ಅತ್ಯುತ್ತಮ ಬ್ಯಾಟರಿ ಬ್ಯಾಕಪ್‌ ಹೊಂದಿದೆ ಈ ಜೆನ್‌ಫೋನ್ 3ಎಸ್ ಮ್ಯಾಕ್ಸ್!!

Written By:

ಆಸಸ್ ಸ್ಮಾರ್ಟ್‌ಫೋನ್ಸ್ ಸದ್ದಿಲ್ಲದೇ ಭಾರತದ ಸ್ಮಾರ್ಟ್‌ಫೋನ್‌ ಪ್ರಿಯರ ಮನಸನ್ನು ಕದಿಯುತ್ತಿವೆ. ಅತ್ಯಂತ ಹೆಚ್ಚು ಫೀಚರ್ಸ್‌ಗಳನ್ನು ಹೊಂದಿ ಬರುತ್ತಿರುವ ಆಸಸ್ ಸ್ಮಾರ್ಟ್‌ಫೋನ್ಸ್ ಗುಣಮಟ್ಟದಲ್ಲಿ ಎಂದು ರಾಜಿಯಾಗದೇ ಉಳಿದಿರುವ ಸ್ಮಾರ್ಟ್‌ಫೋನ್‌ ಎನ್ನಬಹುದು!!

ಬೆಲೆಯಲ್ಲಿ ಸ್ವಲ್ಪ ಹೆಚ್ಚಾದರೂ ವಿನ್ಯಾದಲ್ಲಿ ಅತ್ಯುತ್ತಮವಾಗಿರುವ ಆಸಸ್ ಜೆನ್‌ಫೋನ್‌ ಸೀರೀಸ್‌ನಲ್ಲಿ ಆಸಸ್ ಜೆನ್‌ಫೋನ್ 3ಎಸ್ ಮ್ಯಾಕ್ಸ್ ಇದೀಗ 5000mah ಬ್ಯಾಟರಿ ಶಕ್ತಿಯೊಂದಿಗೆ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದು, ತನ್ನ ಸರಣಿ ಮೊಬೈಲ್‌ಗಳಲ್ಲಿಯೇ ಅತ್ಯುತ್ತಮ ಮೊಬೈಲ್‌ ಆಗಿದೆ.!

ಜಿಯೋ, ಏರ್‌ಟೆಲ್‌ ಎಫೆಕ್ಟ್‌...ವೋಡಾಫೊನ್ ಜೊತೆ ವಿಲೀನವಾಯ್ತು ಐಡಿಯಾ!!

5.2 ಇಂಚ್‌ ಡಿಸ್‌ಪ್ಲೇ ಹೊಂದಿರುವ ಆಸಸ್ ಜೆನ್‌ಫೋನ್ 3ಎಸ್ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಇದೀಗ ಹಲವು ಬಲಾವಣೆಗಳನ್ನು ಹೊಂದಿದ್ದು, ಬೇರೆ ಯಾವೆಲ್ಲಾ ಫೀಚರ್‌ಗಳನ್ನು ಹೊಂದಿದೆ ಮತ್ತು ಸ್ಮಾರ್ಟ್‌ಫೋನ್‌ ವಿಶೇಷತೆಗಳೆನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.5 ಇಂಚ್ ಮೆಟಲ್‌ ದೇಹ ವಿನ್ಯಾಸ.

5.5 ಇಂಚ್ ಮೆಟಲ್‌ ದೇಹ ವಿನ್ಯಾಸ.

