ಐಫೋನ್ ಬಳಕೆದಾರರೇ ಇಲ್ಲೋಡಿ: ಹೊಸ ವರ್ಷಕ್ಕೆ ಆಪಲ್ ಕೊಟ್ಟಿದೆ ಭರ್ಜರಿ ಗಿಫ್ಟ್
ಇತ್ತೀಚಿಗೆ ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಫೋನ್‌ಗಳ ಬೇಡಿಕೆಯೂ ಹೆಚ್ಚಾಗುತ್ತಿದ್ದು, ಅಲ್ಲದೇ ಹೊಸದಾಗಿ ಮಾರುಕಟ್ಟೆಗೆ ಆಗಮಿಸಿದ ದುಬಾರಿ ಬೆಲೆಯ ಐಫೋನ್ X ಸಹ ಬಿಸಿ ದೊಸೆಯಂತೆ ಖರ್ಚಾಗಿರುವುದು ಸಾಕ್ಷಿಯಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯರಿಗೆ ಆಪಲ್ ಭರ್ಜರಿ ಗಿಫ್ಟ್ ವೊಂದನ್ನು ನೀಡಲು ಮುಂದಾಗಿದೆ.

ಓದಿರಿ: BSNLನಿಂದ ನ್ಯೂಯಿರ್ ಕಾಂಬೋ ಪ್ಲಾನ್: ಜಿಯೋ-ಏರ್‌ಟೆಲ್‌ನಲ್ಲೂ ಇಲ್ಲ..!
ಆಪಲ್ ಹೊಸ ಐಫೋನ್ ಲಾಂಚ್ ಮಾಡಿದ ನಂತರದಲ್ಲಿ ಹಳೇಯ ಐಫೋನ್‌ಗಳು ವೇಗವನ್ನು ಕಳೆದುಕೊಂಡು ನಿಧಾನವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನಲೆಯಲ್ಲಿ ಆಪಲ್ ತನ್ನ ಬಳಕೆದಾರರನ್ನು ಕ್ಷಮೆ ಸಹ ಕೋರಿತ್ತು. ಅಲ್ಲದೇ ಇದಕ್ಕೆ ಪರಿಹಾರವನ್ನು ಸೂಚಿಸುವುದಾಗಿಯೂ ತಿಳಿಸಿತ್ತು. ಈ ಹಿನ್ನಲೆಯಲ್ಲಿ ಹೊಸ ವರ್ಷಕ್ಕೆ ಗಿಫ್ಟ್ ನೀಡುತ್ತಿದೆ.

ಬ್ಯಾಟರಿ ಬೆಲೆ ಇಳಿಕೆ:
ಭಾರತದಲ್ಲಿರುವ ಐಫೋನ್ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ಕೊಟ್ಟಿರುವ ಆಪಲ್ ಮೊಬೈಲ್ ಸಂಸ್ಥೆ, ಐಫೋನ್ 6 ಹಾಗೂ ಅದರ ನಂತರ ಮಾದರಿಗಳಲ್ಲಿರುವ ಬ್ಯಾಟರಿಗಳನ್ನು ಕಡಿಮೆ ಬೆಲೆಗೆ ಬದಲಿಸಿಕೊಡುವುದಾಗಿ ಪ್ರಕಟಿಸಿದೆ. ಅಲ್ಲದೆ, ಹೊಸ ಬ್ಯಾಟರಿಗಳ ಬೆಲೆಯಲ್ಲಿ 4 ಸಾವಿರ ರೂ.ಗಳಷ್ಟು ಇಳಿಕೆ ಮಾಡಿದೆ ಎನ್ನಲಾಗಿದೆ.

ರೂ.2000ಕ್ಕೆ ಲಭ್ಯ:
ಸದ್ಯಕ್ಕೆ ಆಪಲ್ ಫೋನ್‌ಗಳ ಬ್ಯಾಟರಿ ಬೆಲೆ 6 ಸಾವಿರ ರೂ.ಗಳಷ್ಟಿದ್ದು ಶೀಘ್ರ ಇದರ ಬೆಲೆ 2 ಸಾವಿರ ರೂ.ಗಳಿಗೆ ಇಳಿಯಲಿದೆ ಎಂಬ ಮಾಹಿತಿಯೂ ದೊರೆಯುತ್ತುದೆ. ಐಫೋನ್ 6 ಹಾಗೂ ಇತರೇ ಐಫೋನ್‌ಗಳು ನಿಧಾನವಾಗಿರುವುದಕ್ಕೆ ಆಪಲ್ ತನ್ನ ಗ್ರಾಹಕರಲ್ಲಿ ಕ್ಷಮೆಯನ್ನೂ ಕೋರಿದೆ.

ಗ್ರಾಹಕರ ನಂಬಿಕೆಗಾಗಿ:
ಈಗಾಗಲೇ ಹಳೇಯ ಆಪಲ್ ಫೋನ್‌ಗಳು ವೇಗವನ್ನು ಕಳೆದುಕೊಂಡಿರುವ ಹಿನ್ನಲೆಯಲ್ಲಿ ಗ್ರಾಹಕರು ಆಪಲ್ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ಅತೀ ಕಡಿಮೆ ಬೆಲೆಗೆ ಬ್ಯಾಟರಿಯನ್ನು ಬದಲಾಯಿಸಿಕೊಡುತ್ತಿದೆ.


Click it and Unblock the Notifications