ಭರ್ಜರಿ ಫೀಚರ್ಸ್ ಹೊತ್ತು ಆಗಮಿಸಲಿದೆ ಆಸೂಸ್‌ನ ಈ ಹೊಸ ಸ್ಮಾರ್ಟ್‌ಫೋನ್.!!

|

ತೈವಾನ್ ಮೂಲದ ಆಸೂಸ್ ಕಂಪನಿ ಕಳೆದ ವರ್ಷ ಅಗ್ಗದ ದರದಲ್ಲಿ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವುದರ ಜೊತೆಗೆ ಝೆನ್‌ಫೋನ್‌ 5Z ಹೆಸರಿನ ಹೈ ಎಂಡ್‌ ಸ್ಮಾರ್ಟ್‌ಫೋನ್‌ ಸಹ ಬಿಡುಗಡೆ ಮಾಡಿತ್ತು. ಇದೀಗ ಆಸೂಸ್ ಗ್ರಾಹಕರಿಗೆ ಮತ್ತೆ ಸಿಹಿಸುದ್ದಿಯೊಂದನ್ನು ನೀಡುವ ಮುನ್ಸೂಚನೆ ಕೊಟ್ಟಿದ್ದು, ವಿಶೇಷ ಫೀಚರ್ಸ್‌ಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಒಂದನ್ನು ಲಾಂಚ್‌ ಮಾಡಲಿದೆ.

ಭರ್ಜರಿ ಫೀಚರ್ಸ್ ಹೊತ್ತು ಆಗಮಿಸಲಿದೆ ಆಸೂಸ್‌ನ ಈ ಹೊಸ ಸ್ಮಾರ್ಟ್‌ಫೋನ್.!!

ಹೌದು, 'ಆಸೂಸ್ ಝೆನ್‌ಫೋನ್ Z6' ಹೆಸರಿನ ಸ್ಮಾರ್ಟ್‌ಫೋನ್ ಒಂದನ್ನು ಗ್ರಾಹಕರಿಗೆ ಪರಿಚಯಿಸಲಿದ್ದು, ಇದೊಂದು ಫ್ಯಾಗ್‌ಶಿಫ್ ಸ್ಮಾರ್ಟ್‌ಫೋನ್‌ ಆಗಿರಲಿದೆ. 'ಝೆನ್‌ಫೋನ್ Z6' ಹಲವು ಹೊಸ ವಿಶೇಷತೆಗಳನ್ನು ಹೊತ್ತು ಬರಲಿದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನಿನ ಕೆಳ ಭಾಗದ ಬೆಜಲ್ ಹತ್ತಿರ ಫಿಂಗರ್‌ಪ್ರಿಂಟ್ ಸೆನ್ಸಾರ್ ನೀಡಲಾಗಿದ್ದು, ಕರ್ವ್ ಡಿಸೈನ್ ಹೊಂದಿದೆ ಎಂದು ತಿಳಿದುಬಂದಿದೆ.

ಭರ್ಜರಿ ಫೀಚರ್ಸ್ ಹೊತ್ತು ಆಗಮಿಸಲಿದೆ ಆಸೂಸ್‌ನ ಈ ಹೊಸ ಸ್ಮಾರ್ಟ್‌ಫೋನ್.!!

ಆಸೂಸ್ ಕಂಪನಿಯೂ ತನ್ನ ಬರಲಿರುವ 'ಝೆನ್‌ಫೋನ್ Z6' ಸ್ಮಾರ್ಟ್‌ಫೋನ್‌ ಮೂಲಕ ಮೊದಲ ಬಾರಿಗೆ ತ್ರಿವಳಿ ಕ್ಯಾಮೆರಾಗಳನ್ನು ಪರಿಚಯಿಸುವುದು ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಇದರೊಂದಿಗೆ ಯೂನಿಕ್ ಡಿಸ್‌ಪ್ಲೇ ಡಿಸೈನ್‌ ಅನ್ನು ಹೊಂದಿರುವುದು ಎಂದು ಹೇಳಲಾಗುತ್ತಿದೆ. ಹಾಗಾದರೇ ಆಸೂಸ್ 'ಝೆನ್‌ಫೋನ್ Z6' ಸ್ಮಾರ್ಟ್‌ಫೋನ್‌ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊಂದಿರಬಹುದು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸೈನ್

ಡಿಸೈನ್

ಆಸೂಸ್ ಬಿಡುಗಡೆ ಮಾಡಲಿರುವ 'ಝೆನ್‌ಫೋನ್‌ Z6' ಸ್ಮಾರ್ಟ್‌ಫೋನ್‌ ಡಿಸೈನ್ ಹೊಸತನದಿಂದ ಕೂಡಿರಲಿದ್ದು, ಬೆಜಲ್ ಭಾಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ ಎಂದು ಹೇಳಲಾಗುತ್ತಿದೆ. ಹಿಂಭಾಗದ ಮೂಲೆಯಲ್ಲಿ ತ್ರಿವಳಿ ಕ್ಯಾಮೆರಾಗಳಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಅದರೊಟ್ಟಿಗೆ ಎಲ್‌ಇಡಿ ಫ್ಯಾಶ್ ಅನ್ನು ಸಹ ಕ್ಯಾಮೆರಾದ ಹತ್ತಿರದಲ್ಲಿಯೇ ನೀಡಲಾಗಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಝೆನ್‌ಫೋನ್‌ Z6 ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಹೊಂದಿದ್ದು, 6.4 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 402 ಪಿಕ್ಸಲ್ ಪರ್ ಇಂಚ ಸಾಮರ್ಥ್ಯವನ್ನು ಹೊಂದಿದೆ. ಹೈ ರೆಸಲ್ಯೂಶನ್ ಬಳಸಿರುವುದರಿಂದ ಇದರ ಡಿಸ್‌ಪ್ಲೇ ಕ್ವಾಲಿಟಿ ಸಹ ಉತ್ತಮವಾಗಿರಲಿದೆ.

ಪ್ರೊಸೆಸರ್

ಪ್ರೊಸೆಸರ್

ಆಸೂಸ್ ಈ ಸ್ಮಾರ್ಟ್‌ಫೋನ್‌ 2.8 ಗಿಗಾಹರ್ಡ್ಸ್‌ನ ಕ್ವಾರ್ಡ್‌ಕೋರ್ ಜೊತೆಗೆ 1.8 ಗಿಗಾಹರ್ಡ್ಸ್‌ನ ಕ್ವಾರ್ಡ್‌ಕೋರ್‌ ಸಾಮರ್ಥ್ಯಗಳನ್ನು ಒಳಗೊಂಡಂತೆ ಆಕ್ಟಾಕೋರ್‌ಇದ್ದು, ಇದರೊಂದಿಗೆ ಸ್ನಾಪ್‌ಡ್ರಾಗನ್ 845 ಸಾಮರ್ಥ್ಯದ ಪ್ರೊಸೆಸರ್ ಅನ್ನು ಹೊಂದಿರಲಿದೆ. ಎಂದು ತಿಳಿದು ಬಂದಿದೆ.

ಕ್ಯಾಮೆರಾ

ಕ್ಯಾಮೆರಾ

ಆಸೂಸ್‌ ಝೆನ್‌ಫೋನ್‌ Z6 ಸ್ಮಾರ್ಟ್‌ಫೋನಿನ ಮೂಲಕ ಮೊದಲ ಬಾರಿಗೆ ತ್ರಿವಳಿ ಕ್ಯಾಮೆರಾಗಳನ್ನು ಪರಿಚಯಿಸುತ್ತಿದೆ. ಹಿಂಭಾಗದಲ್ಲಿ ಎರಡು ತ್ರಿವಳಿ ಕ್ಯಾಮೆರಾಗಳನ್ನು ಮತ್ತು ಸೆಲ್ಫೋಗಾಗಿ ಮುಂಭಾಗದಲೊಂದು ಕ್ಯಾಮೆರಾ ನೀಡಲಾಗುವುದು. ಹಿಂಭದಿಯಲ್ಲಿನ ಕ್ಯಾಮೆರಾಗಳು 12+8+5 ಮೆಗಾಪಿಕ್ಸಲ್‌ ಮತ್ತು ಸೆಲ್ಫೀ ಕ್ಯಾಮೆರಾವು 8 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿರಲಿವೆ.

 ಬ್ಯಾಟರಿ ಮತ್ತು ಬೆಲೆ

ಬ್ಯಾಟರಿ ಮತ್ತು ಬೆಲೆ

ಆಸೂಸ್‌ನ ಝೆನ್‌ಫೋನ್‌ Z6 ಸ್ಮಾರ್ಟ್‌ಫೋನ್‌ಲ್ಲಿ 3300 mAh ಸಾಮರ್ಥ್ಯದ ಬ್ಯಾಟರಿ ನೀಡಲಾಗುವುದು ಮತ್ತು ಈ ಬ್ಯಾಟರಿ ದೀರ್ಘಕಾಲದವರೆಗೆ ಬಾಳಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಬಿಡುಗಡೆಯ ದಿನಾಂಕವನ್ನು ಕಂಪನಿ ಬಹಿರಂಗ ಪಡಿಸಿಲ್ಲ. ಇನ್ನೂ ಈ ಸ್ಮಾರ್ಟ್‌ಫೋನ್‌ ಬೆಲೆಯು 30,999ರೂ.ಗಳು ಇರಬಹುದು ಎಂದು ಅಂದಾಜಿಸಲಾಗಿದೆ.

Best Mobiles in India

English summary
“The Asus ZenFone 5 was announced in February last year, so we could see something happen in the coming weeks”.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X