ಸ್ಮಾರ್ಟ್ಫೋನ್‌ ಪ್ರಿಯರಿಗೆ ಇಷ್ಟವಾಗುವಂತಹ 5.5 ಇಂಚ್ ಮೆಟಲ್‌ ದೇಹ ವಿನ್ಯಾಸವನ್ನು ಜೆನ್‌ಫೋನ್ 3ಎಸ್ ಮ್ಯಾಕ್ಸ್ ಹೊಂದಿದೆ. ನೋಡಲು ಮತ್ತು ಹಿಡಿಯಲು ಉತ್ತಮ ಫೀಲ್‌ ನೀಡುವಂತೆ ಸ್ಮಾರ್ಟ್‌ಫೋನ್ ವಿನ್ಯಾಸ ಮಾಡಲಾಗಿದೆ. ಸ್ಮಾರ್ಟ್ಫೋನ್‌ ಮುಂಬಾಗದಲ್ಲಿ ಫಿಂಗರ್‌ಪ್ರಿಂಟ್‌ ಬಟನ್‌ ನೀಡಲಾಗಿದೆ.

ಆಂಡ್ರಾಯ್ಡ್ ನ್ಯೂಗಾ ಸಾಫ್ಟ್‌ವೇರ್.

ಆಂಡ್ರಾಯ್ಡ್ ನ್ಯೂಗಾ ಸಾಫ್ಟ್‌ವೇರ್.

ಕ್ವಾಲ್ಕಮ್ ಬಿಡುಗಡೆ ಮಾಡಿರುವ ನೂತನ ಆಂಡ್ರಾಯ್ಡ್ ನ್ಯೂಗಾ ಸ್ಆಫ್ಟವೇರ್ ಅನ್ನು ಜೆನ್‌ಫೋನ್ 3ಎಸ್ ಮ್ಯಾಕ್ಸ್ ಹೊಂದಿದೆ. ಜೊತೆಗೆ ಬೆರೆ ಸ್ಮಾರ್ಟ್‌ಫೋನ್‌ನಲ್ಲಿ ಇರದ ಆಸಸ್‌ನ ಬಹುತೇಕ ಫೀಚರ್‌ಗಳನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ.

13 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ.

13 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ.

ಇಂದಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಹೊಂದಿರುವಂತೆ ಜೆನ್‌ಫೋನ್ 3ಎಸ್ ಮ್ಯಾಕ್ಸ್ ಸಾಧಾರಣವಾದ ಕ್ಯಾಮೆರಾವನ್ನು ಹೊಂದಿದೆ. ಸಾಮಾನ್ಯವೆಂಬತ ಚಿತ್ರಗಳು ಸ್ಮಾರ್ಟ್‌ಫೊನ್‌ನಲ್ಲಿ ತೆಗೆಯಬಹುದು.

3GB RAM ಮತ್ತು 32GB ಮೆಮೊರಿ.

3GB RAM ಮತ್ತು 32GB ಮೆಮೊರಿ.

ಜೆನ್‌ಫೋನ್ 3ಎಸ್ ಮ್ಯಾಕ್ಸ್ 3GB RAM ಮತ್ತು 32GB ಆಮತರಿಕ ಮೆಮೊರಿಯನ್ನು ಹೊಂದಿದೆ. ಇನ್ನು ಆಂತರಿಕ ಮೆಮೊರಿಯನ್ನು 128GB ವರೆಗೂ ಹೆಚ್ಚಿಸುವ ಸಾಮರ್ಥ್ಯವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಅತ್ಯದ್ಬುತ ಫೀಚರ್‌ಗಳನ್ನು ಹೊಂದಿರುವ ಆಸಸ್‌ ಜೆನ್‌ಫೋನ್ ಮ್ಯಾಕ್ಸ್ ಮಾರುಕಟ್ಟೆಯಲ್ಲಿ 16,000 ರೂ ಬೆಲೆಯನ್ನು ಹೊಂದಿದೆ.ಹೆಚ್ಚು ಬ್ಯಾಟರಿ ಬಾಳಿಕೆಯನ್ನು ಇಷ್ಟಪಡುವವರಿಗೆ ಆಸಸ್‌ ಜೆನ್‌ಫೋನ್ ಮ್ಯಾಕ್ಸ್ ಉತ್ತಮ ಸ್ಮಾರ್ಟ್‌ಫೋನ್‌ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The phone’s battery is the only best part, but nothing stands out.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot