ಫೋಟೋಗ್ರಫಿ, ದೀರ್ಘ ಬ್ಯಾಟರಿ ಬಾಳಿಕೆಗಾಗಿ 'ಜೆನ್‌ಫೋನ್‌ 3 ಮ್ಯಾಕ್ಸ್': ಅಂತದ್ದೇನಿದೆ ಫೋನ್‌ನಲ್ಲಿ?

Written By:

ಮೊಬೈಲ್‌ನಲ್ಲೇ ಫೋಟೋಗ್ರಫಿ ಮಾಡುವ ಉತ್ಸಾಹಿಗಳು ಮತ್ತು ದೀರ್ಘಕಾಲ ಬ್ಯಾಟರಿ ಬಾಳಿಕೆ ಸಾಮರ್ಥ್ಯವಿರುವ ಡಿವೈಸ್‌ ಪ್ರಿಯರಿಗಾಗಿ 'ಜೆನ್‌ಫೋನ್‌ 3 ಮ್ಯಾಕ್ಸ್' ಈಗ ಭಾರತದಲ್ಲಿ ಲಭ್ಯ. ಹೌದು, ಈ ಎರಡು ಫೀಚರ್‌ಗಳನ್ನು ಬಯಸುವವರಿಗಾಗಿಯೇ ತೈವಾನ್‌ ಮೂಲಕ ಅಸೂಸ್ ಭಾರತದಲ್ಲಿ 'ಜೆನ್‌ಫೋನ್‌ 3 ಮ್ಯಾಕ್ಸ್' ಸ್ಮಾರ್ಟ್‌ಫೋನ್ ಅನ್ನು ಲಾಂಚ್‌ ಮಾಡಿದ್ದು, 'ಜೆನ್‌ಫೋನ್‌ 3 ಮ್ಯಾಕ್ಸ್' ಎರಡು ವಿಭಿನ್ನತೆಗಳಲ್ಲಿ ದೊರೆಯಲಿದ್ದು, 4,100mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಫೋಟೋಗ್ರಫಿ, ದೀರ್ಘ ಬ್ಯಾಟರಿ ಬಾಳಿಕೆಗಾಗಿ ಜೆನ್‌ಫೋನ್‌ 3 ಮ್ಯಾಕ್ಸ್:ಅಂತದ್ದೇನಿದೆ?

'ಜೆನ್‌ಫೋನ್‌ 3 ಮ್ಯಾಕ್ಸ್' 5.5 ಇಂಚಿನ (ZC553KL) ಮತ್ತು 5.2 ಇಂಚಿನ (ZC520TL) ಡಿಸ್‌ಪ್ಲೇ ಫೀಚರ್‌ನ ಎರಡು ಡಿವೈಸ್‌ಗಳು ಅನುಕ್ರಮವಾಗಿ ಬೆಲೆ ರೂ.17.999 ಮತ್ತು ರೂ. 12,999, ವಿಭಿನ್ನತೆಗಳಲ್ಲಿ ಅನುಕ್ರಮವಾಗಿ ಸ್ಮಾರ್ಟ್‌ಫೋನ್‌ಗಳು ಲಭ್ಯ.

ಮಿಸ್ ಮಾಡದಿರಿ: ಅಸೂಸ್ ಜೆನ್‌ಫೋನ್ ಮ್ಯಾಕ್ಸ್‌ನಲ್ಲಿ ಸೋನಾಕ್ಷಿ ಕಮಾಲ್

"'ಜೆನ್‌ಫೋನ್‌ 3 ಮ್ಯಾಕ್ಸ್'(zenfone 3 Max) ಸ್ಮಾರ್ಟ್‌ಫೋನ್ ಅನ್ನು ದೀರ್ಘಕಾಲ ಚಾರ್ಜ್‌ಗೆ ಪ್ಲಗ್‌ಇನ್‌ ಮಾಡದೇ ಉತ್ತಮ ಅನುಭವ ಪಡೆಯಬಹುದು"ಎಂದು ಭಾರತದ ಅಸೂಸ್ ಮ್ಯಾನೇಜರ್ 'ಪೀಟರ್ ಛಂಗ್' ಹೇಳಿದ್ದಾರೆ.

ಫೋಟೋಗ್ರಫಿ, ದೀರ್ಘ ಬ್ಯಾಟರಿ ಬಾಳಿಕೆಗಾಗಿ ಜೆನ್‌ಫೋನ್‌ 3 ಮ್ಯಾಕ್ಸ್:ಅಂತದ್ದೇನಿದೆ?

'ಜೆನ್‌ಫೋನ್‌ 3 ಮ್ಯಾಕ್ಸ್' ಸ್ಮಾರ್ಟ್‌ಫೋನ್‌ 4,100mAh ಲಿಥಿಯಂ ಪಾಲಿಮರ್ ಬ್ಯಾಟರಿ ಹೊಂದಿದ್ದು, ಇತರೆ ಡಿವೈಸ್‌ಗಳಿಗಿಂತ ಡಬಲ್ ಫಾಸ್ಟ್‌ ಚಾರ್ಜ್‌ ಪವರ್ ಬ್ಯಾಂಕ್‌ ರೀತಿಯ ಕಾರ್ಯಕ್ಷಮತೆ ಹೊಂದಿದೆ.

ಸ್ಮಾರ್ಟ್‌ಫೋನ್ 2.5D ವಕ್ರತೆಯ ಗಾಜಿನ ಟಚ್‌ಸ್ಕ್ರೀನ್ ಸಪೋರ್ಟ್‌ ಮಾಡಲಿದ್ದು, ಅಲ್ಯೂಮಿನಿಯಂ ಅಲಾಯ್‌ ಬಾಡಿ ಜೊತೆಗೆ ನಯಗೊಳಿಸಿದ ಅಂಚುಗಳನ್ನು ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಫೋಟೋಗ್ರಫಿ, ದೀರ್ಘ ಬ್ಯಾಟರಿ ಬಾಳಿಕೆಗಾಗಿ ಜೆನ್‌ಫೋನ್‌ 3 ಮ್ಯಾಕ್ಸ್:ಅಂತದ್ದೇನಿದೆ?

ಪ್ರೋಟೋಗ್ರಫಿ ಉತ್ಸಾಹಿಗಳಿಗಾಗಿಯೇ ವಿನ್ಯಾಸಗೊಳಿಸಿದ್ದು, 5.5 ಇಂಚಿನ ಡಿವೈಸ್ 16MP ಹಿಂಭಾಗ ಕ್ಯಾಮೆರಾ ಮತ್ತು 8MP ಮುಂಭಾಗ ಕ್ಯಾಮೆರಾ ಹೊಂದಿದೆ. 5.2 ಇಂಚಿನ ಡಿಸ್‌ಪ್ಲೇ ಡಿವೈಸ್ 13MP ಹಿಂಭಾಗ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ.

5.5 ಇಂಚಿನ ಜೆನ್‌ಫೋನ್‌ 3 ಮ್ಯಾಕ್ಸ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 430 64-ಬಿಟ್ ಆಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ, 5.2 ಇಂಚಿನ ಸ್ಮಾರ್ಟ್‌ಫೋನ್ 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಚಾಲಿತವಾಗಿದೆ ಎರಡೂ ಡಿವೈಸ್‌ಗಳು ಸಹ 3GB RAM ಹೊಂದಿವೆ.

ಫೋಟೋಗ್ರಫಿ, ದೀರ್ಘ ಬ್ಯಾಟರಿ ಬಾಳಿಕೆಗಾಗಿ ಜೆನ್‌ಫೋನ್‌ 3 ಮ್ಯಾಕ್ಸ್:ಅಂತದ್ದೇನಿದೆ?

5.5 ಇಂಚಿನ ಜೆನ್‌ಫೋನ್‌ 3 ಮ್ಯಾಕ್ಸ್ 32GB ಆಂತರಿಕ ಮೆಮೊರಿ ಹೊಂದಿದ್ದು, 128GB ವರೆಗೂ ವಿಸ್ತರಣೆ ಮಾಡಬಹುದು. ಇನ್ನೊಂದು ಡಿವೈಸ್‌ 32GB ಆಂತರಿಕ ಮೆಮೊರಿ ಸಾಮರ್ಥ್ಯ ಹೊಂದಿದ್ದು, 32GB ಸ್ಟೊರೇಜ್ ಅನ್ನು ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ವಿಸ್ತರಣೆ ಮಾಡಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
ASUS launches Zenfone 3 Max with good battery life. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot