ಜಿಯೋ, ಏರ್‌ಟೆಲ್‌ ಎಫೆಕ್ಟ್‌...ವೋಡಾಫೊನ್ ಜೊತೆ ವಿಲೀನವಾಯ್ತು ಐಡಿಯಾ!!

Written By:

ವಿಶ್ವದ ಬೃಹತ್‌ ಟೆಲಿಕಾಂ ಸಂಸ್ಥೆ ವೋಡಾಫೊನ್ ಜೊತೆ ಐಡಿಯಾ ಟೆಲಿಕಾಂ ವಿಲೀನವಾಗುತ್ತಿದೆ.! ಈ ಬಗ್ಗೆ ಲಂಡನ್ ಷೇರುಪೇಟೆಗೆ ವೋಡಾಫೋನ್ ಮಾಹಿತಿ ನೀಡಿದ್ದು, ಆದಿತ್ಯಾ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ.!!

ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ 23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ 19ರಷ್ಟು ಪಾಲು ಹೊಂದಿರುವ ಐಡಿಯಾ ಒಂದಾಗಲಿದ್ದು, ವೊಡಾಫೋನ್ ಮಾರುಕಟ್ಟೆಯಲ್ಲಿ ಶೇ 43ರಷ್ಟು ಪಾಲು ಹೊಂದಿ ಅಗ್ರಸ್ಥಾನಕ್ಕೇರಲಿದೆ. ಈ ಮೂಲಕ ಭಾರತದ ಅತಿದೊಡ್ಡ ಟೆಲಿಕಾಂ ಕಂಪೆನಿಯಾಗಿ ವೋಡಾಫೋನ್ ಹುಟ್ಟಿಕೊಳ್ಳಲಿದೆ.!

ಜಿಯೋ, ಏರ್‌ಟೆಲ್‌ ಎಫೆಕ್ಟ್‌...ವೋಡಾಫೊನ್ ಜೊತೆ ವಿಲೀನವಾಯ್ತು ಐಡಿಯಾ!!

ಆಧಾರ್ ಬಯೋಮೆಟ್ರಿಕ್ ವ್ಯವಸ್ಥೆ ಶೀಘ್ರದಲ್ಲೇ ಜಾರಿ!..ಭಾರತದ ಭವಿಷ್ಯ?

ಸದ್ಯ ಶೇ 33ರಷ್ಟು ಪಾಲುಹೊಂದಿರುವ ಏರ್‌ಟೆಲ್ ಅಗ್ರಸ್ಥಾನದಲ್ಲಿದೆ. ಇನ್ನು ಜಿಯೋ ನಂತರ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ಮತ್ತಷ್ಟು ಹೆಚ್ಚಾಗಿದ್ದು, ಈ ವಿಲೀನ ಪ್ರಕ್ರಿಯೆಯಿಂದ ಟೆಲಿಕಾಂನಲ್ಲಿ ಬಾರಿ ಬದಲಾವಣೆ ಆಗಬಹುದು ಎಂದು ಅಂದಾಜಿಸಲಾಗಿದೆ.

ಜಿಯೋ, ಏರ್‌ಟೆಲ್‌ ಎಫೆಕ್ಟ್‌...ವೋಡಾಫೊನ್ ಜೊತೆ ವಿಲೀನವಾಯ್ತು ಐಡಿಯಾ!!

ಬೃಹತ್ ಬಂಡವಾಳ ಮತ್ತು ನೆಟ್‌ವರ್ಕ್ ಹೊಂದಿರುವ ಎರಡು ಕಂಪೆನಿಗಳು ಇದೇ ಮೊದಲಬಾರಿಗೆ ವಿಲೀನವಾಗುತ್ತಿದ್ದು, ಏರ್‌ಟೆಲ್‌ ಮತ್ತು ಜಿಯೋಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಜಿಯೋ ಮತ್ತು ಏರ್‌ಟೆಲ್‌ ಹೊಡೆತಕ್ಕೆ ಸಿಲುಕಿ ಐಡಿಯಾ ಮತ್ತು ವೋಡಾಫೋನ್ ಈ ನಿರ್ಧಾರಕ್ಕೆ ಬಂದಿವೆ ಎನ್ನುವ ಮಾತು ಸಹ ಟೆಲಿಕಾಂ ಪ್ರಪಂಚದಲ್ಲಿ ಹರಿದಾಡಿದೆ.

English summary
London-based Vodafone Group Plc has confirmed that it is in discussions with Aditya Birla Group for an all-share merger of Vodafone India with Idea Cellular. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot