ನಿದ್ದೆ ಬರುತ್ತಿಲ್ಲ ಎಂದು ಸ್ಮಾರ್ಟ್‌ಪೋನ್ ಯೂಸ್ ಮಾಡುತ್ತಿದ್ದೀರಾ?

|

ಸ್ಮಾರ್ಟ್‌ಪೋನ್‌ ಏನು ಮೋಡಿ ಮಾಡಿದೆಯೋ ಗೊತ್ತಿಲ್ಲ. ರಾತ್ರಿ ಮಲಗುವ ಮುನ್ನ ಸ್ಮಾರ್ಟ್‌ಫೋನ್‌ ಬಳಕೆ ಮಾಡದಿದ್ದರೆ ನನಗೆ ನಿದ್ದೆ ಬರುವುದಿಲ್ಲ ಎಂದು ಎಷ್ಟೋ ಜನ ಹೇಳಿರುತ್ತಾರೆ. ಆದರೆ, ನೂತನವಾಗಿ ನಡೆದಿರುವ ಅಧ್ಯಯನದ ಪ್ರಕಾರ ಸ್ಮಾರ್ಟ್‌ಪೋನ್‌ ಬಳಕೆದಾರರ ಲೆಕ್ಕ ತಪ್ಪಾಗಿದೆ.!!

ಹೌದು, ಇಂದಿನ ಯುವಕರ ಬಹುದೊಡ್ಡ ಸಮಸ್ಯೆ ಎಂದರೆ ಸ್ಮಾರ್ಟ್‌ಫೋನ್‌ ಬಿಟ್ಟಿರಲಾಗದೆ ಇರುವುದು. ಎಲ್ಲೆಂದರಲ್ಲಿ ಯಾವಾಗಲೂ ಸ್ಮಾರ್ಟ್‌ಪೊನ್‌ ಉಪಯೋಗಿಸುವವರೇ ಎಲ್ಲಾ ಕಡೆ ಕಾಣಿಸುತ್ತಾರೆ. ಪ್ರತಿದಿ ಬೆಳಿಗ್ಗೆ ಎದ್ದು ಸ್ಮಾರ್ಟ್‌ಫೋನ್‌ ಹಿಡಿದುಕೊಂಡರೆ ಮತ್ತೆ ರಾತ್ರಿ ಕಣ್ಣು ಮುಚ್ಚಲೂ ಕಷ್ಟ ಎನ್ನುವಂತಹ ಪರಿಸ್ಥಿತಿ ಈ ಸ್ಮಾರ್ಟ್‌ಫೋನ್‌ ಬಳಕೆದಾರರದ್ದು.

ನಿದ್ದೆ ಬರುತ್ತಿಲ್ಲ ಎಂದು ಸ್ಮಾರ್ಟ್‌ಪೋನ್ ಯೂಸ್ ಮಾಡುತ್ತಿದ್ದೀರಾ?

900 ದಶಲಕ್ಷ ಸ್ಮಾರ್ಟ್‌ಫೋನ್‌ ಸುರಕ್ಷಿತವಾಗಿಲ್ಲ!! ವರದಿ ನೀಡಿದ್ದು ಯಾರು ಗೊತ್ತಾ?

ಇನ್ನು ಹೀಗೆ ರಾತ್ರಿಯವೇಳೆ ಸ್ಮಾರ್ಟ್‌ಫೊನ್‌ ಬಳಕೆ ಮಾಡುವುದರಿಂದ ಸ್ಮಾರ್ಟ್‌ಪೊನ್‌ ಬಳಕೆದಾರರಿಗೆ ನಿದ್ದೆ ಬರುವುದಿಲ್ಲ, ಜೊತೆಗೆ ಹಲವು ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.! ಸ್ಮಾರ್ಟ್‌ಪೋನ್‌ ಬಳಕೆಯಿಂದ ಹೊರಚೆಲ್ಲುವ ನೀಲಿ ಕಿರಣಗಳು "ಮೆಲಟೋನಿನ್" ಮೇಲೆ ಪ್ರಬಾವ ಭೀರಿ ನಿದ್ದೆ ಬರದ ಹಾಗೆ ಮಾಡುತ್ತಿದೆ ಎಂದು ಅಧ್ಯಯನ ತಿಳಿಸಿದೆ.

ನಿದ್ದೆ ಬರುತ್ತಿಲ್ಲ ಎಂದು ಸ್ಮಾರ್ಟ್‌ಪೋನ್ ಯೂಸ್ ಮಾಡುತ್ತಿದ್ದೀರಾ?

ಏನಿದು "ಮೆಲಟೋನಿನ್"?

ಮಾನವನು ಮಲಗಲು ಬೇಕಾದ ಹಾರ್ಮೋನ್‌ ಅನ್ನು "ಮೆಲಟೋನಿನ್" ಎಂದು ಕರೆಯುತ್ತಾರೆ. ನಿದ್ರಿಸಲು ಪ್ರಾರಂಭಿಸಿದ ನಂತರ ಚಾಲನೆಗೊಳ್ಳುವ ಈ ಹಾರ್ಮೋನ್ ಬೆಳಕಿನಲ್ಲಿ ಹೆಚ್ಚು ಕಾರ್ಯ ನಿರ್ವಹಿಸುವುದಿಲ್ಲ ಎಂದು ತಾಧ್ಯಯನ ಹೇಳಿದೆ. ಅದರಲ್ಲಿಯೂ ವಿಶೇಷವಾಗಿ ರಾತ್ರಿಯ ವೇಳೆಯಲ್ಲಿ ನೀಲಿ ಕಿರಣಗಳನ್ನು ಹೆಚ್ಚು ನೋಡಿದರೆ ನಿದ್ದೆಯ ಮಂಪರು ಹೋಗುತ್ತದೆ ಎಂದು ತಿಳಿಸಿದೆ.

ನಿದ್ದೆ ಬರುತ್ತಿಲ್ಲ ಎಂದು ಸ್ಮಾರ್ಟ್‌ಪೋನ್ ಯೂಸ್ ಮಾಡುತ್ತಿದ್ದೀರಾ?

ಹೀಗೆ ನಿದ್ರೆ ಮಾಡದೇ ಇರುವುದರಿಂದಲೇ. ಮಧುಮೇಹಗಳಂತಹ ದೊಡ್ಡ ಕಾಯಿಲೆಗಳಿಗೆ ಯುವಕರು ತುತ್ತಾಗುತ್ತಾರೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಆದ್ದರಿಂದ ಸಾಧ್ಯವಾದಷ್ಟು ರಾತ್ರಿಯ ವೇಳೆ ಸ್ಮಾರ್ಟ್‌ಫೋನ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ತಿಳಿಸಿದೆ.

Best Mobiles in India

English summary
sleep hormone secreted by the pineal gland which is located in the epithalamus of our body. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X