Subscribe to Gizbot

ಆಸುಸ್ ನಿಂದ ರೂ.2000ಕ್ಕೆ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್: ಇಲ್ಲಿದೇ ಸಂಪೂರ್ಣ ವಿವರ....!

Written By:

ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಸರ್ಚ್ ಇಂಜಿನ್ ದೈತ್ಯ ನಿರ್ಮಿಸಿರುವ ಆಂಡಾಯ್ಡ್ ಗೋ ಆವೃತ್ತಿಗೆ ಹೆಚ್ಚಿನ ಬೇಡಿಕೆ ನಿರ್ಮಾಣವಾಗಿದ್ದು, ಇದೇ ಮಾದರಿಯಲ್ಲಿ ಎಲ್ಲಾ ಟಾಪ್ ಮೊಬೈಲ್ ತಯಾರಕ ಕಂಪನಿಗಳು ಆಂಡ್ರಾಯ್ಡ್ ಗೋ ಆವೃತ್ತಿಯ ಸ್ಮಾರ್ಟ್‌ಫೋನ್ ಗಳನ್ನು ತಯಾರು ಮಾಡುತ್ತಿವೆ.

ಆಸುಸ್ ನಿಂದ ರೂ.2000ಕ್ಕೆ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್

ಇದೇ ಮಾದರಿಯಲ್ಲಿ ನೋಕಿಯಾ 1 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಗೋ ಮಾದರಿಯಲ್ಲಿ ಕಾಣಿಸಿಕೊಂಡಿದ್ದು, ಇದೇ ರೀತಿಯಲ್ಲಿ ಆಸುಸ್ ಸಹ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒರಿಯೋ

ಒರಿಯೋ

ಆಸುಸ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿದ್ದು, ಇದೇ ಮಾದರಿಯಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ ಇದೇ ಮಾದರಿಯಲ್ಲಿ ಸದ್ಯ ಆಂಡ್ರಾಯ್ಡ್ ಗೋ (ಒರಿಯೋ) ಆವೃತ್ತಿಯ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಿಶೇಷತೆಗಳೇನು..?

ವಿಶೇಷತೆಗಳೇನು..?

ಆಸುಸ್ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ನಲ್ಲಿ 1GB RAM ಕಾಣಬಹುದಾಗಿದ್ದು, ಇದರೊಂದಿಗೆ ಆಂಡ್ರಾಯ್ಡ್ 8.1 ಒರಿಯೋ ಇರಲಿದೆ. ಅಲ್ಲದೇ ಇದು ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅನ್ನು ಒಳಗೊಂಡಿದೆ.

ಇದೇ ತಿಂಗಳ ಅಂತ್ಯಕ್ಕೆ ಮಾರುಕಟ್ಟೆ:

ಇದೇ ತಿಂಗಳ ಅಂತ್ಯಕ್ಕೆ ಮಾರುಕಟ್ಟೆ:

ಇದೇ ತಿಂಗಳ ಅಂತ್ಯಕ್ಕೆ ಆಸುಸ್ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಲಾಂಚ್ ಆಗುವ ಸಾಧ್ಯತೆಗಳಿದ್ದು, ಇದರೊಂದಿಗೆ ಆಸುಸ್ ನ ಇನ್ನು ಹಲವು ಸ್ಮಾರ್ಟ್‌ಫೋನ್ ಬಿಡುಗಡೆಯಾಗಲಿದೆ.

ಆಂಡ್ರಾಯ್ಡ್ ಗೋ ?

ಆಂಡ್ರಾಯ್ಡ್ ಗೋ ?

ಕಡಿಮೆ ಬೆಲೆಯ ಸ್ಮಾರ್ಟ್‌ಫೋನಿನಲ್ಲಿ ವೇಗವಾಗಿ ಕಾರ್ಯನಿರ್ವಹಿಸುವ ಆಂಡ್ರಾಯ್ಡ್ ಆವೃತ್ತಿ ಇದಾಗಿದ್ದು, ಗೂಗಲ್ ಇದರೊಂದಿಗೆ ತನ್ನ ಗೋ ಆವೃತ್ತಿಯ ಆಪ್‌ಗಳನ್ನು ನೀಡಲಿದೆ ಎನ್ನಲಾಗಿದೆ. ಈ ಆಪ್‌ಗಳು ಕಡಿಮೆ ಗಾತ್ರದಲ್ಲಿ ವೇಗವಾಗಿ ಕಾರ್ಯನಿರ್ವಹಿಸಲಿದೆ.

Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್
ಗೋ ಸ್ಮಾರ್ಟ್‌ಫೋನ್‌ಗಳು:

ಗೋ ಸ್ಮಾರ್ಟ್‌ಫೋನ್‌ಗಳು:

ಈಗಾಗಲೇ ಮಾರುಕಟ್ಟೆಗೆ ಗೋ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಹಲವು ಕಂಪನಿಗಳು ಮುಂದಾಗಿದ್ದು, ಇದರಲ್ಲಿ ನೋಕಿಯಾ, ಜಿಯೋ ಮತ್ತು ಮೈಕ್ರೋ ಮಾಕ್ಸ್ ಈಗಾಗಲೇ ತಯಾರಿಕೆಯನ್ನು ಆರಂಭಿಸಿದ್ದು, ಶೀಘ್ರವೇ ಮಾರುಕಟ್ಟೆಗೆ ಲಾಂಚ್ ಮಾಡಲಿವೆ.

ಬೆಲೆ:

ಬೆಲೆ:

ಆಸುಸ್ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಬೆಲೆ ಮೂಲಗಳ ಪ್ರಕಾರ ರೂ.2000 ದಿಂದ ರೂ.2500 ರ ವರೆಗೂ ಇರುವ ಸಾಧ್ಯತೆ ಇದೆ. ಈಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್ ಬೇಡಿಕೆಯೂ ಹೆಚ್ಚಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓದಿರಿ: DL, PAN ಮತ್ತು ಆಧಾರ್ ಸೇವೆ ಪಡೆಯಲು ಇದೊಂದು ಆಪ್ ಸಾಕು..!

English summary
Asus Android Go Smartphone. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot