900 ದಶಲಕ್ಷ ಸ್ಮಾರ್ಟ್‌ಫೋನ್‌ ಸುರಕ್ಷಿತವಾಗಿಲ್ಲ!! ವರದಿ ನೀಡಿದ್ದು ಯಾರು ಗೊತ್ತಾ?

Written By:

900 ದಶಲಕ್ಷಕ್ಕಿಂತ ಹೆಚ್ಚಿನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಅಪಾಯಕಾರಿಯಾಗಿವೆ ಎಂದು ಪ್ರಪಂಚದಲ್ಲಿಯೇ ಪ್ರಖ್ಯಾತ ಭದ್ರತಾ ಟೆಕ್ನಾಲಜಿ ಕಂಪನಿ 'ಚೆಕ್‌ ಪಾಯಿಂಟ್‌ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌' ಹೇಳಿದೆ.! ಪ್ರಸ್ತುತ ಬಹುತೇಕ ಕ್ವಾಲ್ಕಮ್ ಚಿಪ್‌ಸೆಟ್ ಚಾಲಿತ ಡಿವೈಸ್‌ಗಳು ಕ್ವಾಡ್‌ರೂಟರ್‌ ತಂತ್ರಜ್ಞಾನದಲ್ಲಿ ನ್ಯೂನತೆ ಹೊಂದಿದ್ದು, ಹ್ಯಾಕರ್‌ಗಳಿಂದ ಸ್ಮಾರ್ಟ್‌ಫೋನ್‌ ರಕ್ಷಿಸಿಕೊಳ್ಳುವುದು ಕಷ್ಟ ಎಂದು ಆರೋಪಿಸಿದೆ.

ಇನ್ನು ಇದರ ಜೊತೆಯಲ್ಲಿಯೇ ಕ್ವಾಲ್ಕಮ್ ಚಿಪ್‌ಸೆಟ್‌ನಲ್ಲಿ ಇನ್ನು ಹಲವು ದೋಷಗಳನ್ನು ಪತ್ತೆಹಚ್ಚಲಾಗಿದ್ದು, ಈ ದೋಷಗಳಿಂದ ಯಾವುದೇ ಹ್ಯಾಕರ್‌ಗಳು ಸಂಪೂರ್ಣ ಸ್ಮಾರ್ಟ್‌ಫೋನ್‌ ಅನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು, ಜಿಪಿಎಸ್‌ ಟ್ರ್ಯಾಕಿಂಗ್‌, ವೀಡಿಯೊ ಮತ್ತು ಆಡಿಯೋ ರೆಕಾರ್ಡಿಂಗ್‌ ಸಹ ಹ್ಯಾಕ್ ಮಾಡಬಹುದು ಎಂದು ಚೆಕ್‌ ಪಾಯಿಂಟ್‌ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.

900 ದಶಲಕ್ಷ ಸ್ಮಾರ್ಟ್‌ಫೋನ್‌ ಸುರಕ್ಷಿತವಾಗಿಲ್ಲ!! ವರದಿ ನೀಡಿದ್ದು ಯಾರು ಗೊತ್ತಾ?

ಟೆಲಿಕಾಂ ನಿಯಮಗಳನ್ನು ಬದಲಿಸಲು ಸಜ್ಜಾದ "ಟ್ರಾಯ್"!!...ಜಿಯೋ ಆಫರ್ 2 ಎಫೆಕ್ಟ್?

ಸ್ಮಾರ್ಟ್‌ಫೋನ್‌ ಚಿಪ್‌ಸೆಟ್ ಕ್ವಾಡ್‌ರೂಟರ್ ಸಮಸ್ಯೆಯಿಂದಾಗಿ, ಹ್ಯಾಕರ್‌ಗಳು ವಿವಿಧ ಚಿಪ್‌ಸೆಟ್‌ ನಡುವಿನ ಸಂವಹನವನ್ನು ನಿಯಂತ್ರಿಸಬಹುದು. ಅನಧಿಕೃತ ಆಪ್‌ಗಳು ಅಥವಾ ಲಿಂಕ್‌ಗಳ ಮೂಲಕ ಈ ಎಲ್ಲಾ ಕಾರ್ಯಗಳು ನಡೆಯುತ್ತವೆ ಎಂದು ಚೆಕ್‌ ಪಾಯಿಂಟ್‌ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌ ತಿಳಿಸಿದೆ. ಈ ಎಲ್ಲಾ ದೋಷಗಳು ತಯಾರಕರ ಹಂತದಲ್ಲೇ ಇನ್‌ಸ್ಟಾಲ್ ಆಗಿವೆ ಎಂದು ಆರೋಪಿಸಿದೆ .

900 ದಶಲಕ್ಷ ಸ್ಮಾರ್ಟ್‌ಫೋನ್‌ ಸುರಕ್ಷಿತವಾಗಿಲ್ಲ!! ವರದಿ ನೀಡಿದ್ದು ಯಾರು ಗೊತ್ತಾ?

'ಚೆಕ್‌ ಪಾಯಿಂಟ್‌ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌' ಹೇಳಿರುವಂತೆ ಸ್ಯಾಮ್‌ಸಂಗ್‌, ಗೂಗಲ್‌ ನೆಕ್ಸಸ್, ಎಲ್‌ಜಿ, ಮತ್ತು ಒನ್‌ಪ್ಲಸ್‌ ಕಂಪೆನಿಗಳಂತಹ ಸ್ಮಾರ್ಟ್‌ಪೋನ್‌ಗಳು ಸಹ ಈ ಸಮಸ್ಯೆಯನ್ನು ಎದುರಿಸುತ್ತಿದ್ದು, ಗ್ರಾಹಕರು ಎಚ್ಚರಿಕೆ ವಹಿಸಿಬೇಕಿದೆ ಎಂದು ಚೆಕ್‌ ಪಾಯಿಂಟ್‌ ಸಾಫ್ಟ್‌ವೇರ್‌ ಟೆಕ್ನಾಲಜೀಸ್‌ ಹೇಳಿದೆ.

English summary
900 million Android smartphones affected by security flaw in Qualcomm processors to know more about this visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot