ಮಿಸ್ ಮಾಡದಿರಿ: ಅಸೂಸ್ ಜೆನ್‌ಫೋನ್ ಮ್ಯಾಕ್ಸ್‌ನಲ್ಲಿ ಸೋನಾಕ್ಷಿ ಕಮಾಲ್

By Shwetha
|

ಭಾರತದಲ್ಲಿ ತನ್ನ ಅಸೂಸ್ ಫೋನ್‌ನ ರಾಯಭಾರಿಯಾಗಿ ಕಂಪೆನಿಯು ಸೋನಾಕ್ಷಿ ಸಿನ್ಹಾರನ್ನು ಆಯ್ಕೆಮಾಡಿಕೊಂಡಿದ್ದು ತೈವಾನ್‌ನ ಈ ಕಂಪೆನಿ ಬಾಲವುಡ್ ಸುಂದರಿಯ ಮೂಲಕ ಭಾರತದಲ್ಲಿ ಅಸೂಸ್ ಪ್ರಿಯರ ಸಂಖ್ಯೆಯನ್ನು ಅಧಿಕವಾಗಿಸುವ ಕೈಂಕರ್ಯವನ್ನು ಆರಂಭಿಸಿದೆ. ತನ್ನ ಆನ್‌ಲೈನ್ ಲೈವ್ ಸ್ಟ್ರೀಮಿಂಗ್ ಅನ್ನು ಮೇ 23 ರಂದು ಕಂಪೆನಿ ನಡೆಸಿದ್ದು ಇದೇ ಸಂದರ್ಭದಲ್ಲಿ ಜೆನ್‌ಫೋನ್ ಮ್ಯಾಕ್ಸ್ (2016 ಎಡಿಶನ್ ) ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ.

ಈ ಉತ್ಪನ್ನದ ಲಾಂಚ್ ಸಮಯದಲ್ಲಿ, ಅಸೂಸ್ ಸೋನಾಕ್ಷಿ ಸಿನ್ಹಾ ಅಭಿನಯಿಸಿರುವ ಜಾಹೀರಾತನ್ನು ಹೊಸ ಅಸೂಸ್ ಜೆನ್‌ಫೋನ್ ಮ್ಯಾಕ್ಸ್‌ನೊಂದಿಗೆ ಕಂಪೆನಿ ಬಿಡುಗಡೆ ಮಾಡಿದೆ. ಹೊಸ ಜಾಹೀರಾತಿನಲ್ಲಿ #ಲೈವ್ ಅನ್‌ಪ್ಲಗ್ಡ್ ಜಾಹೀರಾತಿನಲ್ಲಿ, ಸೋನಾಕ್ಷಿ ಸಿನ್ಹಾ ಜೆನ್‌ಫೋನ್ ಮ್ಯಾಕ್ಸ್ ಅನ್ನು ಬಳಸುತ್ತಿದ್ದು, ಆಗ ಅಲ್ಲಿಗೆ ಬಂದ ಹುಡುಗನೊಬ್ಬ ತನ್ನ ಡಿವೈಸ್ ಅನ್ನು ಚಾರ್ಜ್ ಮಾಡಲು ಆತ ಸೋನಾಕ್ಷಿಯ ಕೈಯಲ್ಲಿರುವ ಫೋನ್ ಅನ್ನು ಬಳಸಿಕೊಳ್ಳುತ್ತಾನೆ. ಆದರೆ ಸೋನಾಕ್ಷಿಯ ಜೆನ್ ಫೋನ್ ಅನ್ನು ನೋಡಿದ ಆತ ಫೋನ್‌ನಲ್ಲಿ ಸೆಲ್ಫಿಯನ್ನು ತೆಗೆಸಿಕೊಳ್ಳುತ್ತಾನೆ. ಹೀಗೆ ಜಾಹೀರಾತು ಮುಂದುವರಿಯುತ್ತದೆ.

ಸೋನಾಕ್ಷಿ ಜಾಹೀರಾತಿನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು ಜೆನ್ ಫೋನ್ ಮ್ಯಾಕ್ಸ್ ಖರೀದಿಗೆ ಈಗಲೇ ನಿಮ್ಮನ್ನು ತಯಾರು ಮಾಡಿಕೊಳ್ಳಿ ಮತ್ತು ಫೋನ್‌ನ ಉತ್ತಮ ಬಳಸುವಿಕೆಯನ್ನು ನಿಮ್ಮದಾಗಿಸಿಕೊಳ್ಳಿ ಎಂಬುದಾಗಿ ತಿಳಿಸಿದ್ದಾರೆ.

#1

#1

ಜಾಹೀರಾತಿನಲ್ಲಿ ಫೋನ್‌ನ ಬ್ಯಾಟರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಇದು 5000mAh ಬ್ಯಾಟರಿಯನ್ನು ಒಳಗೊಂಡಿದೆ. ಮೂರು ದಿನಗಳವರೆಗೆ ಬ್ಯಾಟರಿ ಬಾಳ್ವಿಕೆ ಬರಲಿದ್ದು 38 ದಿನಗಳ ಸ್ಟ್ಯಾಂಡ್ ಬೈಯನ್ನು ನಿಮಗೆ ನೀಡಲಿದೆ. ಇದು ಪವರ್ ಬ್ಯಾಂಕ್‌ನಂತೆ ಕೂಡ ಕಾರ್ಯನಿರ್ವಹಿಸಿ ಇನ್ನೊಂದು ಫೋನ್ ಅನ್ನು ಚಾರ್ಜ್ ಮಾಡುವ ವಿಶೇಷತೆಯನ್ನು ಒಳಗೊಂಡಿದೆ.

#2

#2

ಫೋನ್ 5.5 ಇಂಚಿನ 720 ಪಿ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ನ್ಯಾಪ್‌ಡ್ರ್ಯಾಗನ್ 615 ಓಕ್ಟಾ ಕೋರ್ ಚಿಪ್‌ಸೆಟ್ ಇದರಲ್ಲಿದೆ. 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಡಿವೈಸ್ ಪಡೆದುಕೊಂಡಿದ್ದು, 13 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು 5 ಎಮ್‌ಪಿ ಮುಂಭಾಗ ಕ್ಯಾಮೆರಾ ಫೋನ್ ವಿಶೇಷತೆಯಾಗಿದೆ.

#3

#3

ಅಸೂಸ್ ಜೆನ್‌ಫೋನ್ ಮ್ಯಾಕ್ಸ್ ಎರಡು ಆವೃತ್ತಿಗಳಲ್ಲಿ ಬರಲಿದೆ. 2ಜಿಬಿ ಮಾಡೆಲ್ ಮತ್ತು 3ಜಿಬಿ ಆವೃತ್ತಿಯನ್ನು ಇದು ಹೊಂದಿದ್ದು, ಬೆಲೆ ರೂ 9,999 ಮತ್ತು 12,999 ಆಗಿದೆ.

#4

#4

ಸೋನಾಕ್ಷಿ ಸಿನ್ಹಾ ಅಭಿನಯಿಸಿರುವ ಜೆನ್‌ಫೋನ್ ಮ್ಯಾಕ್ಸ್ ಜಾಹೀರಾತನ್ನು ನೀವು ನೋಡಿಲ್ಲ ಎಂದಾದಲ್ಲಿ ಈ ಲೇಖನದಲ್ಲಿ ನಾವು ವೀಡಿಯೊವನ್ನು ಸ್ಲೈಡರ್‌ನಲ್ಲಿ ನೀಡುತ್ತಿದ್ದೇವೆ.

#5

ಈ ಜಾಹೀರಾತು ವೀಡಿಯೊ ವೈರಲ್ ಆಗಿ ತಾಣಗಳಲ್ಲಿ ಹರಿದಾಡುತ್ತಿದ್ದು ಇದನ್ನು ಮಿಸ್ ಮಾಡಲೇಬೇಡಿ! ಈ ಜಾಹೀರಾತಿನಲ್ಲಿ ಸೋನಾಕ್ಷಿ ಮಾತ್ರ ಮಿಂಚಿರುವುದಲ್ಲದೆ ವಿಶೇಷ ಫೀಚರ್‌ಗಳನ್ನು ಒಳಗೊಂಡಿರುವ ಬ್ಯಾಟರಿ ವಿಶೇಷತೆಯುಳ್ಳ ಜೆನ್‌ಫೋನ್ ಮ್ಯಾಕ್ಸ್ ಕೂಡ ಸ್ಮಾರ್ಟ್‌ಫೋನ್ ಪ್ರಿಯರನ್ನು ಆಕರ್ಷಿಸುವುದು ಖಂಡಿತ.

Best Mobiles in India

English summary
The Taiwanese tech company made an announcement of getting the celebrity on board to become the face for the brand during its online live streaming event on May 23, where it also launched the Zenfone Max (2016 Edition) smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X