Home
ಮೊಬೈಲ್

512GB ಸ್ಟೋರೇಜ್ ಸೌಲಭ್ಯದ ಅತ್ಯುತ್ತಮ ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ಪ್ರಸ್ತುತ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರಿಗೂ ಅಗತ್ಯ ಡಿವೈಸ್‌ ಆಗಿದ್ದು, ಬಹುತೇಕ ಕೆಲಸಗಳು ಫೋನ್‌ ಮೂಲಕವೇ ನಡೆಯುತ್ತವೆ. ಇನ್ನು ನೂತನ ಫೋನ್‌ ಖರೀದಿಸುವಾಗ ಗ್ರಾಹಕರು ಫೋನ್‌ ಕ್ಯಾಮೆರಾ, ಬ್ಯಾಟರಿ, ಡಿಸ್‌ಪ್ಲೇ, ಪ್ರೊಸೆಸರ್‌ ಹಾಗೂ RAM ಫೀಚರ್ಸ್‌ಗಳನ್ನು ಮುಖ್ಯವಾಗಿ ಗಮನಿಸುತ್ತಾರೆ. ಹಾಗೆಯೇ ಫೋನಿನ ಸ್ಟೋರೇಜ್‌ ಸೌಲಭ್ಯದ ಬಗ್ಗೆಯೂ ಸಹ ಗಮನ ನೀಡುತ್ತಾರೆ.

ಹೌದು, ಹೊಸ ಮೊಬೈಲ್‌ ಖರೀದಿಸುವಾಗ ಗ್ರಾಹಕರು ಅಧಿಕ ಆಂತರೀಕ ಸ್ಟೋರೇಜ್‌ ಸೌಲಭ್ಯದ ಫೋನ್‌ಗಳತ್ತ ಮುಖ ಮಾಡುತ್ತಾರೆ. ಅಧಿಕ ಆಂತರೀಕ ಸ್ಟೋರೇಜ್‌ ಇದ್ದರೆ, ಎಕ್ಸ್‌ಟ್ರಾ ಎಸ್‌ಡಿ ಕಾರ್ಡ್‌ ಅಗತ್ಯ ಇರಲ್ಲ ಎಂದು ಬಹುತೇಕ ಖರೀದಿದಾರರು ಅಂದುಕೊಳ್ಳುತ್ತಾರೆ. ಸದ್ಯ 128GB, 256GB ಹಾಗೂ 512GB ಆಂತರೀಕ ಸ್ಟೋರೇಜ್‌ ಫೋನ್‌ಗಳು ಹೆಚ್ಚಿನ ಡಿಮ್ಯಾಂಡ್‌ ಪಡೆದಿವೆ. ಹಾಗಾದರೇ 512GB ಸ್ಟೋರೇಜ್‌ ಸೌಲಭ್ಯ ಪಡೆದ ಕೆಲವು ಅತ್ಯುತ್ತಮ ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

512GB ಸ್ಟೋರೇಜ್ ಸೌಲಭ್ಯದ ಅತ್ಯುತ್ತಮ ಫೋನ್‌ಗಳ ಲಿಸ್ಟ್‌ ಇಲ್ಲಿದೆ!

ವಿವೋ V30 ಪ್ರೊ ಸ್ಮಾರ್ಟ್‌ಫೋನ್‌

ಈ ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಕರ್ವ್ಡ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದು 120Hz ರಿಫ್ರೆಶ್ ರೇಟ್, 2800 nits ವರೆಗೆ ಗರಿಷ್ಠ ಬ್ರೈಟ್‌ನೆಸ್‌ ಲೆವೆಲ್‌ ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8200 4nm ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಜೊತೆಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಹಾಗೂ 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಪಡೆದಿದೆ.

ಅಲ್ಲದೇ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಇದ್ದು, ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ನಲ್ಲಿ ಇದೆ. ಹಾಗೆಯೇ 50 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮರಾವನ್ನು ಒಳಗೊಂಡಿದೆ. ಇದರ ಜೊತೆಗೆ 5000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ.

ಐಕ್ಯೂ 12 ಫೋನ್‌

ಐಕ್ಯೂ 12 ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1,260 x 2,800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ ಸ್ನಾಪ್‌ಡ್ರಾಗನ್‌ 8 ಜೆನ್‌ 3 SoC ಪ್ರೊಸೆಸರ್‌ ಪವರ್‌ ಒಳಗೊಂಡಿದ್ದು, ಇದು ಆಂಡ್ರಾಯ್ಡ್‌ 14 ಓಎಸ್‌ ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಇದು 512GB ಸ್ಟೋರೇಜ್ ಆಯ್ಕೆ ಸಹ ಪಡೆದಿದೆ.

ಅಲ್ಲದೇ ಈ ಫೋನ್‌ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಇದರೊಂದಿಗೆ ಈ ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಅನ್ನು ಪಡೆದಿದ್ದು, ಇದು ಸೂಪರ್ ಫಾಸ್ಟ್ 120W ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.

ಒನ್‌ಪ್ಲಸ್‌ 12 ಸ್ಮಾರ್ಟ್‌ಫೋನ್‌

ಒನ್‌ಪ್ಲಸ್‌ 12 ಮೊಬೈಲ್‌ 6.82 ಇಂಚಿನ QHD+ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇಯು 1440 x 3168 ಪಿಕ್ಸೆಲ್‌ ಸ್ಕ್ರೀನ್‌ ಸೂಪರ್ ಕ್ರಿಸ್ಪ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದಿದೆ. ಅಲ್ಲದೇ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ 8 ಜೆನ್‌ 3 SoC ಪ್ರೊಸೆಸರ್‌ ಪವರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 14 ಓಎಸ್‌ ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 12GB RAM + 256GB ಹಾಗೂ 16GB RAM + 512GB ಸ್ಟೋರೇಜ್‌ ಆಯ್ಕೆಗಳನ್ನು ಪಡೆದಿದೆ.

ಇದರೊಂದಿಗೆ ಈ ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ 5400mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಇದು 100W ಸೂಪರ್‌ವೂಕ್‌ ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡುತ್ತದೆ.

Best Mobiles in India

English summary
Best 512GB Internal Memory Smartphones in India 2024. check phones list and specifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+