ನ ಹೆಸರನ್ನು ಪರವಾನಗಿಯಾಗಿ ನೀಡಿದೆ.

ಕೆಂಪು ಬಣ್ಣದಲ್ಲಿ ಮಾರುಕಟ್ಟೆಗೆ ಬರಲಿವೆ ಐಪೋನ್ 8 ಮತ್ತು ಐಪೋನ್ 10!!

ಇದರಿಂದ ಘಾನಾ, ಕೀನ್ಯಾ, ಲೆಸೋಥೊ, ರುವಾಂಡಾ, ದಕ್ಷಿಣ ಆಫ್ರಿಕಾ, ಸ್ವಾಜಿಲ್ಯಾಂಡ್ , ಟಾಂಜಾನಿಯಾ ಮತ್ತು ಜಾಂಬಿಯಾ ಸೇರಿದಂತೆ ಆಫ್ರಿಕಾದ ರಾಷ್ಟ್ರಗಳಲ್ಲಿ ಎಚ್ಐವಿ / ಏಡ್ಸ್ ಅನ್ನು ದೂರಮಾಡಿಸಲು ಹಣದ ಸಹಾಯವೂ ಸಿಗುತ್ತಿದೆ. ಕಳೆದ ವರ್ಷ ಮೊದಲ ಬಾರಿಗೆ ಐಫೋನ್ 7 ಕೆಂಪು ಬಣ್ಣದಲ್ಲಿ ಬಿಡುಗಡೆಯಾಗಿದ್ದು ಸಹ ಕೂಡ ಇದೇ ಕಾರಣಕ್ಕಾಗಿತ್ತು.

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಓದಿರಿ: ನಕಲಿ ಐಫೋನ್ ಅನ್ನು ಸುಲಭವಾಗಿ ಗುರುತಿಸುವುದು ಹೇಗೆ?!!

English summary
Apple will reportedly introduce a new color to its iPhone 8 and 8 Plus : red. The new color is part of the company’s partnership with (RED). to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot