ವಿಶ್ವ ಮಾರುಕಟ್ಟೆಗೆ ಆಸೂಸ್ 'ಝೆನ್‌ಫೋನ್ 6' ರಿಲೀಸ್!..ಫ್ಲಿಪ್ ಕ್ಯಾಮೆರಾ ಸ್ಪೆಷಲ್!
ಆಸೂಸ್ ಮೊಬೈಲ್ ಮಾರುಕಟ್ಟೆಯಲ್ಲಿ ತನ್ನದೇ ಸ್ಥಾನವನ್ನು ಹೊಂದಿದ್ದು, ಈಗಾಗಲೇ ಝೆನ್‌ಫೋನ್ ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಮೆಚ್ಚುಗೆ ಗಳಿಸಿದೆ. ಇದೀಗ ಕಂಪನಿಯು 'ಝೆನ್‌ಫೋನ್ 6' ಸ್ಮಾರ್ಟ್‌ಫೋನ್ ಅನ್ನು ಸದ್ದಿಲ್ಲದೇ ವಿಶ್ವ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್ ಫ್ಲ್ಯಾಗ್‌ಶಿಪ್ ಮಾದರಿಯಲ್ಲಿದೆ. ಈ ಸ್ಮಾರ್ಟ್‌ಫೋನಿನ ಮೂಲಕ ಹೊಸದಾಗಿ ಫ್ಲಿಪ್ ಕ್ಯಾಮೆರಾವನ್ನು ಪರಿಚಯಿಸಿದ್ದು, ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ನೀಡಲಿದೆ.

ಹೌದು, ಆಸೂಸ್ ಕಂಪನಿಯು ತನ್ನ ಹೊಸ 'ಝೆನ್‌ಫೋನ್ 6' ಸ್ಮಾರ್ಟ್‌ಫೋನ್ ಅನ್ನು ವಿಶ್ವ ಮಾರುಕಟ್ಟೆಯಲ್ಲಿ ರಿಲೀಸ್ ಮಾಡಿದ್ದು, ಈ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್ ಆಯ್ಕೆಗಳಲ್ಲಿ ದೊರೆಯಲಿದೆ. ಈ ಫೋನಿನಲ್ಲಿ ಹೊಸದಾಗಿ 'ಫ್ಲಿಪ್ ಕ್ಯಾಮೆರಾ' ಆಯ್ಕೆಯನ್ನು ಪರಿಚಯಿಸಿದ್ದು, ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದರ ಹೈ ಎಂಡ್ ಫೀಚರ್ಸ್‌ಗಳು ಸ್ಮಾರ್ಟ್‌ಫೋನ್ ಪ್ರಿಯರ ಗಮನ ಸೆಳೆಯಲಿದೆ.

ಈ ಸ್ಮಾರ್ಟ್‌ಫೋನಿನ ಪ್ರಮುಖ ಆಕರ್ಷಣೆ ಫ್ಲಿಪ್ ಕ್ಯಾಮೆರಾ ಆಗಿದ್ದು, ಸೋನಿಯ IMX586 ಸೆನ್ಸಾರ್‌ನೊಂದಿಗೆ 48 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿಯನ್ನು ಸಹ ನೀಡಲಾಗಿದೆ. ಹಾಗಾಯೇ 4.0. ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಪಡೆದಿದೆ. ಹಾಗಾದರೇ ಆಸೂಸ್ ಝೆನ್‌ಫೋನ್ 6 ಸ್ಮಾರ್ಟ್‌ಫೋನ್ ಒಳಗೊಂಡಿರುವ ವಿಶೇಷ ಫೀಚರ್ಸ್‌ಗಳನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ
ಆಸೂಸ್ ಝೆನ್‌ಫೋನ್ 6 ಸ್ಮಾರ್ಟ್‌ಫೋನಿನಲ್ಲಿ 6.4 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಸ್ಕ್ರೀನ್ LCD ಮಾದರಿಯಲ್ಲಿದೆ. ಡಿಸ್‌ಪ್ಲೇಯ ಸುತ್ತಲೂ ನಾಚ್ ಇಲ್ಲದ, ಅತೀ ಕಡಿಮೆ ಅಂಚಿನ ರಚನೆಯನ್ನು ಪಡೆದಿದೆ. ಹಾಗಾಯೇ ಡಿಸ್‌ಪ್ಲೇ ಸುತ್ತಲಿನ ನಾಲ್ಕು ಮೂಲೆಗಳು ಕರ್ವ್ ಮಾದರಿಯ ಆಕಾರದಲ್ಲಿದ್ದು, ಸ್ಮಾರ್ಟ್‌ಫೋನ್ ಅಂದವನ್ನು ಹೆಚ್ಚಿಸಿದೆ.

ಪ್ರೊಸೆಸರ್
ಆಸೂಸ್‌ನ ಈ ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಹೊಂದಿದ್ದು, ಈ ಫೋನ್ ಎರಡು RAM ಆಯ್ಕೆಗಳನ್ನು ಹೊಂದಿದೆ. ಅವು ಕ್ರಮವಾಗಿ 6GB RAM ಮತ್ತು 8GB RAM ಸಾಮರ್ಥ್ಯದಲ್ಲಿವೆ. ಹಾಗೆಯೇ ಆಂತರಿಕ ಸಂಗ್ರಹಕ್ಕಾಗಿ 64GB, 128GB ಮತ್ತು 256GB ಸ್ಥಳಾವಕಾಶದ ಮೂರು ಆಯ್ಕೆಗಳನ್ನು ಒದಗಿಸಲಾಗಿದೆ.

ಫ್ಲಿಪ್ ಕ್ಯಾಮೆರಾ
ಆಸೂಸ್ ಮೊದಲ ಬಾರಿಗೆ ಹೊಸದಾಗಿ ಫ್ಲಿಪ್ ಕ್ಯಾಮೆರಾ ಪರಿಚಯಿಸಿದ್ದು, ಈ ಕ್ಯಾಮೆರಾವು ತಿರುಗುವ ಮಾದರಿಯಲ್ಲಿದೆ. ಹೀಗಾಗಿ ಸೆಲ್ಫಿಗಾಗಿ ಪ್ರತ್ಯೇಕ ಕ್ಯಾಮೆರಾ ಒದಗಿಸಿಲ್ಲ. ಸ್ಮಾರ್ಟ್‌ಫೋನಿನ ಹಿಂಬದಿ ಇರುವ ಕ್ಯಾಮೆರಾ ಸೆಲ್ಫಿ ಸೆರೆಹಿಡಿಯುವಾಗ ಮುಂಬದಿಗೆ ತಿರುಗುತ್ತವ ಆಯ್ಕೆಯನ್ನು ಪಡೆದಿದೆ. ಈ ಒಂದೇ ಕ್ಯಾಮೆರಾ ಬಳಕೆಯಾಗಲಿದೆ.

ಕ್ಯಾಮೆರಾ
ಝೆನ್‌ಫೋನ್ 6 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಮ್ ಕ್ಯಾಮೆರಾ ನೀಡಲಾಗಿದ್ದು, ಕ್ಯಾಮೆರಾ ಆಯ್ಕೆಯು ಫ್ಲಿಪ್ ಮಾದರಿಯಲ್ಲಿದೆ. ಪ್ರಮುಖ ಕ್ಯಾಮೆರಾವು ಸೋನಿಯ IMX586 ಸೆನ್ಸಾರ್‌ನೊಂದಿಗೆ 48ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೆಕೆಂಡರಿ ಕ್ಯಾಮೆರಾವು ವೈಲ್ಡ್ ಆಂಗಲ್ ಲೆನ್ಸ್‌ನೊಂದಿಗೆ 13 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಈ ಒಂದೇ ಕ್ಯಾಮೆರಾವು ಸೆಲ್ಫಿಗೂ ಬರಲಿದೆ.

ಬ್ಯಾಟರಿ
ಆಸೂಸ್ ಝೆನ್‌ಫೋನ್ 6 ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಪಡೆದುಕೊಂಡಿದೆ. ಇದರೊಂದಿಗೆ 4.0. ವೇಗದ ಚಾರ್ಜಿಂಗ್ ತಂತ್ರಜ್ಞಾನ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಇದರ ನೆರವಿನಿಂದ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜಿಂಗ್ ಪಡೆದುಕೊಳ್ಳಲಿದೆ.

ಬೆಲೆ ಮತ್ತು ಲಭ್ಯತೆ
ಆಸೂಸ್ ಝೆನ್‌ಫೋನ್ 6 ಸ್ಮಾರ್ಟ್‌ಫೋನ್ ಮೂರು ವೇರಿಯಂಟ್ ಮಾದರಿಗಳಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದೆ. ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿಕೊಡಲಿದೆ. 6GB RAM ಮತ್ತು 64GB ವೇರಿಯಂಟ್ ಬೆಲೆಯು 39,000ರೂ.ಗಳ, 6GB RAM ಮತ್ತು 128GB ವೇರಿಯಂಟ್ ಬೆಲೆಯು 44,000ರೂ.ಗಳು ಮತ್ತು 8GB RAM ಮತ್ತು 256GB ವೇರಿಯಂಟ್ ಬೆಲೆಯು 47,000ರೂ.ಗಳು ಆಗಿರಲಿದೆ ಎನ್ನಲಾಗಿದೆ.


Click it and Unblock the Notifications








