Subscribe to Gizbot

ಈ ಆಪ್‌ ಆಪ್‌ಡೇಟ್ ಮಾಡಿದ್ರೆ ಬೆಂಗಳೂರಿನ ಬೈಕ್‌ ರೈಡರ್ಸ್‌ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಬೇಕಾಗಿಲ್ಲ...!

Written By:

ಗೂಗಲ್ ಮ್ಯಾಪ್ ದಿನೇ ದಿನೇ ಆಪ್‌ಡೇಟ್ ಆಗುತ್ತಿದ್ದು, ಹೊಸ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ ನೀಡುತ್ತಿದೆ. ಇದೇ ಮಾದರಿಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ ಮ್ಯಾಪ್‌ನಲ್ಲಿ ಹೊಸ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದಕ್ಕಾಗಿಯೇ ಮೋಟರ್ ಸೈಕಲ್ ಮೋಡ್ ಬಿಡುಗಡೆ ಮಾಡಿದೆ. ಈ ಮೂಲಕ ಬೆಂಗಳೂರಿನ ಬೈಕ್‌ ಸವಾರರಿಗೆ ಹೊಸ ಹೊಸ ಹಾದಿಯನ್ನು ಪರಿಚಯ ಮಾಡಲಿದೆ.

ಬೆಂಗಳೂರಿನ ಬೈಕ್‌ ರೈಡರ್ಸ್‌ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಲ್ಲಬೇಕಾಗಿಲ್ಲ...!

ಓದಿರಿ:'ಫ್ರಿಡಮ್ 251' ಸುಳ್ಳಲ್ಲ: ರೂ.251ಕ್ಕೆ ಸ್ಮಾರ್ಟ್‌ಫೋನ್ ಮಾರ್ಚ್-ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ..!!

ಭಾರತದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನಗಳನ್ನು ಕಾಣಬಹುದಾಗಿದ್ದು, ಈ ಹಿನ್ನಲೆಯಲ್ಲಿ ಗೂಗಲ್ ತನ್ನ ಮ್ಯಾಪಿನಲ್ಲಿ ಬೈಕ್‌ಗಳು ಸಾಗುವ ಹೊಸ ಹಾದಿಗಳನ್ನು ತೋರಿಸಿಕೊಡಲಿದೆ ಎನ್ನಲಾಗಿದೆ. ಇದರಿಂದಾಗಿ ಬೈಕ್ ಸವಾರರು ಮೈನ್‌ರೋಡಿನ ಸಿಗ್ನಲ್‌ಗಳನ್ನು ತಪ್ಪಿಸಿ ತಾವು ತಲುಪಬೇಕಿದ್ದ ಜಾಗವನ್ನು ತಲುಪಲು ಇದು ಸಹಾಯಕಾರಿಯಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ದಾರಿಗಳ ಹುಡುಕಾಟ:

ಹೊಸ ದಾರಿಗಳ ಹುಡುಕಾಟ:

ಮಹಾನಗರಗಳಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಹೆಚ್ಚು. ಈ ಹಿನ್ನಲೆಯಲ್ಲಿ ಅಡ್ಡದಾರಿಗಳು ಮತ್ತು ಒಳದಾರಿಗಳು ಕೆಲವೇ ಕೆಲವು ಬೈಕ್ ಸವಾರರಿಗೆ ತಿಳಿದಿರಲಿದೆ. ಆದರೆ ಎಲ್ಲಾರಿಗೂ ತಿಳಿದಿರುವುದಿಲ್ಲ. ಈ ಹಿನ್ನಲೆಯಲ್ಲಿ ಬೈಕ್ ಸವಾರರಿಗೆ ಹತ್ತಿರದ ದಾರಿಯನ್ನು ತೋರಿಸಿಕೊಡಲಿದೆ ಹೊಸ ಮ್ಯಾಪ್‌.

ಟ್ರಾಫಿಕ್‌ ಬಗ್ಗೆ ಮಾಹಿತಿ:

ಟ್ರಾಫಿಕ್‌ ಬಗ್ಗೆ ಮಾಹಿತಿ:

ನೀವು ಸಾಗುವ ಹಾದಿಯಲ್ಲಿ ಎಷ್ಟು ಟ್ರಾಫಿಕ್ ಇದೆ. ಅಲ್ಲದೇ ದಿನದ ಯಾವ ಅವಧಿಯಲ್ಲಿ ಹೆಚ್ಚಿನ ಜಾಮ್ ಸಂಭವಿಸುವುದು ಎನ್ನುವುದನ್ನು ಈ ಮ್ಯಾಪಿನಲ್ಲಿ ತೋರಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಒಟ್ಟಿನಲ್ಲಿ ಮ್ಯಾಪ್ ಬಳಕೆದಾರರಿಗೆ ಸಾಧ್ಯವಾದಷ್ಟು ಹೊಸ ಆಯ್ಕೆಗಳನ್ನು ನೀಡುತ್ತಿದೆ.

ಕನ್ನಡದಲ್ಲಿ ಸ್ಥಳಗಳು:

ಕನ್ನಡದಲ್ಲಿ ಸ್ಥಳಗಳು:

ಕರ್ನಾಟಕದಲ್ಲಿ ಯಾವುದೇ ಮೂಲೆಯಿಂದ ಇನ್ಯಾವುದೇ ಮೂಲೆಯನ್ನು ಹುಡುಕಿದರೆ ಗೂಗಲ್ ನಲ್ಲಿ ಸ್ಥಳಗಳನ್ನು ಕನ್ನಡದಲ್ಲೇ ತೋರಿಸುವ ಬದಲಾವಣೆಯನ್ನು ಮಾಡಲಾಗಿದೆ. ಈ ಮೂಲಕ ನಮ್ಮೂರಿನ ಸ್ಥಳಗಳನ್ನು ಕನ್ನಡದಲ್ಲೇ ಕಾಣಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Google Maps gets new 'motorcycle mode' feature for two wheelers. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot