ಆಸೂಸ್‌ನಿಂದ ಮತ್ತೆ ಬಜೆಟ್‌ ಬೆಲೆಯಲ್ಲಿ ಬೆಸ್ಟ್‌ ಫೋನ್‌ ಲಾಂಚ್‌!

|

ಆಸೂಸ್‌ ಕಂಪನಿಯ ಅಗ್ಗದ ಬೆಲೆಯ 'ಝೆನ್‌ಫೋನ್‌ ಲೈವ್‌ L1' ಸ್ಮಾರ್ಟ್‌ಫೋನ್‌ ಈಗಾಗಲೇ ಗ್ರಾಹಕರನ್ನು ಸೆಳೆದಿದ್ದು, ಇದರ ಮುಂದುವರಿದ ಭಾಗವಾಗಿ ಇದೀಗ ಕಂಪನಿ ಮತ್ತೆ 'ಝೆನ್‌ಫೋನ್ ಲೈವ್‌ L2' ಹೆಸರಿನ ಸ್ಮಾರ್ಟ್‌ಫೋನ್‌ ಒಂದನ್ನು ಲಾಂಚ್‌ ಮಾಡಿದೆ. ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್‌ ಬಜೆಟ್‌ ದರದಲ್ಲಿ ಗ್ರಾಹಕರನ್ನು ಆಕರ್ಷಿಸಲಿದೆ.

ಆಸೂಸ್‌ನಿಂದ ಮತ್ತೆ ಬಜೆಟ್‌ ಬೆಲೆಯಲ್ಲಿ ಬೆಸ್ಟ್‌ ಫೋನ್‌ ಲಾಂಚ್‌!

ಹೌದು, ಆಸೂಸ್‌ ಕಂಪನಿಯು 'ಝೆನ್‌ಫೋನ್ ಲೈವ್‌ L2' ಸ್ಮಾರ್ಟ್‌ಫೋನ್‌ ಸದ್ದಿಲ್ಲದೆ ಲಾಂಚ್‌ ಆಗಿದ್ದು, ತನ್ನ ವರ್ಗದಲ್ಲಿಯೇ ಬೆಸ್ಟ್‌ ಫೀಚರ್ಸ್‌ಗಳನ್ನು ಹೊಂದಿದೆ. ಗ್ಲಾಸಿ ಲುಕ್‌ನಲ್ಲಿ ಡಿಸೈನ್‌ ನಲ್ಲಿರುವ ಈ ಫೋನ್‌ ಆಕ್ಟಾಕೋರ್‌ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್‌ ಅನ್ನು ಹೊಂದಿದ್ದು, ಜೊತೆಗೆ 2GB RAM ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾದರೇ ಆಸೂಸ್‌ ಝೆನ್‌ಫೋನ್‌ ಲೈವ್‌ L2' ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸೈನ್‌

ಡಿಸೈನ್‌

ಈ ಸ್ಮಾರ್ಟ್‌ಫೋನ್‌ 147.26 x 71.77 x 8.15mm ಸುತ್ತಳತೆಯನ್ನು ಹೊಂದಿದ್ದು, 140ಗ್ರಾಂ ತೂಕವನ್ನು ಪಡೆದಿದೆ. ಮುಂಭಾಗದಲ್ಲಿ ಗ್ಲಾಸಿ ಲುಕ್‌ನಲ್ಲಿ ಹಾಗೂ ಹಿಂಭಾಗದಲ್ಲಿ ಪಾಲಿಕಾರ್ಬೋನೆಟ್‌ ಬ್ಲ್ಯಾಕ್‌ ಬಣ್ಣದಲ್ಲಿ ಆಕರ್ಷಕ ರಚನೆಯನ್ನು ಹೊಂದಿದ್ದು, ರಾಕೆಟ್‌ ರೆಡ್‌ ಮತ್ತು ಕಾಸ್ಮಿಕ್‌ ಬ್ಲೂ ಬಣ್ಣದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಝೆನ್‌ಫೋನ್ ಲೈವ್‌ L2' ಸ್ಮಾರ್ಟ್‌ಫೋನ್‌ 1560x720 ಪಿಕ್ಸಲ್‌ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 5.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ತನ್ನ ವರ್ಗದಲ್ಲಿಯೇ ಉತ್ತಮ ಡಿಸ್‌ಪ್ಲೇ ಇದಾಗಿದೆ ಎನ್ನಬಹುದಾಗಿದೆ.

ಪ್ರೊಸೆಸರ್

ಪ್ರೊಸೆಸರ್

ಆಕ್ಟಾಕೋರ್‌ ಚಿಪ್‌ಸೆಟ್‌ ನೊಂದಿಗೆ ಸ್ನ್ಯಾಪ್‌ಡ್ರಾಗನ್ 430 ಪ್ರೊಸೆಸರ್‌ ಅನ್ನು ಹೊಂದಿರುವ 'ಝೆನ್‌ಫೋನ್ ಲೈವ್‌ L2' ಸ್ಮಾರ್ಟ್‌ಫೋನಿನಲ್ಲಿ 2GB ಸಾಮರ್ಥ್ಯದ RAM ಕೆಲಸ ಮಾಡಲಿದೆ. ಅದರ ಜೊತೆಗೆ ಅಂಡ್ರಿನೊ 505 GPU ಇರಲಿದ್ದು, ಆಂಡ್ರಾಯ್ಡ್ ಓರಿಯೊ ಓಎಸ್‌ ಕೆಲಸ ಮಾಡಲಿದೆ.

ಕ್ಯಾಮೆರಾ

ಕ್ಯಾಮೆರಾ

ಸ್ಮಾರ್ಟ್‌ಪೋನ್‌ ಹಿಂಬದಿಯಲ್ಲಿ 13ಮೆಗಾಪಿಕ್ಸಲ್ ಸಾಮರ್ಥ್ಯದ ರೇರ ಕ್ಯಾಮೆರಾವನ್ನು ಒದಗಿಸಲಾಗಿದ್ದು, ಪನೋರಮಾ, ಬ್ಯೂಟಿ, ಮತ್ತು ಟೈಮ್‌ ಲ್ಯಾಪ್ಸ್‌ ಆಯ್ಕೆಗಳನ್ನು ನೀಡಲಾಗಿದೆ. ಸೆಲ್ಫಿಗಾಗಿ 5ಮೆಗಾಪಿಕ್ಸಲ್ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ

ಬ್ಯಾಟರಿ

ಝೆನ್‌ಫೋನ್ ಲೈವ್‌ L2' ಸ್ಮಾರ್ಟ್‌ಫೋನ್‌ನಲ್ಲಿ 3000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಒಂದು ದಿನದ ಮಟ್ಟಿಗೆ ಬ್ಯಾಟರಿ ಬಾಳಿಕೆ ಒದಗಿಸುವ ಶಕ್ತಿಯನ್ನು ಹೊಂದಿದೆ. ಇದರೊಂದಿಗೆ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಆಯ್ಕೆಯನ್ನು ಒದಗಿಸಲಾಗಿದ್ದು,

ಬೆಲೆ

ಬೆಲೆ

ಹೊಸದಾಗಿ ಲಾಂಚ್‌ ಆಗಿರುವ ಆಸೂಸ್‌ನ ಝೆನ್‌ಫೋನ್ ಲೈವ್‌ L2' ಸ್ಮಾರ್ಟ್‌ಫೋನ್‌ ನಿಖರ ಬೆಲೆಯನ್ನು ಕಂಪನಿ ತಿಳಿಸಿಲ್ಲ. ಆದರೆ ಬಜೆಟ್‌ ಬೆಲೆಯಲ್ಲಿಯೇ ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗುತ್ತಿದೆ.

Best Mobiles in India

English summary
Asus Zenfone Live L2 Budget Smartphone Launched.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X