ಲಕ್ಷ ಬೆಲೆಯ ಐಫೋನ್ X ಯಾಕೆ.? ಆಸುಸ್ ಆಂಡ್ರಾಯ್ಡ್ ಫೋನಿನಲ್ಲಿ ಫೇಸ್‌ಲಾಕ್, ಜೆನ್ ಮೋಜಿ ಇನ್ನು ಹಲವು..!

|

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಸುಸ್ ಕೆಲವು ದಿನಗಳಿಂದ ಯಾವುದೇ ಸ್ಮಾರ್ಟ್‌ಫೋನ್‌ ಗಳನ್ನು ಲಾಂಚ್ ಮಾಡದೆ ಸುಮ್ಮನಾಗಿತ್ತು. ಸದ್ಯ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ವಿಶೇಷತೆಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಈ ಮೂಲಕ ಮೊಬೈಲ್ ಮಾರುಕಟ್ಟೆಯೇ ತನ್ನಡೆಗೆ ತಿರುಗುವಂತೆ ಮಾಡಿದೆ.

ಆಸುಸ್ ಆಂಡ್ರಾಯ್ಡ್ ಫೋನಿನಲ್ಲಿ ಫೇಸ್‌ಲಾಕ್, ಜೆನ್ ಮೋಜಿ ಇನ್ನು ಹಲವು..!

ಅಸುಸ್ ಜೆನ್ ಫೋನ್ 5Z, ಜೆನ್ ಫೋನ್ 5 ಮತ್ತು ಜೆನ್ ಫೋನ್ 5 ಲೈಟ್ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ಗಳು ಕೃತಕ ಬುದ್ದಿಮತ್ತೆಯನ್ನು ಹೊಂದಿದ್ದು, ಐಫೋನ್ X ಮಾದರಿ ಆಲ್‌ ಸ್ಕ್ರಿನ್ 19:9 ಅನುಪಾತದ ಡಿಸ್‌ಪ್ಲೇಯೊಂದಿಗೆ ಡ್ಯುಯಲ್ ಲೈನ್ಸ್ ಕ್ಯಾಮೆರಾ ಸೆಟ್ಟಪ್ ಸೇರಿದಂತೆ ಜೆನ್ ಮೋಜಿ ಎಂಬ ಹೊಸ ಮಾದರಿಯ ಎಮೋಜಿಗಳನ್ನು ಬಳಕೆದಾರರಿಗೆ ನೀಡುತ್ತಿದೆ.

ಐಪೋನ್ X ಮಾದರಿಯ ಟಾಪ್ ಎಂಡ್ ಫೋನ್:

ಐಪೋನ್ X ಮಾದರಿಯ ಟಾಪ್ ಎಂಡ್ ಫೋನ್:

ಮಾರುಕಟ್ಟೆಯಲ್ಲಿ ಆಲ್ ಸ್ಕ್ರಿನ್ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಂಡಿದ್ದ ಐಪೋನ್ X ಹೊಸ ಅಧ್ಯಾಯವನ್ನು ಹುಟ್ಟಿಹಾಕಿತ್ತು. ಇದೇ ಮಾದರಿಯಲ್ಲಿ ಕಾಣಿಸಿಕೊಂಡಿರುವ ಅಸುಸ್ ಜೆನ್ ಫೋನ್ 5Z, ಆಂಡ್ರಾಯ್ಡ್ ಫಾಗ್ ಶಿಪ್ ಸ್ಮಾರ್ಟ್‌ಫೋನ್ ಆಗಿದೆ. ಇದು ನೋಡಲು ಐಫೋನ್ X ಮಾದರಿಯಲ್ಲಿ ಕಾಣಿಸಿಕೊಂಡಿದೆ.

ಆಲ್ ಸ್ಕ್ರಿನ್ ಡಿಸ್‌ಪ್ಲೇ:

ಆಲ್ ಸ್ಕ್ರಿನ್ ಡಿಸ್‌ಪ್ಲೇ:

ಅಸುಸ್ ಜೆನ್ ಫೋನ್ 5Z ಸ್ಮಾರ್ಟ್‌ಫೋನಿನಲ್ಲಿ ಐಫೋನ್ X ಮಾದರಿಯಲ್ಲಿ ಆಲ್ ಸ್ಕ್ರಿನ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದ್ದು, 6.2 ಇಂಚಿನ FHD ಪ್ಲಸ್ ಗುಣಮಟ್ಟದ 19:9 ಅನುಪಾತದಿಂದ ಕೂಡಿದೆ. ಫ್ರಂಟ್ ಕ್ಯಾಮೆರಾ ಮತ್ತು ಸೆಸ್ನಾರ್‌ಗಳು ಮಧ್ಯ ಭಾಗದಲ್ಲಿ ಕಾಣಿಸಿಕೊಂಡಿದೆ. ಗ್ಯಾಲೆಕ್ಸಿ S ಸರಣಿಯ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಗಿಂತಲೂ ದೊಡ್ಡದಾಗಿದೆ.

ಟಾಪ್ ಎಂಡ್ ಪ್ರೊಸೆಸರ್:

ಟಾಪ್ ಎಂಡ್ ಪ್ರೊಸೆಸರ್:

ಅಸುಸ್ ಜೆನ್ ಫೋನ್ 5Z ಸ್ಮಾರ್ಟ್‌ಫೋನ್‌ನಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್ ಎಂಡ್ ಪ್ರೋಸೆಡರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 845 ಕಾಣಬಬಹುದಾಗಿದ್ದು, ಜೊತೆಗೆ ಅಡ್ರಿನೋ 630 GPU ಲಭ್ಯವಿದೆ. 8GB RAM/256GB, 6GB RAM/128GB, ಮತ್ತು 4GB RAM/64 GB ಆವೃತ್ತಿಯಲ್ಲಿ ದೊರೆಯಲಿದೆ. ಆದರೆ ಈ ಸ್ಮಾರ್ಟ್ಫೋನ್ ಬೆಲೆ ಇನ್ನು ಬಹಿರಂಗವಾಗಿಲ್ಲ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಅಸುಸ್ ಜೆನ್ ಫೋನ್ 5Z ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಕಾಣಬಹುದಾಗಿದ್ದು, 12MP + 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದಲ್ಲದೇ LED ಫ್ಲಾಷ್ ಲೈಟ್ ಸಹ ನೀಡಲಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾ ಅಳವಡಿಸಲಾಗಿದೆ.

ಫೇಸ್‌ಲಾಕ್:

ಫೇಸ್‌ಲಾಕ್:

ಇದಲ್ಲದೇ ಅಸುಸ್ ಜೆನ್ ಫೋನ್ 5Z ಸ್ಮಾರ್ಟ್‌ಫೋನಿನಲ್ಲಿ ಫೇಸ್‌ಲಾಕ್ ಸೌಲಭ್ಯವನ್ನು ನೀಡಲಾಗಿದ್ದು, ಇದಕ್ಕಾಗಿ ಕ್ವಾಲ್ಕಮ್ ಕೃತಕ ಬುದ್ದಿಮತ್ತೆಯನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಜೆನ್ ಮೋಜಿ:

ಜೆನ್ ಮೋಜಿ:


ಇದರೊಂದಿಗೆ ಐಫೋನ್ X ನಲ್ಲಿ ಇರುವ ಅನಿಮೋಜಿಯ ಮಾದರಿಯಲ್ಲಿ ನಿಮ್ಮದೇ ಎಮೋಜಿಗಳನ್ನು ನಿರ್ಮಿಸಲು ಜೆನ್ ಮೋಜಿ ಯನ್ನು ಪರಿಚಯಿಸಲಾಗಿದ್ದು, ಇದು ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ.

How To Link Aadhaar With EPF Account Without Login (KANNADA)

ಓದಿರಿ: ಜಿಯೋಗೆ ಖೆಡ್ಡ ತೋಡಲು, ಗೂಗಲ್‌ನೊಂದಿಗೆ ಕೈ ಜೋಡಿಸಿದ ಏರ್‌ಟೆಲ್‌ನಿಂದ ಮಾಸ್ಟರ್ ಪ್ಲಾನ್‌..!

Best Mobiles in India

English summary
Asus ZenFone 5Z, ZenFone 5, and ZenFone 5 Lite Launched at MWC 2018. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X