ಬಜೆಟ್ ಬೆಲೆಯಲ್ಲಿ ಒನ್‌ಪ್ಲಸ್‌ನ ಈ ಫೋನ್ ಖರೀದಿಸಬೇಕೆ?...ಬೇಡವೇ?
ಜನಪ್ರಿಯ ಒನ್‌ಪ್ಲಸ್ ಕಂಪನಿಯು ಹೊಸದಾಗಿ ಲಾಂಚ್ ಮಾಡಿರುವ ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G (OnePlus Nord CE 3 Lite) ಸ್ಮಾರ್ಟ್‌ಫೋನ್ ಆಕರ್ಷಕ ಉನ್ನತ ಫೀಚರ್ಸ್‌ಗಳಿಂದ ಗ್ರಾಹಕರನ್ನು ಹಿಂತಿರುಗಿ ನೋಡುವಂತೆ ಮಾಡಿದೆ. ಇನ್ನು ಈ ಫೋನ್ ಬಜೆಟ್ ಪ್ರೈಸ್‌ಟ್ಯಾಗ್ ಹೊಂದಿರುವುದು ಮತ್ತೊಂದು ಆಕರ್ಷಣಿಯ ಅಂಶವಾಗಿ ಕಾಣಿಸಿಕೊಂಡಿದೆ. ಆದರೆ ಬಜೆಟ್ ಬೆಲೆಯಲ್ಲಿ ಖರೀದಿಗೆ ಇದು ಯೋಗ್ಯವೇ?
ಅನೇಕ ಬಳಕೆದಾರರಲ್ಲಿ ಈ ಪ್ರಶ್ನೆ ಮೂಡಿರುತ್ತದೆ. ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G (OnePlus Nord CE 3 Lite) ಸ್ಮಾರ್ಟ್‌ಫೋನ್ ಆರಂಭಿಕ ವೇರಿಯಂಟ್ 8GB RAM + 128GB ಸ್ಟೋರೇಜ್ ಒಳಗೊಂಡಿದ್ದು, ಈ ಫೋನ್ ಅನ್ನು ಮತ್ತಷ್ಟು ಹೈಲೈಟ್ ಮಾಡಿದೆ. ಜೊತೆಗೆ 67W ಸೂಪರ್ ವೂಕ್ ವೈರ್ಡ್ ಚಾರ್ಜಿಂಗ್ ಸಪೋರ್ಟ್ ಪಡೆದಿರುವುದು ಗಮನ ಸೆಳೆಯುವ ಅಂಶಗಳಲ್ಲಿ ಒಂದಾಗಿದೆ.

ಹೀಗೆ ಕೆಲವು ವಿಶೇಷ ಫೀಚರ್ಸ್ ಮತ್ತು ಆಯ್ಕೆಗಳಿಂದ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿರುವ ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಸ್ಮಾರ್ಟ್‌ಫೋನ್ ಬಜೆಟ್ ಬೆಲೆಯ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 8GB RAM + 128GB ಸ್ಟೋರೇಜ್‌ನ ಆರಂಭಿಕ ಬೆಲೆ (ಅಧಿಕೃತ ಒನ್‌ಪ್ಲಸ್ ವೆಬ್‌ಸೈಟ್‌ನಲ್ಲಿ) 19,999ರೂ. ಆಗಿದೆ. ಹಾಗಾದರೆ ಈ ಫೋನ್ ಖರೀದಿಗೆ ಉತ್ತಮವೇ? ಏನಿದರ ಪ್ರಮುಖ ಕೀ ಪಾಯಿಂಟ್?. ಮುಂದೆ ನೋಡೋಣ ಬನ್ನಿರಿ.
ವೇಗದ ಪ್ರೊಸೆಸರ್ ಆಯ್ಕೆ ಮತ್ತು ಬಿಗ್ ಸ್ಟೋರೇಜ್ : ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್ ಪವರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ನಲ್ಲಿ ಆಕ್ಸಿಜನ್ OS 13.1 ಸಪೋರ್ಟ್ ಸಹ ಪಡೆದುಕೊಂಡಿದೆ. ಹಾಗೆಯೇ 8GB RAM + 128GB ಸ್ಟೋರೇಜ್ ಹಾಗೂ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆ ಅನ್ನು ಒಳಗೊಂಡಿದೆ. ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ಇದೆ.
ಜಬರ್ದಸ್ತ್ ಕ್ಯಾಮೆರಾ ಸೆನ್ಸಾರ್ : ಖಂಡಿತವಾಗಿಯೂ ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಫೋನಿನ ಪ್ರಾಥಮಿಕ ಕ್ಯಾಮೆರಾ ಹೈಲೈಟ್ ಅಂಶಗಳಲ್ಲಿ ಒಂದಾಗಿದೆ. ಈ ಫೋನ್ ಮುಖ್ಯ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆನ್ಸಾರ್ ರಚನೆಯನ್ನು ಪಡೆದಿದೆ.
ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ ಹಾಗೂ ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಪಡೆದಿದೆ. ಇದರೊಂದಿಗೆ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಇದಲ್ಲದೆ ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI ವಿಶ್ಯುಯಲ್ ಎಫೆಕ್ಟ್, ಸ್ಲೋ ಮೋಷನ್ ವಿಡಿಯೋ, ಡ್ಯುಯಲ್ ವ್ಯೂ ವಿಡಿಯೋ, ನೈಟ್‌ಸ್ಕೇಪ್, ಪೋಟ್ರೇಟ್ ಮೋಡ್ ಆಯ್ಕೆ ಇವೆ.
ದೀರ್ಘ ಬ್ಯಾಟರಿ ಬ್ಯಾಕ್‌ಅಪ್ ಪವರ್ : ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಸದ್ಯ ಟ್ರೆಂಡಿಂಗ್‌ನಲ್ಲಿರುವ ಬ್ಯಾಟರಿ ಆಯ್ಕೆಯನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿದ್ದು, ಜೊತೆಗೆ 67W ಸೂಪರ್ ವೂಕ್ ವೈರ್ಡ್ ಚಾರ್ಜಿಂಗ್ ಸಪೋರ್ಟ್ ಅನ್ನು ಸಹ ಪಡೆದುಕೊಂಡಿದೆ. ಜೊತೆಗೆ 5G, 4G LTE, Wi-Fi, 3.5mm ಆಡಿಯೋ ಜಾಕ್, ಬ್ಲೂಟೂತ್ 5.1, USB ಟೈಪ್-ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದಿದೆ.
ಆಕರ್ಷಕ ಡಿಸ್‌ಪ್ಲೇ ರಚನೆ : ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ವಿಭಾಗದಲ್ಲಿ ಗಮನ ಸೆಳೆಯುವ ರಚನೆ ಪಡೆದಿದೆ. ಇದು 6.72 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆದಿದ್ದು, 391ppi ಪಿಕ್ಸೆಲ್ ಸಾಂದ್ರತೆಯನ್ನು ಪಡೆದಿದೆ.


Click it and Unblock the Notifications








