7 ವರ್ಷದ ಬಾಲಕಿಗೆ ಗೂಗಲ್ ನಲ್ಲಿ ಕೆಲಸ ಬೇಕಂತೆ: ಇದಕ್ಕೆ ಗೂಗಲ್ ಸಿಇಓ ಸುಂದರ್‌ ಪಿಚ್ಚೈ ಹೇಳಿದ್ದೇನು..?

Written By:

ಇಂದಿನ ಮಕ್ಕಳು ತಮ್ಮ ಭವಿಷ್ಯದ ಬಗ್ಗೆ ಕನಸು ಕಟ್ಟಲು ಶುರು ಮಾಡಿರುತ್ತಾರೆ, ಆಡುವ ವಯಸ್ಸಿನಲ್ಲೇ ನಾಳೆ ನಾನು ಡಾಕ್ಟರ್, ಇಂಜಿನಿಯರ್, ಲಾಯರ್ ಆಗಬೇಕು ಎಂಬ ಕನಸು ಕಾಣುತ್ತಿರುತ್ತಾರೆ. ಆದರೆ ಇಲ್ಲೊಬ್ಬ 7 ವರ್ಷದ ಬಾಲಕಿ ಎಲ್ಲರಿಗಿಂತ ಭಿನ್ನವಾಗಿ ವಿಶ್ವದ ಅತೀ ದೊಡ್ಡ ಸರ್ಚ್ ಇಂಜಿನ್ ಗೂಗಲ್ ನಲ್ಲಿ ಕೆಲಸ ಬೇಕಂತೆ, ಇದಕ್ಕೆಂದು ಗೂಗಲ್‌ಗೆ ಪತ್ರವನ್ನೇ ಬರಿದಿದ್ದಾಳೆ.

7 ವರ್ಷದ ಬಾಲಕಿಗೆ ಗೂಗಲ್ ನಲ್ಲಿ ಕೆಲಸ ಬೇಕಂತೆ..!

ಓದಿರಿ: ಸ್ಮಾರ್ಟ್‌ಪೋನಿಂದಲೇ ಪಾನ್‌ಕಾರ್ಡ್‌ ಪಡೆಯಲು ಸಾಧ್ಯ..! ಇದಕ್ಕೆಂದೆ ಸಿದ್ಧವಾಗಿ ಆಪ್‌..!

ಯುಕೆಯಿಂದ ಪತ್ರ ಬರೆದಿರುವ 7 ವರ್ಷದ ಕ್ಲೋಯ್ ಬ್ರಿಡ್ಜ್ವಾಟರ್, 'ಡಿಯರ್ ಗೂಗಲ್ ಬಾಸ್, ನಾನು ದೊಡ್ಡವಳಾದ ಮೇಲೆ ಗೂಗಲ್ ನಲ್ಲಿ ಕೆಲಸ ಮಾಡಲು ಬಯಸುತ್ತೇನೆ, ಅದರೊಂದಿಗೆ ಚಾಕೋಲೆಟ್ ಫ್ಯಾಟರಿಯಲ್ಲೂ ಕೆಲಸ ಮಾಡುವ ಆಸೆ ಇದೆ, ಅಲ್ಲದೇ ಒಲಂಪಿಕ್ಸ್ ಸ್ವೀಮಿಂಗ್ ಪೂಲಿನಲ್ಲೂ ಈಜುವ ಆಸೆ ಇದೆ.

ನನಗೆ ಕಂಪ್ಯೂಟರ್ ಇಷ್ಟ, ಅಲ್ಲದೇ ಟ್ಯಾಬ್ಲೆಟ್ ನಲ್ಲಿ ಗೇಮ್ ಆಡುವುದು ಎಂದರೆ ಪ್ರಾಣ, ಅಪ್ಪನ ಟ್ಯಾಬ್ಲೆಟ್ ರೀಬೂಟ್ ಮಾಡುವುದನ್ನು ಕಲಿತಿದ್ದೇನೆ, ಅಲ್ಲದೇ ಕಂಪ್ಯೂಟರ್ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಅಲ್ಲದೇ ನನ್ನ ಅಪ್ಪ-ಅಮ್ಮ ಮತ್ತು ಟೀಚರ್‌ಗಳು ನಾನು ತರಗತಿಯಲ್ಲಿ ಚೆನ್ನಾಗಿ ಓದುತ್ತೇನೆ ಎಂದು ಹೇಳುತ್ತಾರೆ. ಅದಕ್ಕೆ ನಿಮ್ಮಲ್ಲಿ ಕೆಲಸ ನೀಡಿ, ಅಲ್ಲದೇ ನನ್ನ ಪತ್ರ ಓದಿದಕ್ಕೆ ಧನ್ಯವಾದ' ಎಂದು ಸುಂದರ ಪತ್ರ ಪೂರ್ಣಗೊಳಿಸಿದ್ದಾಳೆ.

7 ವರ್ಷದ ಬಾಲಕಿಗೆ ಗೂಗಲ್ ನಲ್ಲಿ ಕೆಲಸ ಬೇಕಂತೆ..!

ಓದಿರಿ: ಬೋರಿಂಗ್ ಡಯಲ್ ಪಾಡ್ ಬಿಡಿ: ಇಲ್ಲಿದೇ ನೋಡಿ ಕಾಲಿಂಗ್ ಆಪ್‌ಗಳು

ಹೀಗೆ ನನ್ನ ದೊಡ್ಡ ದೊಡ್ಡ ಕನಸುಗಳಿದ್ದು, ಅದನ್ನು ಸಾಕಾರಗೊಳಿಸಲು ಗೂಗಲ್ ಅಲ್ಲಿ ಕೆಲಸ ಮಾಡಲು ಅವಕಾಶ ನೀಡುವಂತೆ ತನ್ನ ಲೆಟರ್ ಅನ್ನೇ ರೆಸ್ಯೂಮ್ ಎನ್ನುವಂತೆ ಗೂಗಲ್ ಗೆ ಕಳುಹಿಸಿದ್ದಾಳೆ.

ಪುಟ್ಟ ಮಗುವಿನ ಪತ್ರಕ್ಕೆ ಮನಸೋತ ಗೂಗಲ್ ಸಿಇಓ ಸುಂದರ್ ಪಿಚ್ಚೈ, ಪತ್ರಕ್ಕೆ ಉತ್ತರವನ್ನು ನೀಡಿದ್ದಾರೆ. ನಿನ್ನ ಕಸನುಗಳನ್ನು ಸಾಕಾರಗೊಳಿಸಿಕೊಳ್ಳಲು ಕನಸುಗಳ ಹಿಂದೆ ಸಾಗು, ಅವುಗಳನ್ನು ಪೂರ್ಣಗೊಳಿಸಿಕೊಳ್ಳಲು ಶ್ರಮಿಸು, ನಿನ್ನ ಓದು ಮುಗಿದ ನಂತರ ಮತ್ತೊಂಮ್ಮೆ ಅರ್ಜಿ ಹಾಕು, ನಿನ್ನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ.

Read more about:
English summary
In an adorable letter that seven-year-old Chloe Bridgewater from Hereford, UK wrote to the “Google Boss”. to more visit kananda.goizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot