ರೆಡ್‌ಮಿ 5A ಬಿಡುಗಡೆಗೂ ಮುನ್ನವೇ ಹೊಡೆತ: ಜೆನ್‌ಫೋನ್ ಲೈವ್ ಬೆಲೆಯಲ್ಲಿ ಭಾರೀ ಕಡಿತ
ಆಸುಸ್ ಭಾರತೀಯ ಮಾರುಕಟ್ಟೆಯಲ್ಲಿ ಜೆನ್ ಫೋನ್‌ಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಸಿಕೊಂಡಿದೆ. ಈ ಹಿನ್ನಲೆಯಲ್ಲಿ ತನ್ನ ಜೆನ್‌ಪೋನ್ ಸರಣಿಯ ಬಜೆಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತವನ್ನು ಮಾಡಿದೆ ಎನ್ನಲಾಗಿದೆ.

ಓದಿರಿ: ಈ ಆಪ್ ಆಪ್‌ಡೇಟ್ ಮಾಡಿದ್ರೆ ಬೆಂಗಳೂರಿನ ಬೈಕ್ ರೈಡರ್ಸ್ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಬೇಕಾಗಿಲ್ಲ...!
ಈಗಾಗಲೇ ಬಜೆಟ್ ಬೆಲೆಯಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಲಾಂಚ್ ಆಗುತ್ತಿದ್ದು, ಇದಲ್ಲದೇ ಶಿಯೋಮಿಯ ರೆಡ್‌ಮಿ 5A ಸ್ಮಾರ್ಟ್‌ಫೋನ್ ರೂ.4,999ಕ್ಕೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ದೈತ್ಯ ಕಂಪನಿಗಳ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆಯನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಆಸುಸ್ ಸಹ ತನ್ನ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಇಳಿಕೆಯನ್ನು ಮಾಡಲು ಮುಂದಾಗಿದೆ.

ಜೆನ್‌ಫೋನ್ ಲೈವ್;
ಮಾರುಕಟ್ಟೆಯಲ್ಲಿ ರೂ. 9999ಕ್ಕೆ ಲಾಂಚ್ ಆಗಿದ್ದ ಜೆನ್‌ಫೋನ್ ಲೈವ್ ಬೆಲೆಯಲ್ಲಿ ಇಳಿಕೆಯಾಗಿದ್ದು, ರೂ.1000 ಕಡಿತಗೊಂಡು ರೂ. 8,999ಕ್ಕೆ ಮಾರಾಟವಾಗುತ್ತಿತ್ತು. ಸದ್ಯ ಆಸುಸ್ ಮತ್ತೊಂಮ್ಮೆ ದರ ಕಡಿತಗೊಳಿದ್ದು, ರೂ. 7,999ಕ್ಕೆ ದೊರೆಯುತ್ತಿದೆ ಎನ್ನಲಾಗಿದೆ.

ವಿಶೇಷ ಕ್ಯಾಮೆರಾ:
ಜೆನ್‌ಫೋನ್ ಲೈವ್ ನಲ್ಲಿ ಆಸುಸ್ ವಿಶೇಷವಾಗಿ ವಿಶ್ವದ ಮೊದಲ ಲೈವ್ ಸ್ಟಿಮ್ ಬ್ಯೂಪಿಫಿಕೇಷನ್ ಟೆಕ್ನಾಲಜಿಯನ್ನು ಅಳವಡಿಸಿತ್ತು. ಇದಕ್ಕಾಗಿ ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಿದೆ. ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ನೀಡಿದೆ.

ಆಂಡ್ರಾಯ್ಡ್ 6.0:
ಜೆನ್‌ಫೋನ್ ಲೈವ್ ನಲ್ಲಿ ಆಂಡ್ರಾಯ್ಡ್ 6.0ವನ್ನು ಕಾಣಬಹುದಾಗಿದ್ದು, ಜೊತೆಗೆ ಜೆನ್ UI 3.5 ಅನ್ನು ನೀಡಲಾಗಿದೆ. ಇದಲ್ಲದೇ 5 ಇಂಚಿನ HD ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಜೊತೆಗೆ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ ಪ್ರೋಸೆಸರ್ ಮತ್ತು 2GB RAM ಅನ್ನು ಇದರಲ್ಲಿ ನೀಡಲಾಗಿದೆ.

ಡ್ಯುಯಲ್ ಸಿಮ್:
ಜೆನ್‌ಫೋನ್ ಲೈವ್ ನಲ್ಲಿ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಜೊತೆಗೆ 16GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಅಲ್ಲದೆ 2650mAh ಬ್ಯಾಟರಿ ಇದರಲ್ಲಿದೆ.


Click it and Unblock the Notifications








