ರೂ.8,999ಕ್ಕೆ ಲಭ್ಯವಿದೆ ಆಸಸ್ ಜೆನ್‌ಪೋನ್ ಗೊ..!
ತನ್ನ ಗೋ ಸರಣಿಯ ಸ್ಮಾರ್ಟ್‌ಪೋನುಗಳನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಆರಂಭಿಕ ಬೆಲೆಯ ಸ್ಮಾರ್ಟ್‌ಪೋನ್ ಇದಾಗಿದ್ದು, ಮಾರುಕಟ್ಟೆಯಲ್ಲಿ ಹೊಸ ಆಲೆ ಸೃಷ್ಠಿಸಲಿದೆ.

ಸದ್ಯ ಈ ಆಸಸ್ ಜೆನ್‌ಪೋನ್ ಗೊ ZB500KL ರೂ.8,999ಕ್ಕೆ ಲಬ್ಯವಿದ್ದು, ಬ್ಲ್ಯಾಕ್, ವೈಟ್, ರೆಡ್, ಗೋಲ್ಡ್, ಸಿಲ್ವರ್ ಮತ್ತು ಆಕ್ವಾ ಬ್ಲೂ ಬಣ್ಣಗಳಲ್ಲಿ ಈ ದೊರೆಯಲಿದೆ ಎನ್ನಲಾಗಿದೆ.

HD ಡಿಸ್‌ಪ್ಲೇ:
ಆಸಸ್ ಜೆನ್‌ಪೋನ್ ಗೊ ಸ್ಮಾರ್ಟ್‌ಪೋನಿನಲ್ಲಿ 5 ಇಂಚಿನ 1280 x 720 p ರೆಸೆಲ್ಯೂಷನ್ ಹೊಂದಿರುವ HD IPS ಡಿಸ್‌ಪ್ಲೇ ಇದ್ದು ಗುಣಮಟ್ಟದ ವಿಡಿಯೋ ವಿಕ್ಷಣೆ ಮತ್ತು ಗೇಮಿಂಗ್‌ಗೆ ಉತ್ತಮವಾಗಿದೆ.

ವೇಗದ ಪ್ರೋಸೆಸರ್:
ಈ ಆಸಸ್ ಜೆನ್‌ಪೋನ್ ಗೊ ಸ್ಮಾರ್ಟ್‌ಪೋನಿನಲ್ಲಿ ಕ್ವಾಡ್‌ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 410 ಪ್ರೋಸೆಸರ್ ಇದ್ದು, ಇದರೊಂದಿಗೆ Adreno 306 ಗ್ರಾಫಿಕ್ ಪ್ರೋಸೆಸರ್ ಸಹ ಇದೆ. ಅಲ್ಲದೇ 2GB RAM ಮತ್ತು 16GB ಇಂಟರ್ನಲ್ ಮೆಮೊರಿಯನ್ನು ಈ ಪೋನ್ ಹೊಂದಿದೆ.

13MP ಕ್ಯಾಮೆರಾ:
13MP ಕ್ಯಾಮೆರಾ ಆಸಸ್ ಜೆನ್‌ಪೋನ್ ಗೊ ಸ್ಮಾರ್ಟ್‌ಪೋನಿನ ಹಿಂಭಾಗದಲ್ಲಿದ್ದು, ಎಲ್‌ಇಡಿ ಪ್ಲಾಪ್ ಇದೆ. ಮುಂಭಾಗದಲ್ಲಿ 5MP ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೇ ಉತ್ತಮ ಪೋಟ್ ಕ್ಲಿಕ್ ಮಾಡಲು ಹಲವು ಆಯ್ಕೆಗಳನ್ನು ನೀಡಲಾಗಿದೆ.

ಆಂಡ್ರಾಯ್ಸ್ 6.0
ಆಸಸ್ ಜೆನ್‌ಪೋನ್ ಗೊ ಸ್ಮಾರ್ಟ್‌ಪೋನು ಆಂಡ್ರಾಯ್ಸ್ 6.0ನಲ್ಲಿ ಕಾರ್ಯನಿರ್ವಹಿಸಲಿದೆ. ಡುಯಲ್ ಸಿಮ್ ಹಾಕಬಹುಬಹುದಾಗಿದ್ದು, 4G ಸಪೋರ್ಟ್ ಮಾಡಲಿದೆ, ಅಲ್ಲದೇ 2600mAh ಬ್ಯಾಟರಿ ಇದರಲ್ಲಿದೆ.


Click it and Unblock the Notifications