Subscribe to Gizbot

ನಕಲಿ ಐಫೋನ್ ಅನ್ನು ಸುಲಭವಾಗಿ ಗುರುತಿಸುವುದು ಹೇಗೆ?!!

Written By:

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆಪಲ್ ಐಫೋನ್‌ಗಳು ಎಂದು ಹೇಳಿ ಬೆಂಗಳೂರು ನಗರವೊಂದರಲ್ಲಿಯೇ ಕನಿಷ್ಟವೆಂದರೂ ಪ್ರತಿದಿನ 5 ನಕಲಿ ಐಫೋನ್‌ಗಳನ್ನು ಮಾರುವ ದೊಡ್ಡಜಾಲವೊಂದು ಬೀಡುಬಿಟ್ಟಿದೆ. ನೋಡಲು ಐಪೋನ್ ರೀತಿಯಲ್ಲಿಯೇ ವಿನ್ಯಾಸವಾಗಿರುವ ಚೀನಾದ ಫೋನ್ ಅನ್ನು ಜನರಿಗೆ ಮಂಕುಬೂದಿ ಹಾಕಿ ಮಾರುತ್ತಿದ್ದಾರೆ.

ವಿದೇಶದಿಂದ ತರಿಸಲಾಗಿರುವ ಈ ಐಫೋನ್‌ಗಳನ್ನು ತೆರಿಗೆ ರಹಿತವಾಗಿ ಮಾರಾಟ ಮಾಡುತ್ತಿರುವುದರಿಂದ ನಿಮಗೆ ಅತ್ಯಂತ ಕಡಿಮೆ ಬೆಲೆಗೆ ಈ ಐಫೋನ್‌ಗಳನ್ನು ನೀಡುತ್ತಿದ್ದೇವೆ. ಮಾರುಕಟ್ಟೆಯಲ್ಲಿರುವ ಬೆಲೆಗಿಂತ ಅರ್ದಬೆಲೆಗೆ ಈ ಐಫೋನ್‌ಗಳನ್ನು ಖರೀದಿಸಬಹುದು ಎಂದು ಮಾತಿನಲ್ಲಿಯೇ ಮೋಡಿಮಾಡಿ ಪಂಗನಾಮ ಹಾಕುತ್ತಿದ್ದಾರೆ.

ನಕಲಿ ಐಫೋನ್ ಅನ್ನು ಸುಲಭವಾಗಿ ಗುರುತಿಸುವುದು ಹೇಗೆ?!!

ಇನ್ನು ಚೀನಾದಲ್ಲಿ ತಯಾರಾಗುತ್ತಿರುವ ಐಫೋನ್ ರೀತಿಯಲ್ಲಿಯೇ ಇರುವ ಈ ಫೋನ್‌ಗಳು ಸಹ ಐಫೋನ್ ತಂದ್ರೂಪಿಯಂತೆ ಇರುವುದರಿಂದ ಜನರು ಸಹ ಅವರ ಬಲೆಗೆ ಬೀಳುತ್ತಿದ್ದಾರೆ. ಹಾಗಾದರೆ, ಐಫೋನ್‌ಗಳಿಗೂ ಮತ್ತು ನಕಲಿ ಐಫೋನ್‌ಗಳಿಗೂ ಇರುವ ವ್ಯತ್ಯಾಸವೇನು? ನಿಜವಾದ ಐಫೋನ್ ಕಂಡುಹಿಡಿಯುವುದು ಹೇಗೆ? ಎಂಬುದನ್ನು ಈ ಲೆಖನದಲ್ಲಿ ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೀರಿಯಲ್ ಸಂಖ್ಯೆ ಪರಿಶೀಲಿಸಿ

ಸೀರಿಯಲ್ ಸಂಖ್ಯೆ ಪರಿಶೀಲಿಸಿ

ಐಫೋನ್ ಪಡೆದುಕೊಂಡ ನಂತರ ಸೆಟ್ಟಿಂಗ್‌ಗೆ ತೆರಯಿರಿ, ಜನರಲ್‌ಗೆ ಹೋಗಿ ಮತ್ತು ಅಬೌಟ್ ಬಟನ್ ಸ್ಪರ್ಶಿಸಿ. ಇದೀಗ ನಿಮಗೆ ಸ್ಕ್ರಾಲ್ ಡೌನ್ ಮಾಡಬಹುದು ಇಲ್ಲಿ ಡಿವೈಸ್‌ನ 11 ಡಿಜಿಟ್ ಸೀರಿಯಲ್ ಸಂಖ್ಯೆ ನೋಡಬಹುದು. AABCCDDDEEF ಈ ಸ್ವರೂಪದಲ್ಲಿ ನಿಮಗೆ ದೊರೆಯುತ್ತದೆ.

ನಕಲಿ ಫೋನ್ ಮೆಮೊರಿ ಕಾರ್ಡ್

ನಕಲಿ ಫೋನ್ ಮೆಮೊರಿ ಕಾರ್ಡ್

ಮೆಮೊರಿ ಸಾಮರ್ಥ್ಯ ಮೂಲ ಐಫೋನ್ ಮೆಮೊರಿ ಸಾಮರ್ಥ್ಯ 16ಜಿಬಿ/32ಜಿಬಿ ಅಥವಾ 64ಜಿಬಿ ಇರುತ್ತದೆ. ಆದರೆ ನಕಲಿ ಫೋನ್ ಮೆಮೊರಿ ಕಾರ್ಡ್ ವಿಸ್ತರಿಸಲು ಎಸ್‌ಡಿ ಕಾರ್ಡ್ ಇರುತ್ತದೆ. ಇದರಿಂದ ನಿಮ್ಮ ಐಫೋನ್ ನಕಲಿ ಎಂಬುದು ಗೊತ್ತಾಗಿಬಿಡುತ್ತದೆ.

ಲೋಗೋವನ್ನು ಪರಿಶೀಲಿಸಿ!!

ಲೋಗೋವನ್ನು ಪರಿಶೀಲಿಸಿ!!

ನಿಮ್ಮ ಐಫೋನ್ ಅನ್ನು ನೀವು ಪವರ್ ಆನ್ ಮಾಡಿದಾಗ ಲೋಗೋ ಕಾಣದಿದ್ದರೆ ಅದು ನಕಲಿ ಐಫೋನ್ ಆಗಿರುತ್ತದೆ. ಜೊತೆಗೆ ನಕಲಿ ಐಫೋನ್ ಡಿಜಿಟಲ್ ದೃಢೀಕರಣ ಹೊಂದಿರುವುದಿಲ್ಲ ಸಿರಿ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿ ನಿಮ್ಮ ಐಫೋನ್‌ನಿಂದ ಸಿರಿ ಅಪ್ಲಿಕೇಶನ್ ಅನ್ನು ಪಡೆದುಕೊಳ್ಳಲು ಪ್ರಯತ್ನಿಸಿ. ನಿಮಗೆ ಇದು ಕಾಣದಿದ್ದಲ್ಲಿ ಅಥವಾ ಸಿರಿ ಅಪ್ಲಿಕೇಶನ್ ಪ್ರವೇಶಿಸಲು ಸಾಧ್ಯವಾಗದಿದ್ದಲ್ಲಿ ನೀವು ನಕಲಿ ಐಫೋನ್ ಬಳಸುತ್ತಿದ್ದೀರಿ ಎಂಬುದು ನಿಜ.

ಐಓಎಸ್ ಆಪರೇಟಿಂಗ್ ಸಿಸ್ಟಮ್

ಐಓಎಸ್ ಆಪರೇಟಿಂಗ್ ಸಿಸ್ಟಮ್

ನೈಜ ಐಫೋನ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಪರಿಶೀಲಿಸಿ. ನಕಲಿ ಐಫೋನ್‌ಗಳು ಬಹುತೇಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತಿರುತ್ತವೆ. ನೈಜ ಐಫೋನ್ ಐಓಎಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರುತ್ತದೆ. ಐಓಎಸ್ ಅಲ್ಲದೆ ಬೇರೆ ಓಎಸ್ ನಿಮಗೆ ಕಂಡುಬಂದಲ್ಲಿ ನಿಮ್ಮ ಐಫೋನ್ ನಕಲಿ ಎಂದರ್ಥ.

ಅಪ್ಲಿಕೇಶನ್ಸ್!!

ಅಪ್ಲಿಕೇಶನ್ಸ್!!

ಇನ್‌ಬಿಲ್ಟ್ ಅಪ್ಲಿಕೇಶನ್ಸ್ ಪರಿಶೀಲಿಸಿ ಕೆಲವೊಂದು ಸಾಮಾನ್ಯ ಅಪ್ಲಿಕೇಶನ್‌ಗಳಾದ ಕಾಂಪ್ಯಾಕ್ಟ್, ಕಂಪಾಸ್, ಸೆಟ್ಟಿಂಗ್ಸ್, ಕ್ಯಾಲ್ಕುಲೇಟರ್, ಮ್ಯೂಸಿಕ್ ಮತ್ತು ಫೋಟೋಗಳನ್ನು ನೈಜ ಐಫೋನ್ ಹೊಂದಿರುತ್ತದೆ. ಯಾವುದೇ ಅಪ್ಲಿಕೇಶನ್ ಮಿಸ್ ಆಗಿದ್ದಲ್ಲಿ ಇದು ನಕಲಿ ಎಂಬುದು ಖಾತ್ರಿಯಾಗುತ್ತದೆ.

ದೃಢೀಕೃತ ಟೂಲ್!!

ದೃಢೀಕೃತ ಟೂಲ್!!

ಐಫೋನ್ ಸ್ಟೋರ್ ನೀವು ಖರೀದಿಸಿರುವ ಐಫೋನ್ ಅಸಲಿಯೇ ನಕಲಿಯೇ ಎಂಬುದನ್ನು ಈ ಸ್ಟೋರ್‌ಗೆ ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಳ್ಳಿ. ಐಫೋನ್ ಪರಿಣಿತರಲ್ಲಿ ನಿಮ್ಮ ಫೋನ್ ಅನ್ನು ನೀಡಿ ಅದನ್ನು ದೃಢೀಕೃತ ಟೂಲ್ ಬಳಸಿ ಪರಿಶೀಲಿಸಲು ತಿಳಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The first thing to that you should check to determine if an iPhone is fake or not is its operating system. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot