'ಅಸೂಸ್ ಜೆನ್‌ಫೋನ್ 3 ಲೇಸರ್' ಭಾರತದಲ್ಲಿ ರೂ 18,999 ಕ್ಕೆ ಲಭ್ಯ
ಅಸೂಸ್ ತನ್ನ ಜೆನ್‌ಫೋನ್ 3 ಲೇಸರ್ ಭಾರತದಲ್ಲಿ ಲಭ್ಯವಿರುವ ಮಾಹಿತಿಯನ್ನು ನೀಡಿದೆ. ಅಸೂಸ್ ಜೆನ್‌ಫೋನ್ 3 ಲೇಸರ್ ಭಾರತದಲ್ಲಿ ರೂ 18,999 ಕ್ಕೆ ಲಭ್ಯವಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ದೊರೆಯಲಿದೆ. ಇದರ ಫೀಚರ್‌ಗಳು ಮೂಲ ಜೆನ್‌ಫೋನ್ 3 ಸಿರೀಸ್ ಅನ್ನು ಹೋಲುತ್ತಿದ್ದು ಅಗಲವಾದ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದೆ.
ಓದಿರಿ: ಜಿಯೋ ವರ್ಸಸ್ ಏರ್‌ಟೆಲ್ 4ಜಿ, ನಿಮ್ಮ ಮತ ಯಾರಿಗೆ?

ಅಸೂಸ್ ಜೆನ್‌ಫೋನ್ 3 ಲೇಸರ್ ಡಿವೈಸ್ ಸಿಲ್ವರ್ ಮತ್ತು ಗೋಲ್ಡನ್ ಬಣ್ಣದಲ್ಲಿ ಲಭ್ಯವಿದ್ದು 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ. ಗೋರಿಲ್ಲಾ ಗ್ಲಾಸ್ 3 ಭದ್ರತೆ ಡಿವೈಸ್‌ಗಿದೆ. 64 ಬಿಟ್ ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಇದರಲ್ಲಿದ್ದು 4ಜಿಬಿ RAM ಅನ್ನು ಡಿವೈಸ್ ಒಳಗೊಂಡಿದೆ. 32 ಸಂಗ್ರಹಣೆಯನ್ನು ಡಿವೈಸ್‌ನಲ್ಲಿ ಕಾಣಬಹುದಾಗಿದೆ.
ಓದಿರಿ: ದೀಪಾವಳಿಗಾಗಿ ಬಿಎಸ್ಎನ್‌ಎಲ್‌ನಿಂದ ಬಂಪರ್ ಆಫರ್

13 ಎಮ್‌ಪಿ ಪ್ರೈಮರಿ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು ಮುಂಭಾಗದಲ್ಲಿ 8 ಎಮ್‌ಪಿ ಕ್ಯಾಮೆರಾವನ್ನು ಕಾಣಬಹುದಾಗಿದೆ. ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಡಿವೈಸ್ ಪಡೆದುಕೊಂಡಿದ್ದು ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊವನ್ನು ಡಿವೈಸ್ ಹೊಂದಿದ್ದು 3,000mAh ಬ್ಯಾಟರಿಯನ್ನು ಪಡೆದುಕೊಂಡಿದೆ. ಫಾಸ್ಟ್ ಚಾರ್ಜಿಂಗ್ ಅನ್ನು ಡಿವೈಸ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








